ಕರಾವಳಿ

ಕುದ್ರೋಳಿ “ಮಂಗಳೂರು ದಸರಾ” ಮಹೋತ್ಸವಕ್ಕೆ ವೈಭವದ ತೆರೆ : ಶ್ರೀ ಮಹಾಗಣಪತಿ, ಶಾರದೆ, ನವದುರ್ಗೆಯರ ವಿಗ್ರಹ ಶ್ರೀ ಕ್ಷೇತ್ರದ ಪುಷ್ಕರಣಿಯಲ್ಲಿ ಸಂಪನ್ನ

Pinterest LinkedIn Tumblr

Kudroli_dasara_End_1

(ಶ್ರೀ ಶಾರದಾ ಮಾತೆ ಮತ್ತು ನವದುರ್ಗೆಯರ ಶೋಭಾಯಾತ್ರೆ ಹಾಗೂ ವಿಸರ್ಜನೆಯ 60ಕ್ಕೂ ಹೆಚ್ಚು ವಿಶೇಷ ಚಿತ್ರಗಳನ್ನು ನೋಡಲು ಮರೆಯದಿರಿ)

ಮಂಗಳೂರು,ಅ.05: ಕುದ್ರೋಳಿ ಶ್ರೀಗೋಕರ್ಣನಾಥ ದೇವಸ್ಥಾನದಲ್ಲಿ ಮಂಗಳೂರು ದಸರಾ ಹಾಗೂ ನವರಾತ್ರಿ ಮಹೋತ್ಸವದ ಸಡಗರದೊಂದಿಗೆ ಪೂಜಿಸಲ್ಪಟ್ಟ ಶ್ರೀ ಗಣಪತಿ, ಶ್ರೀ ಶಾರದೆ ಮಾತೆ ಸಹಿತ ನವದುರ್ಗೆಯರ ವಿಗ್ರಹಗಳ ಭವ್ಯ ಶೋಭಾಯಾತ್ರೆಯು ಶನಿವಾರ ಸಂಜೆ ಶ್ರೀ ಕ್ಷೇತ್ರದ ನವೀಕರಣದ ಮತ್ತು ಮಂಗಳೂರು ದಸರಾ ರೂವಾರಿ, ಮಾಜಿ ಕೇಂದ್ರ ಸಚಿವ ಬಿ. ಜನಾರ್ದನ ಪೂಜಾರಿ ಅವರ ನೇತೃತ್ವದಲ್ಲಿ ಬಹಳ ವೈಭವದಿಂದ ಜರಗಿತು.

Kudroli_dasara_End_8 Kudroli_dasara_End_9 Kudroli_dasara_End_10

Kudroli_dasara_End_2 Kudroli_dasara_End_4

Kudroli_dasara_End_3a

ಸಾಲು ಸಾಲು ಬಣ್ಣದ ಕೊಡೆಗಳು, ಕಿವಿಗಡಚಿಕ್ಕುವ ಚೆಂಡೆ ವಾದನ, ನಾಸಿಕ್ ಬ್ಯಾಂಡ್ ಅಬ್ಬರ, ಭಜನಾ ತಂಡಗಳ ಶಿಸ್ತುಬದ್ಧ ಕುಣಿತ, ಕೋಲಾಟ, ವೀರಗಾಸೆ, ಕಂಸಾಳೆ , ಡೋಲು, ಜಾಗಟೆ, ಕೊಂಬು, ಕಹಳೆಯ ನಿನಾದ, ಮುಗಿಲು ಮುಟ್ಟಿದ ಭಕ್ತರ ಜಯಘೋಷ, ವೈವಿಧ್ಯಮಯ ನೃತ್ಯ, ಅಲ್ಲಲ್ಲಿ ಸಂಗೀತದ ರಸದೌತಣ, ಸುಡುಮದ್ದುಗಳ ಸುರಿಮಳೆ, ಬಣ್ಣ ಬಣ್ಣದ ಲೋಕದ ಮೂಲಕ ಶ್ರೀ ಮಹಾಗಣಪತಿ, ಶ್ರೀ ಶಾರದಾ ಮಾತೆ, ಆದಿಶಕ್ತಿ, ಶೈಲಪುತ್ರಿ, ಬ್ರಹ್ಮಚಾರಿಣಿ, ಚಂದ್ರಘಂಟ, ಕೂಷ್ಮಾಂಡಿನಿ, ಸ್ಕಂದ ಮಾತಾ, ಕಾತ್ಯಾಯಿನಿ, ಮಹಾಕಾಳಿ, ಮಹಾಗೌರಿ, ಸಿದ್ಧಿದಾತ್ರಿ, ಶ್ರೀ ಕ್ಷೇತ್ರದ ವಿಶಿಷ್ಟ ಪರಂಪರೆಯಾದ ನವದುರ್ಗೆಯರ ಶೋಭಾಯಾತ್ರೆಯು ಶ್ರೀ ಕ್ಷೇತ್ರದಿಂದ ಪ್ರಾರಂಭವಾಗಿ ಮಣ್ಣಗುಡ್ಡೆ, ಲೇಡಿಹಿಲ್, ಲಾಲ್‌ಬಾಗ್, ಬಲ್ಲಾಳ್‌ಬಾಗ್, ಎಂಜಿ ರಸ್ತೆ, ಕೆ‌ಎಸ್‌ರಾವ್ ರಸ್ತೆ, ಹಂಪನಕಟ್ಟೆ, ಜಿ‌ಎಚ್‌ಎಸ್ ರಸ್ತೆ , ಶ್ರೀ ವೆಂಕಟರಮಣ ದೇವಸ್ಥಾನದ ಮುಂಭಾಗದಿಂದ ಕಾರ್‌ಸ್ಟ್ರೀಟ್ ಚಿತ್ರಾ ಮೂಲಕ ಸಾಗಿ ರವಿವಾರ ಮುಂಜಾನೆ ಶ್ರೀ ಕ್ಷೇತ್ರದ ಪುಷ್ಕರಣಿಯಲ್ಲಿ ಸಂಪನ್ನಗೊಂಡಿತ್ತು.

