ಕರಾವಳಿ

ಮನಪಾದಲ್ಲಿ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿದ ಸಚಿವ ಸೊರಕೆ.

Pinterest LinkedIn Tumblr

mcc_soarake_photo_1

ಮಂಗಳೂರು, ಅ.7: ಗ್ರಾಮಾಂತರ ಪ್ರದೇಶದಲ್ಲಿ ಭೂ ಪರಿವರ್ತನೆಗಾಗಿ 94ಸಿ ಕಾನೂನು ಅನುಷ್ಠಾನಕ್ಕೆ ಬಂದಿ ರುವಂತೆ ನಗರ ಪ್ರದೇಶದಲ್ಲಿ ಶೀಘ್ರವೇ 94 ಸಿಸಿ ಕಾನೂನು ಅನು ಷ್ಠಾನಗೊಳ್ಳಲಿದೆ ಎಂದು ರಾಜ್ಯ ನಗರಾಭಿವೃದ್ಧಿ ಖಾತೆ ಸಚಿವ ವಿನಯ ಕುಮಾರ್ ಸೊರಕೆ ಹೇಳಿದ್ದಾರೆ.

mcc_soarake_photo_2 mcc_soarake_photo_3 mcc_soarake_photo_4

ಮಂಗಳೂರು ಮಹಾನಗರ ಪಾಲಿಕೆ ಸಭಾಂಗಣದಲ್ಲಿ ಮಂಗಳವಾರ ಸಾರ್ವ ಜನಿಕರ ಅಹವಾಲು ಸ್ವೀಕರಿಸಿ ಅವರು ಮಾತನಾಡುತ್ತಿದ್ದರು.ರಾಜ್ಯದ ವಿವಿಧ ಮಹಾನಗರ ಪಾಲಿಕೆ ಗಳಲ್ಲಿ ಮಂಜೂರಾದ ಹುದ್ದೆಗಳಿಗಷ್ಟೇ ಸಿಬ್ಬಂದಿ ನೇಮಕಾತಿ ಮಾಡಲು ಸರಕಾರ ನಿರ್ಧರಿಸಿದೆ. ಅದರಂತೆ 1 ಸಾವಿರ ಪೌರಕಾರ್ಮಿಕರ ಸಹಿತ 3,500 ಸಿಬ್ಬಂದಿಯನ್ನು 3 ತಿಂಗಳೊಳಗೆ ನೇಮಕ ಮಾಡಲಾಗುವುದು ಎಂದು ಸಚಿವ ಸೊರಕೆ ತಿಳಿಸಿದರು.
ರಾಜ್ಯದ ಪಾಲಿಕೆಗಳಲ್ಲಿ 5,840 ಹುದ್ದೆಗಳ ಕೊರತೆ ಇದೆ. ಈ ಪೈಕಿ ಎ.ಬಿ.ಸಿ.ಡಿ. ವರ್ಗದ 2,500 ಸಿಬ್ಬಂದಿ ಹಾಗೂ 1,000 ಪೌರ ಕಾರ್ಮಿಕ ರನ್ನು ನೇಮಿಸಲಾಗುವುದು. ಪೌರ ಕಾರ್ಮಿಕರ ನೇಮಕಾತಿಗೆ ಸಂಪುಟ ಸಭೆ ಅನುಮತಿ ನೀಡಿದ್ದು, ಇತರ ಸಿಬ್ಬಂ ದಿಯ ನೇಮಕಕ್ಕೆ ಆರ್ಥಿಕ ಇಲಾಖೆ ಅನುಮತಿ ನೀಡಿದೆ ಎಂದು ಅವರು ಹೇಳಿದರು. ವಾರ್ಡ್ ಸಮಿತಿಗೆ ಸೂಚನೆ: ಮಂಗಳೂರು ಸಹಿತ ರಾಜ್ಯದ ಎಲ್ಲಾ ಪಾಲಿಕೆಗಳಲ್ಲಿ 1 ತಿಂಗಳೊಳಗೆ ವಾರ್ಡ್ ಸಮಿತಿಗಳನ್ನು ರಚಿಸಲು ಸೂಚಿಸಿದ ಸಚಿವ ಸೊರಕೆ, ಸಿಟಿಝನ್ ಫೋರಂ ಅನ್ನು ಕೂಡ ಸ್ಥಾಪಿಸಬೇಕು ಎಂದು ತಿಳಿಸಿದರು.

mcc_soarake_photo_5 mcc_soarake_photo_6 mcc_soarake_photo_7

ಅಕ್ರಮ ಕಟ್ಟಡ: ಪಾಲಿಕೆ ವ್ಯಾಪ್ತಿಯಲ್ಲಿ 168 ಕಟ್ಟಡಗಳು ಅಕ್ರಮವಾಗಿ ನಿರ್ಮಿಸಿದ ಬಗ್ಗೆ ವಿಚಾರಣೆ ನಡೆಸಿದ್ದ ಹಿಂದಿನ ಆಯುಕ್ತ ಹರೀಶ್‌ಕುಮಾರ್ ಕ್ರಮಕ್ಕೆ ಶಿಾರಸು ಮಾಡಿದ್ದರೂ ಅನುಷ್ಠಾನಗೊಂಡಿಲ್ಲ ಎಂದು ಸಾಮಾ ಜಿಕ ಕಾರ್ಯಕರ್ತ ಹನುಮಂತ ಕಾಮತ್ ಸಚಿವರ ಗಮನ ಸೆಳೆದರು. ಇದಕ್ಕೆ ಸ್ಪಂದಿಸಿದ ಸಚಿವರು ಈ ಬಗ್ಗೆ ಅಧಿಕಾರಿಗಳಲ್ಲಿ ಪ್ರಶ್ನಿಸಿದರು. ಕೆಲವರು ನ್ಯಾಯಾಲಯಕ್ಕೆ ತೆರಳಿ ತಡೆಯಾಜ್ಞೆ ತಂದ ಕಾರಣ ಕ್ರಮಕ್ಕೆ ವಿಳಂಬವಾಗಿದೆ ಎಂದು ಅಧಿಕಾರಿಗಳು ಉತ್ತರಿಸಿದರು.

Write A Comment