ಕರಾವಳಿ

ತ್ಯಾಗ ಬಲಿದಾನದ ಸಂಕೇತ ಬಕ್ರೀದ್ ಹಬ್ಬ ; ಕುಂದಾಪುರದಲ್ಲಿ ಸಂಭ್ರಮದ ಆಚರಣೆ

Pinterest LinkedIn Tumblr

ಕುಂದಾಪುರ: ಕುಂದಾಪರದಲ್ಲಿ ಮುಸ್ಲಿಮ್ ಬಾಂಧವರು ತ್ಯಾಗ ಬಲಿದಾನದ ಪವಿತ್ರ ಹಬ್ಬವಾದ ಈದುಲ್ ಝಹಾ (ಬಕ್ರೀದ್) ನ್ನು ಸಂಭ್ರಮದಿಂದ ಆಚರಿಸಿದರು.

Kundapura_Bakrid-Celebration (16) Kundapura_Bakrid-Celebration Kundapura_Bakrid-Celebration (2) Kundapura_Bakrid-Celebration (1) Kundapura_Bakrid-Celebration (7) Kundapura_Bakrid-Celebration (3) Kundapura_Bakrid-Celebration (4) Kundapura_Bakrid-Celebration (6) Kundapura_Bakrid-Celebration (8) Kundapura_Bakrid-Celebration (5) Kundapura_Bakrid-Celebration (9) Kundapura_Bakrid-Celebration (11) Kundapura_Bakrid-Celebration (12) Kundapura_Bakrid-Celebration (13) Kundapura_Bakrid-Celebration (10)

ಬೆಳಿಗ್ಗೆ ಕುಂದಾಪುರ ಜಾಮಿಯಾ ಮಸೀದಿಯಲ್ಲಿ ಖತೀಬರಾದ ಮೌಲಾನ ಅಬ್ದುಲ್ ರಹೀಮ್ ಅವರು ಈದ್ ನಮಾಝನ್ನು ನೆರವೇರಿಸಿ ಬಕ್ರೀದ್ ಹಬ್ಬದ ತ್ಯಾಗ ಬಲಿದಾನದ ಪವಿತ್ರ ಸಂದೇಶವನ್ನು ಸಾರಿದರು ಸಕಲ ಮಾನವ ಕುಲದ ಒಳಿತಿಗಾಗಿ ಅಲ್ಲಾಹುವಿನಲ್ಲಿ ದುವಾದಲ್ಲಿ ಪ್ರಾರ್ಥಿಸಿದರು.

ಪರಸ್ಪರ ಅಪ್ಪಿಕೊಳ್ಳುವ ಮೂಲಕ ಹಬ್ಬದ ಶಭಾಶಯಗಳನ್ನು ಈ ಸಂದರ್ಭದಲ್ಲಿ ವಿನಿಮಯಿಸಿಕೊಂಡ ಜಮಾತ್ ಬಾಂಧವರು ಜುಲೂಸಿಲ್ಲಿ ನಗರದ ಪ್ರಮುಖ ಬೀದಿಗಳ ಮೂಲಕ ಸಾಗಿ ಈದ್ಗಾ ಮೈದಾನದಲ್ಲಿ ದುವಾ ನೆರವೇರಿಸಿದರು.

ಜಮಾತಿನ ಅಧ್ಯಕ್ಷರಾದ ಅಬ್ದಲ್ ರಝಾಕ್, ಜಿಲ್ಲಾ ವಕ್ಫ್ ಬೋರ್ಡ್‌ನ ಸಲಹಾ ಸಮಿತಿ ಸದಸ್ಯರಾದ ಹಾಜಿ ಅಬ್ದುಲ್ ಖಾದರ್, ಮಾಜಿ ಪುರಸಭಾ ಅಧ್ಯಕ್ಷ ಬಿ. ಹಾರೂನ್ ಸಾಹೇಬ್, ಸಾಮಾಜಿಕ ಧುರೀಣ ಮುಜಾವರ್ ಅಬ್ಬು, ಇಮ್ತಿಯಾಝ್ ಏ.ಕೆ., ಸ್ಭೆರಿದಂತೆ ಮುಂತಾದ ಮುಸ್ಲಿಮ್ ಗಣ್ಯರು ಹಬ್ಬದ ಶುಭಾಶಯ ಕೋರಿದ್ದಾರೆ.

Write A Comment