Kudroli_dasara_End_11 Kudroli_dasara_End_12 Kudroli_dasara_End_13 Kudroli_dasara_End_14

Kudroli_dasara_End_5 Kudroli_dasara_End_6 Kudroli_dasara_End_7

Kudroli_dasara_End_15 Kudroli_dasara_End_16 Kudroli_dasara_End_17 Kudroli_dasara_End_18 Kudroli_dasara_End_19 Kudroli_dasara_End_20 Kudroli_dasara_End_21 Kudroli_dasara_End_22 Kudroli_dasara_End_23 Kudroli_dasara_End_24 Kudroli_dasara_End_25 Kudroli_dasara_End_26 Kudroli_dasara_End_27 Kudroli_dasara_End_28 Kudroli_dasara_End_29

Kudroli_dasara_End_29 Kudroli_dasara_End_30 Kudroli_dasara_End_31 Kudroli_dasara_End_32 Kudroli_dasara_End_33 Kudroli_dasara_End_34 Kudroli_dasara_End_35 Kudroli_dasara_End_36 Kudroli_dasara_End_37 Kudroli_dasara_End_38 Kudroli_dasara_End_39 Kudroli_dasara_End_40 Kudroli_dasara_End_41 Kudroli_dasara_End_42 Kudroli_dasara_End_43 Kudroli_dasara_End_44 Kudroli_dasara_End_45 Kudroli_dasara_End_46 Kudroli_dasara_End_47 Kudroli_dasara_End_48 Kudroli_dasara_End_51 Kudroli_dasara_End_52 Kudroli_dasara_End_53 Kudroli_dasara_End_54 Kudroli_dasara_End_55 Kudroli_dasara_End_56 Kudroli_dasara_End_58 Kudroli_dasara_End_59 Kudroli_dasara_End_60 Kudroli_dasara_End_61 Kudroli_dasara_End_62

Kudroli_dasara_End_49 Kudroli_dasara_End_50a Kudroli_dasara_End_57a

ಶ್ರೀ ಕ್ಷೇತ್ರದ ಅಭಿವೃದ್ಧಿ ಸಮಿತಿ ಅಧ್ಯಕ್ಷ ಅಧ್ಯಕ್ಷ ಜಯ ಸಿ. ಸುವರ್ಣ, ಶ್ರೀ ಕ್ಷೇತ್ರದ ಆಡಳಿತಾ ಮಂಡಳಿ ಅಧ್ಯಕ್ಷ ಎಚ್.ಎಸ್.ಸಾಯಿರಾಮ್, ಉಪಾಧ್ಯಕ್ಷ ರಾಘವೇಂದ್ರ ಕೂಳೂರು, ಕೋಶಾಧಿಕಾರಿ ಪದ್ಮರಾಜ್ .ಆರ್, ನವೀಕರಣ ಸಮಿತಿ ಸದಸ್ಯರಾದ ಡಾ. ಬಿಜಿ.ಸುವರ್ಣ, ರವಿಶಂಕರ್ ಮಿಜಾರು ಪದಾಧಿಕಾರಿಗಳಾದ ಮಾದವ ಸುವರ್ಣ,ಬಿ.ಕೆ.ತಾರನಾಥ್, ಕೆ.ಮಹೇಶ್ಚಂದ್ರ, ಶ್ರೀ ಜಯ ಸಿ ಸುವರ್ಣ, ದೇವೇಂದ್ರ ಪೂಜಾರಿ, ಬಿ.ದೇವದಾಸ್, ಎನ್.ಹರಿಶ್ಚಂದ್ರ, ರಾಧಾಕೃಷ್ಣ ಹಾಗೂ ಮತ್ತಿತ್ತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Write A Comment