ಕರಾವಳಿ

ತ್ಯಾಗ, ಬಲಿದಾನದ ಸಂಕೇತ : ಕರಾವಳಿಯಾದ್ಯಂತ ಬಕ್ರೀದ್ ಸಂಭ್ರಮ

Pinterest LinkedIn Tumblr

Bakrid_acarane_pics_1

ಮಂಗಳೂರು, ಅ.5: ತ್ಯಾಗ, ಬಲಿದಾನದ ಸಂಕೇತವಾದ ಪವಿತ್ರ ಈದುಲ್ ಅಝ್‌ಹಾ (ಬಕ್ರೀದ್ ಹಬ್ಬ)ವನ್ನು ರವಿವಾರ ಮುಸ್ಲಿಮರು ಕರಾವಳಿಯಾದ್ಯಂತ ಸಂಭ್ರಮದಿಂದ ಆಚರಿಸಿದರು.

ನಗರದ ಬಾವುಟಗುಡ್ಡೆಯ ಈದ್ಗಾ ಮಸ್ಜಿದ್‌ನಲ್ಲಿ ಬೆಳಗ್ಗೆ 8 ಗಂಟೆಗೆ ದ.ಕ.ಜಿಲ್ಲಾ ಖಾಝಿ ತ್ವಾಕ ಅಹ್ಮದ್ ಮುಸ್ಲಿಯಾರ್‌ರ ನೇತೃತ್ವದಲ್ಲಿ ಈದುಲ್ ಅಝ್‌ಹಾ ನಮಾಝ್ ಮತ್ತು ಖುತುಬಾ ಪಾರಾಯಣ ನಡೆಯಿತು. ಬಳಿಕ ಜಿಲ್ಲೆಯ ವಿವಿಧೆಡೆಯಿಂದ ಆಗಮಿಸಿದ ಮುಸ್ಲಿಂ ಭಾಂಧವರು ಸಾಮೂಹಿಕ ನಮಾಜ್‌ ನಲ್ಲಿ ಪಾಲ್ಗೊಂಡು ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡರು.

Bakrid_acarane_pics_2 Bakrid_acarane_pics_3 Bakrid_acarane_pics_4 Bakrid_acarane_pics_5 Bakrid_acarane_pics_6 Bakrid_acarane_pics_7 Bakrid_acarane_pics_8 Bakrid_acarane_pics_9 Bakrid_acarane_pics_10 Bakrid_acarane_pics_11 Bakrid_acarane_pics_12 Bakrid_acarane_pics_13 Bakrid_acarane_pics_14 Bakrid_acarane_pics_15

ಉಳ್ಳಾಲ ಕೇಂದ್ರ ಜುಮಾ ಮಸ್ಜಿದ್‌ನಲ್ಲಿ ಬೆಳಗ್ಗೆ 9 ಗಂಟೆಗೆ ಉಳ್ಳಾಲ ಜುಮಾ ಮಸೀದಿಯ ಖತೀಬ್ ಹಾಜಿ ಅಬ್ದುರ್ರವೂಫ್ ಮುಸ್ಲಿಯಾರ್‌ರ ನೇತೃತ್ವದಲ್ಲಿ ಈದುಲ್ ಅಝ್‌ಹಾ ನಮಾಝ್ ಮತ್ತು ಖುತ್ಬಾ ಪಾರಾಯಣ ನಡೆಯಿತು.

ಹಿಂದೆ ದೇವರ ಆಜ್ಞೆಯ ಮೇರೆಗೆ ಪ್ರವಾದಿ ಇಬ್ರಾಹಿಂರು ತನ್ನ ಮಗನನ್ನೇ ದೇವರಿಗೆ ಬಲಿ ನೀಡಲು ಮುಂದಾದ ಹಿನ್ನಲೆಯಲ್ಲಿ ಬಕ್ರೀದ್‌ ಹಬ್ಬ ಮಹತ್ವ ಪಡೆದುಕೊಂಡಿದೆ. ಎಲ್ಲೆಡೆ ತ್ಯಾಗದ ಸಂಕೇತವಾಗಿ (ಕುರಿ, ಆಡು ) ಪ್ರಾಣಿ ಬಲಿ ನೀಡಲಾಗುತ್ತಿದೆ.

ಮೂಡುಬಿದಿರೆ ಅಲ್-ಫುರ್ಖಾನ್ ಸೆಂಟರ್‌ನಲ್ಲಿ ಬೆಳಗ್ಗೆ 7:15ಕ್ಕೆ ಈದ್ ನಮಾಝ್ ನಡೆಯಿತು. ಇಲ್ಲಿ ಮಹಿಳೆಯರಿಗೆ ಪ್ರತ್ಯೇಕ ವ್ಯವಸ್ಥೆ ಕಲ್ಪಿಸಲಾಗಿತ್ತು.

Write A Comment