ಕರಾವಳಿ

ಹಿರಿಯ ಪತ್ರಕರ್ತ ಎಂ.ವಿ. ಕಾಮತ್ ನಿಧನ

Pinterest LinkedIn Tumblr

M.V. Kamath

ಉಡುಪಿ: ಹಿರಿಯ ಪತ್ರಕರ್ತ ಪ್ರಸಾರ ಭಾರತಿ ಮಾಜಿ ಅಧ್ಯಕ್ಷ ಎಂ.ವಿ ಕಾಮತ್(93) ಅವರು ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಯಲ್ಲಿ ಗುರುವಾರ ನಿಧನಹೊಂದಿದ್ದಾರೆ.

1921 ರಂದು ಉಡುಪಿಯಲ್ಲಿ ಜನಿಸಿದ ಅವರು, ಭೌತಶಾಸ್ತ್ರ ಹಾಗೂ ರಾಸಯನಶಾಸ್ತ್ರ ವಿಷಯದಲ್ಲಿ ಬಿಎಸ್ಸಿ ಪದವಿಯನ್ನು ಪೂರ್ಣಗೊಳಿಸಿದರು. ಪ್ರಾರಂಭದ ಐದು ವರ್ಷಗಳ ಕಾಲ ರಾಸಯನಶಾಸ್ತ್ರ ಕ್ಷೇತ್ರದಲ್ಲಿ ತಮ್ಮ ಸೇವೆಯನ್ನು ಸಲ್ಲಿಸಿದರು.

ಅಮೆರಿಕದ ನ್ಯೂಯಾರ್ಕ್ ನಗರದಲ್ಲಿ ವಿಶ್ವಸಂಸ್ಥೆಯ ವರದಿ ಮಾಡಲು ಪಿ.ಟಿ.ಐ ವರದಿಗಾರರಾಗಿ ಸನ್, 1955 ರಿಂದ 1958 ರ ವರೆಗೆ ನೇಮಕಗೊಂಡಿದ್ದರು. ಆಸಮಯದಲ್ಲಿ ಪ್ರಮುಖ ಅಂತಾರಾಷ್ಟ್ರೀಯ ಸುದ್ದಿಗಳನ್ನು ವರದಿಮಾಡಿ ಸೈ ಎನ್ನಿಸಿಕೊಂಡರು. ಕಾಮತರು ಭಾರತದ ಪತ್ರಿಕೋದ್ಯಮದಲ್ಲಿ ಭಾರಿ ಹೆಸರುಮಾಡಿದ್ದಾರೆ. ನಂತರ ‘ಟೈಮ್ಸ್ ಆಫ್ ಇಂಡಿಯ’, ಪತ್ರಿಕೆಯ ವಾಷಿಂಗ್‍ಟನ್ ನಗರದಲ್ಲಿ ಭಾರತದ ಪ್ರತಿನಿಧಿಯಾಗಿ, ಸುಮಾರು 10 ವರ್ಷಗಳು (1969-78) ದುಡಿದರು. ಅಮೆರಿಕದಿಂದ ವಾಪಸ್ಸಾದ ಮೇಲೆ, ‘ಟೈಮ್ಸ್ ಆಫ್ ಇಂಡಿಯ’ ಪತ್ರಿಕೆಯ ‘ಪ್ರಖ್ಯಾತ ವೀಕ್ಲಿ’ ಪತ್ರಿಕೆಯಾಗಿದ್ದ, ‘ಇಲ್ಲಸ್ಟ್ರೇಟೆಡ್ ವೀಕ್ಲಿ ಆಫ್ ಇಂಡಿಯಾ’ನಲ್ಲಿ ಸಂಪಾದಕರಾಗಿದ್ದರು. ಭಾರತ ದೇಶದ ಸಾಮಾಜಿಕ ಸಮಸ್ಯೆಗಳನ್ನೂ ಹಾಗೂ ಅನೇಕ ವಿಷಯಗಳನ್ನು ಆರಿಸಿಕೊಂಡು ಪುಸ್ತಕಗಲನ್ನು ರಚಿಸಿದ್ದಾರೆ. ಕಾಮತರು ಅತ್ಯಂತ ಪ್ರಭಾವಿ ಮಾತುಗಾರರು.

ನಂತರದಲ್ಲಿ ಮಾಧ್ಯಮ ಕ್ಷೇತ್ರದತ್ತ ಒಲವು ತೋರಿಸಿ ಪ್ರಾರಂಭದ ಎರಡು ವರ್ಷಗಳ ಕಾಲ “ದಿ ಸನ್‌ಡೇ ಟೈಮ್ಸ್‌ ” (1967-69)ಪತ್ರಿಕೆ ಸಂಪದಾಕರಾಗಿ ಸೇವೆ ಸಲ್ಲಿಸಿದ್ದರು.

ಪತ್ರಿಕಾ ರಂಗದಲ್ಲಿ ನಾಲ್ಕು ದಶಕಗಳಿಗೂ ಹೆಚ್ಚಿನ ಕಾಲ ಸೇವೆ ಸಲ್ಲಿಸಿರುವ ಇವರು ತಮ್ಮ ಆತ್ಮಚರಿತ್ರೆ A Reporter at Large ಸೇರಿದಂತೆ 40ಕ್ಕೂ ಹೆಚ್ಚು ಪುಸ್ತಕಗಳನ್ನು ರಚಿಸಿದ್ದಾರೆ. `ನರೇಂದ್ರ ಮೋದಿ- ದ ಆರ್ಕಿಟೆಕ್ಟ್ ಆಫ್ ಎ ಮಡರ್ನ್ ಸ್ಟೇಟ್’ ಇವರ ಇತ್ತೀಚಿನ ಪುಸ್ತಕವಾಗಿತ್ತು.
ಇವರ ಅನನ್ಯ ಸೇವೆಯನ್ನು ಗಮನಿಸಿ ಕೇಂದ್ರ ಸರಕಾರವು “ಪದ್ಮ ಭೂಷಣ” ಪ್ರಶಸ್ತಿಯನ್ನು ನೀಡಿ ಗೌರವಿಸಿದೆ.

Write A Comment