ಕರಾವಳಿ

ಮಂಗಳೂರು :ಕಲ್ಕೂರ ಪ್ರತಿಷ್ಠಾನದ ವತಿಯಿಂದ ಕಲ್ಕೂರ ನಿವಾಸದಲ್ಲಿ ಮಕ್ಕಳಿಗೆ `ಅಕ್ಷರಾಭ್ಯಾಸ’

Pinterest LinkedIn Tumblr

Kalkura_askara_byasa_1

ಮಂಗಳೂರು : ಕಲ್ಕೂರ ಪ್ರತಿಷ್ಠಾನದ ವತಿಯಿಂದ ನವರಾತ್ರಿ ಮಹೋತ್ಸವ ಹಾಗೂ ವಿಜಯ ದಶಮಿ ಹಬ್ಬದ ಹಿನ್ನೆಲೆಯಲ್ಲಿ ಮಕ್ಕಳಿಗೆ ಅಕ್ಷರಾಭ್ಯಾಸ ಕಾರ್ಯಕ್ರಮವು ಶನಿವಾರ ಬೆಳಿಗ್ಗೆ ಮಂಗಳೂರಿನ ಕದ್ರಿ ಸಮೀಪದ ಮಲ್ಲಿಕಾ ಬಡಾವಣೆಯಲ್ಲಿರುವ ಪ್ರದೀಪ್ ಕುಮಾರ್ ಕಲ್ಕೂರ ಅವರ ನಿವಾಸದಲ್ಲಿ ನಡೆಯಿತು.

Kalkura_askara_byasa_7 Kalkura_askara_byasa_9 Kalkura_askara_byasa_10

Kalkura_askara_byasa_3 Kalkura_askara_byasa_4 Kalkura_askara_byasa_5 Kalkura_askara_byasa_6

Kalkura_Aksara_kalike_13 Kalkura_Aksara_kalike_12

Kalkura_Aksara_kalike_21

ಕನ್ನಡ ಸಾಹಿತ್ಯಾ ಪರಿಷತ್ ಜಿಲ್ಲಾಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ ಅವರ ನೇತ್ರತ್ವದಲ್ಲಿ ಮಕ್ಕಳಿಗೆ ಅಕ್ಕಿಯಲ್ಲಿ ಅಕ್ಷರವನ್ನು ಬರೆಸುವ ಮೂಲಕ ಅಕ್ಷರಾಭ್ಯಾಸ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ವೇದ ಪುರೋಹಿತ ಗಣಪತಿ ಆಚಾರ್ ಅವರು ಮಾರ್ಗದರ್ಶನ ನೀಡಿದರು. ಇದೇ ಸಂದರ್ಭ ಮಕ್ಕಳಿಗೆ ತಬಲ ಕಲಿಕೆ ಹಾಗೂ ವಿಶೇಷ ನೃತ್ಯಭ್ಯಾಸ ತರಭೇತಿಗೆ ಚಾಲನೆ ನೀಡಲಾಯಿತು. ಬಳಿಕ ನವರಾತ್ರಿಯ ವಿಜಯ ದಶಮಿ ಹಬ್ಬದ ಪ್ರಯುಕ್ತ ವಿಶೇಷ ಪೂಜೆ ನೆರವೇರಿತು.

Kalkura_Aksara_kalike_14 Kalkura_Aksara_kalike_15 Kalkura_Aksara_kalike_16 Kalkura_Aksara_kalike_17 Kalkura_Aksara_kalike_18 Kalkura_Aksara_kalike_20

Kalkura_askara_byasa_2

ಇದೇ ಸಂದರ್ಭದಲ್ಲಿ ವೇದ ಪುರೋಹಿತರಾದ ಗಣಪತಿ ಆಚಾರ್ ಅವರನ್ನು ಪ್ರದೀಪ್ ಕುಮಾರ್ ಕಲ್ಕೂರ ದಂಪತಿಗಳು ಶಾಲು ಹೊದಿಸಿ -ಗೌರವಿಸಿ ಸನ್ಮಾನಿಸಿದರು. ಕನ್ನಡ ಸಾಹಿತ್ಯ ಪರಿಷತ್‌ನ ಮಾಜಿ ರಾಜ್ಯಾಧ್ಯಕ್ಷ ಹರಿಕೃಷ್ಣ ಪುನರೂರು, ಪ್ರತಿಷ್ಟಾನದ ಪಧಾಧಿಕಾರಿಗಳಾದ ಸುಧಾಕರ ಪೇಜಾವರ್, ಕದ್ರಿ ನವನೀತ್ ಶೆಟ್ಟಿ ಹಾಗೂ ಮತ್ತಿತ್ತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

Write A Comment