ಕರಾವಳಿ

ಚಾಲಕನ ನಿಯಂತ್ರಣ ತಪ್ಪಿದ ಕಾರು : ಸರಣಿ ಅಪಘಾತ

Pinterest LinkedIn Tumblr

maripall_accident_photo_1

ಮಂಗಳೂರು: ಚಾಲಕನ ನಿಯಂತ್ರಣ ಕಳೆದುಕೊಂಡ ಕಾರೊಂದು ಸರಣಿ ಅಪಘಾತ ನಡೆಸಿ ಬಳಿಕ ರಸ್ತೆ ಪಕ್ಕದ ಮನೆಯ ಆವರಣ ಗೋಡೆಯ ಮೇಲೆ ಬಿದ್ದ ಘಟನೆ ಶನಿವಾರ ಬೆಳಿಗ್ಗೆ ಫರಂಗಿಪೇಟೆ ಸಮೀಪದ ಮಾರಿಪಳ್ಳ ಎಂಬಲ್ಲಿ ನಡೆದಿದೆ, ಪಕ್ಕದ್ದಲ್ಲೇ ಮನೆಯಿದ್ದು, ಕಾರು ಅಲ್ಲೆ ಪಲ್ಟಿ ಹೊಡೆದು ನಿಂತ ಕಾರಣ ದೊಡ್ಡ ಅನಾಹುತವೊಂದು ತಪ್ಪಿದೆ.

maripall_accident_photo_2 maripall_accident_photo_3

ಮಡಿಕೇರಿ ಕಡೆಯಿಂದ ಮಂಗಳೂರಿನತ್ತ ಸಾಗುತ್ತಿದ್ದ (KA 20 Z 89) ಫೋರ್ಡ್ ಫಿಗೋ ಕಾರ್ ಮಾರಿಪಳ್ಳ ಸಮೀಪ ನಿಯಂತ್ರಣ ಕಳೆದುಕೊಂಡು ರಸ್ತೆಯ ತೀರಾ ಬದಿಯಲ್ಲಿ ಸಾಗಿ ಬೈಕ್, ಸ್ಕೂಟರ್‍ಗಳಿಗೆ ಡಿಕ್ಕಿ ಹೊಡೆದಿದ್ದಲ್ಲದೆ ಏಕಾ‌ಏಕಿ ಮುನ್ನುಗಿ ಪೊಲೀಸ್ ಬ್ಯಾರಿಕೇಡ್‌ಗೆ ಡಿಕ್ಕಿ ಹೊಡೆದಿದೆ. ಬಳಿಕ ಮತ್ತೆ ಮುಂದುವರಿದು ರಸ್ತೆ ಪಕ್ಕದ ಮನೆಯೊಂದರ ಆವರಣ ಗೋಡೆ ಮೇಲೆ ಪಲ್ಪಿ ಹೊಡೆದು ಬಿದ್ದಿದೆ.

maripall_accident_photo_4 maripall_accident_photo_5

ಈ ಸರಣಿ ಅಪಘಾತದಲ್ಲಿ ಮೂರು ವಾಹನಗಳು ನಜ್ಜುಗುಜ್ಜಾಗಿವೆ. ರಸ್ತೆ ಪಕ್ಕದ ಆವರಣ ಗೋಡೆ ಹಾಗೂ ಮನೆಗೆ ಭಾಗಶ: ಹಾನಿ ಸಂಭವಿಸಿದೆ.

maripall_accident_photo_6

ಕಾರ್ ಚಾಲಕ ಅತೀವೇಗದಿಂದ ವಾಹನ ಚಾಲನೆ ಮಾಡಿದ್ದೇ ಘಟನೆಗೆ ಕಾರಣ ಎಂದು ಸ್ಥಳಿಯರು ತಿಳಿಸಿದ್ದಾರೆ. ಬೈಕ್‍ನಲ್ಲಿ ಸಂಚರಿಸುತ್ತಿದ್ದ ಸ್ಥಳೀಯ ನಿವಾಸಿ ಲತೀಫ್ ಗಂಭೀರ ಗಾಯಗೊಂಡಿದ್ದು ಆತನನ್ನು ಕೂಡಲೇ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Write A Comment