ಕರಾವಳಿ

ಉಪ್ಪುಂದ: ಚಿನ್ನ ದರೋಡೆ ಪ್ರಕರಣ; ತೀವ್ರಗೊಂಡ ತನಿಖೆ

Pinterest LinkedIn Tumblr

Byndooru_Jewells_robbary

ಕುಂದಾಪುರ: ಉಪ್ಪ್ಪುಂದ ಅಂಬಾಗಿಲು ಎಂಬಲ್ಲಿ ಚಿನ್ನದಂಗಡಿ ಮಾಲೀಕನ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶೇಷ ಪೊಲೀಸ್ ತಂಡ ಮುಂಬಯಿನತ್ತ ಪಯಣ ಬೆಳೆಸಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರನ್ನು ಬಂಧಿಸಿರುವ ಕುಂದಾಪುರ ಮತ್ತು ಬೈಂದೂರು ಜಂಟಿ ಪೊಲೀಸ್ ತಂಡ ಪ್ರಮುಖ ಆರೋಪಿ ರವಿ ಜತ್ತನ್ ಎಂಬಾತನಿಗಾಗಿ ವ್ಯಾಪಕ ಶೋಧ ಕಾರ್ಯ ನಡೆಸುತ್ತಿದೆ.

ಬಂಧಿತ ಆರೋಪಿಗಳ ಪೈಕಿ ಶಿವಪ್ರಕಾಶ್ ರಿಪ್ಪನ್‌ಪೇಟೆ, ಚಂದ್ರಹಾಸ ನಿಟ್ಟೂರು ಉಡುಪಿ ಹಾಗೂ ಪ್ರದೀಪ್ ಪೂಜಾರಿ ಹಿರ್ಗಾಳ ಕಾರ್ಕಳ ಎಂಬವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು ನ್ಯಾಯಾಲಯ 15 ದಿನದ ನ್ಯಾಯಾಂಗ ಬಂಧನ ವಿಧಿಸಿದೆ

ಇವರ ಪೈಕಿ ದುರ್ಗಾದಾಸ್ ನಿಟ್ಟೂರು ಉಡುಪಿ ಎಂಬಾತನನ್ನು ತೀವ್ರ ವಿಚಾರಣೆಗೊಳಪಡಿಸಿರುವ ಪೊಲೀಸರು ಆತನಿಂದ ಸಿಕ್ಕ ಕೆಲವೊಂದು ಮಾಹಿತಿಯ ಮೇರೆಗೆ ಪೊಲೀಸ್ ತಂಡ ಮುಂಬಯಿಗೆ ಪಯಣ ಬೆಳೆಸಿದೆ. ಸದ್ಯ ಆರೋಪಿ ದುರ್ಗಾದಾಸ್ ಪೊಲೀಸ್ ಕಸ್ಟಡಿಯಲ್ಲಿದ್ದು ತೀವ್ರ ವಿಚಾರಣೆ ನಡೆಸಲಾಗುತ್ತಿದೆ.

Write A Comment