ಕರಾವಳಿ

ಪತ್ರಿಕೆಗಳು ಸಮಾಜವನ್ನು ಒಗ್ಗೂಡಿಸಬೇಕು ಹೊರತು ವಿಭಜಿಸಬಾರದು: ಜಯಕರ ಸುವರ್ಣ

Pinterest LinkedIn Tumblr

ಕುಂದಾಪುರ: ಬ್ರಹ್ಮಾವರ ವಲಯ ಕಾರ್‍ಯನಿರತ ಪತ್ರಕರ್ತರ ಸಂಘದ ವತಿಯಿಂದ, ಬ್ರಹ್ಮಾವರ ವಲಯ ಛಾಯಗ್ರಾಹಕ ಸಂಘದ ಸಹಕಾರದೊಂದಿಗೆ, ಕೋಟ ಕಾರಂತ ಥೀಂ ಪಾರ್ಕನಲ್ಲಿ, ಕೋಟತಟ್ಟು ಗ್ರಾ.ಪಂ., ಡಾ.ಶಿವರಾಮ ಕಾರಂತ ಟ್ರಸ್ಟ್ ಮತ್ತು ಅನೇಕ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ನಡೆಯುತ್ತಿರುವ ಕಾರಂತ ಹುಟ್ಟೂರು ಪ್ರಶಸ್ತಿ ಪ್ರಧಾನ ಕಾರ್ಯಕ್ರಮದಲ್ಲಿ ಅ.೮ರಂದು ಪತ್ರಿಕಾ ತರಬೇತಿ ಕಾರ್‍ಯಗಾರ ಜರುಗಿತು.

Kota_Karantha_Bhavana
ಉಡುಪಿ ಜಿಲ್ಲಾ ಕಾರ್‍ಯನಿರತ ಪತ್ರರ್ಕತರ ಸಂಘದ ಅಧ್ಯಕ್ಷ ಜಯಕರ ಸುವರ್ಣ ಕಾರ್ಯಕ್ರಮ ಉದ್ಘಾಟಿಸಿ, ಪತ್ರಿಕಾರಂಗಕ್ಕೆ ವಿಶಿಷ್ಠವಾದ ಶಕ್ತಿ ಇದ್ದು, ಪತ್ರಿಕೆಗಳು ಸಮಾಜವನ್ನು ಒಗ್ಗೂಡಿಸುವ ಕಾರ್‍ಯ ಮಾಡಬೇಕೆ ಹೊರತು, ವಿಭಜಿಸುವ ಕಾರ್‍ಯ ಮಾಡಬಾರದು ಎಂದರು.

ಕೋಟತಟ್ಟು ಗ್ರಾ.ಪಂ ಅಧ್ಯಕ್ಷೆ ಶೋಭ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಸಂಪನ್ಮೂಲ ವ್ಯಕ್ತಿ ಕರಾವಳಿ ಮುಂಜಾವು ಪತ್ರಿಕೆಯ ವ್ಯವಸ್ಥಾಪಕ ಸಂಪಾದಕ ಗಂಗಾಧರ ಹೆರೆಗುತ್ತಿ ಮಾತನಾಡಿ, ಪತ್ರಕರ್ತ ಯಾವುದೇ ಅವ್ಯವಹಾರಗಳಿಗೆ ಸಿಲುಕದೆ ಪ್ರಮಾಣಿಕವಾಗಿ ಕಾರ್‍ಯ ನಿರ್ವಹಿಸಬೇಕು ಹಾಗೂ ಲಾಭದ ದೃಷ್ಟಿಯಿಂದ ಪ್ರತಿಕೋದ್ಯಮಕ್ಕೆ ಬರಬಾರದು ಎಂದರು.

ಮುಖ್ಯ ಅತಿಥಿ ಪತ್ರಕರ್ತ ಶೇಖರ ಅಜೆಕಾರು ವಿದ್ಯಾರ್ಥಿಗಳೊಂದಿಗೆ ಪತ್ರಿಕೋದ್ಯಮ ಪ್ರವೇಶ ಹಾಗೂ ಪತ್ರಕರ್ತರ ಸವಾಲುಗಳ ಕುರಿತು ಸಂವಾದ ನಡೆಸಿದರು.
ಈ ಸಂದರ್ಭದಲ್ಲಿ ಬ್ರಹ್ಮಾವರ ವಲಯ ಕಾರ್‍ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಪ್ರಭಾಕರ ಆಚಾರ್ಯ ಹಾಗೂ ಬ್ರಹ್ಮಾವರ ವಲಯ ಛಾಯಗ್ರಾಹಕ ಸಂಘದ ಉಪಾಧ್ಯಕ್ಷ ರವಿ ಕುಮಾರ್ ಅವರನ್ನು ಗೌರವಿಸಲಾಯಿತು.

ಕುಂದಾಪುರ ತಾಲೂಕು ಪರ್ತಕರ್ತರ ಸಂಘದ ಅಧ್ಯಕ್ಷ ಶಶಿಧರ ಹೆಮ್ಮಾಡಿ,ಕೋಟತಟ್ಟು ಗ್ರಾ.ಪಂ ಅಭಿವೃದ್ಧಿ ಅಧಿಕಾರಿ ಜಯರಾಮ್ ಶೆಟ್ಟಿ, ಪರ್ತಕರ್ತ ಶೇಷಗಿರಿ ಭಟ್, ಪ್ರವೀಣ ಮುದ್ದೂರು, ಬಂಡಿಮಠ ಶಿವರಾಮ ಆಚಾರ್‍ಯ, ರವೀಂದ್ರ ಕೋಟ, ರಾಜೇಶ ಗಾಣಿಗ ಅಚ್ಲಾಡಿ ಉಪಸ್ಥಿತರಿದ್ದರು.

ಬ್ರಹ್ಮಾವರ ವಲಯ ಪತ್ರಕರ್ತರ ಸಂಘದ ಕಾರ್ಯದರ್ಶಿ ಅಶ್ವಥ ಆಚಾರ್‍ಯ ಸ್ವಾಗತಿಸಿ, ವಸಂತ್ ಗಿಳಿಯಾರು ಕಾರ್ಯಕ್ರಮ ನಿರೂಪಿಸಿ, ಚಂದ್ರಶೇಖರ ಬೀಜಾಡಿ ವಂದಿಸಿ, ಕಾರ್ಯದರ್ಶಿ ನರೇಂದ್ರ ಕುಮಾರ್ ಕೋಟ ಸಹಕರಿಸಿದರು.

Write A Comment