ಕರಾವಳಿ

ಗಾಂಧೀ ಜಯಂತಿಗೆ ನೀಡುವ ರಜೆಯನ್ನು ಮೋದಿ ಸರ್ಕಾರ ರದ್ದುಪಡಿಸಿದ್ದು ಗಾಂಧೀತತ್ವವನ್ನು ಇನ್ನಿಲ್ಲವಾಗಿಸುವ ಕಾರ್ಯತಂತ್ರ – ಜಯಪ್ರಕಾಶ್ ಹೆಗ್ಡೆ

Pinterest LinkedIn Tumblr

ಕುಂದಾಪುರ: ಗಾಂಧಿವಾದ ಮಾತ್ರವೇ ಈ ದೇಶದ ಜನರನ್ನು ಅಭ್ಯುದಯದೆಡೆಗೆ ಒಯ್ಯಬಲ್ಲುದು, ಮಹಾತ್ಮಾ ಗಾಂಧೀಜಿ ಮತ್ತು ಲಾಲ್‌ಬಹದ್ದೂರ್ ಶಾಸ್ತ್ರೀಜಿಯವರ ಆದರ್ಶಗಳು, ಚಿಂತನೆಗಳು ಇಂದಿಗೂ ಪ್ರಸ್ತುತ, ಗಾಂಧೀಜಿಯವರ ರಾಮರಾಜ್ಯದ ಕನಸು ಕೋಮುಸೌಹಾರ್ದತೆ ಕಾಪಾಡುವುದರಿಂದ ಮಾತ್ರವೇ ಸಾಧ್ಯ. ಜೈ ಜವಾನ್ ಜೈ ಕಿಸಾನ್ ಎಂಬ ಶಾಸ್ತ್ರೀಜಿಯವ ಘೋಷವಾಕ್ಯ ರೈತರಲ್ಲಿ ಮತ್ತು ಸೈನಿಕರಲ್ಲಿ ಆತ್ಮಸ್ಥೈರ್ಯ ತುಂಬುವುದರಿಂದ ಮಾತ್ರ ಈಡೇರಿಸಲು ಸಾಧ್ಯ. ಗಾಂಧೀ ಜಯಂತಿಗೆ ನೀಡುವ ರಜೆಯನ್ನು ಮೋದಿ ಸರ್ಕಾರ ರದ್ದುಪಡಿಸಿದ್ದು ಗಾಂಧೀತತ್ವವನ್ನು ಇನ್ನಿಲ್ಲವಾಗಿಸುವ ಕಾರ್ಯತಂತ್ರದ ಆರಂಭದ ಹಂತವಾಗಿದೆ ಎಂದು ಮಾಜಿ ಸಂಸದ ಜಯಪ್ರಕಾಶ್ ಹೆಗ್ಡೆ ಆರೋಪಿಸಿದ್ದಾರೆ.

ಅವರು ಗುರುವಾರ ಕುಂದಾಪುರ ಬ್ಲಾಕ್ ಕಾಂಗ್ರೆಸ್ ಕಛೇರಿಯಲ್ಲಿ ನಡೆದ ಗಾಂಧೀಜಿ ಮತ್ತು ಶಾಸ್ತ್ರೀಜಿ ಜನ್ಮ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದರು.

Oct2-Congress News-(8)

ಗಾಂಧಿ ಬದುಕು ಸತ್ಯ ಮತ್ತು ಶಾಂತಿಯ ಜೊತೆಗಿನ ಅನುಸಂದಾನವಾಗಿತ್ತು, ಗಾಂಧಿ ಸತ್ಯ ಮತ್ತು ಶಾಂತಿಯ ಉಳಿವಿಗಾಗಿ ತನ್ನನ್ನು ತಾನು ಬಲಿದಾನಗೈದರು, ಇಂದು ನಮ್ಮ ಮನಸ್ಸಲ್ಲಿ ತುಂಬಿಕೊಂಡಿರುವ ಕೋಮು ಭಾವನೆಯನ್ನು ತೊಳೆದುಕೊಂಡು ನಮ್ಮನ್ನು ನಾವು ಸ್ವಚ್ಛಗೊಳಿಸಿಕೊಳ್ಳಬೇಕಾಗಿದೆ. ಪೊರಕೆ ಹಿಡಿದು ಬೀದಿ ಸ್ವಚ್ಛಗೊಳಿಸುವುದರಿಂದ ಗಾಂಧೀಜಿಯವರ ಕನಸು ಈಡೇರದು. ಇಂದು ಗಾಂಧಿವಾದವನ್ನು ಅಪ್ರಸ್ತುತಗೊಳಿಸುವ ಹುನ್ನಾರ ಹೊಂದಿದ್ದಾರೆ. ದೇಶದ ವ್ಯವಸ್ಥೆಯ ದೋಷವನ್ನು ಸ್ವಚ್ಛಗೊಳಿಸುವ ಹೊತ್ತಿನಲ್ಲಿ ವ್ಯವಸ್ಥೆಯ ದೋಷದ ಫಲಾನುಭವಿ ಸಿದ್ಧಾಂತವೇ ಗಾಂಧಿಯನ್ನು ಗುಂಡಿಕ್ಕಿ ಕೊಂದಿತು. ಗಾಂಧೀಜಿ ಏಕಕಾಲದಲ್ಲಿ ಹಿಂದೂ, ಮುಸ್ಲೀಂ, ಕ್ರೈಸ್ತ ಧರ್ಮೀಯರಾಗಿ ಬಾಳಿ ಬದುಕಿದವರು ಎಂದು ಉಪನ್ಯಾಸಕ ಹಾಗೂ ಖ್ಯಾತ ಚಿಂತಕ ಜಯಪ್ರಕಾಶ್ ಶೆಟ್ಟಿ ಹೇಳಿದರು.

ಸಭೆಯಲ್ಲಿ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಬಿ. ಹಿರಿಯಣ್ಣ, ನಗರ ಕಾಂಗ್ರೆಸ್ ಉಪಾಧ್ಯಕ್ಷ ಚಂದ್ರಶೇಖರ ಶೆಟ್ಟಿ, ಪುಸರಭಾ ಮಾಜಿ ಉಪಾಧ್ಯಕ್ಷ ಜಾಕೋಬ್ ಡಿಸೋಜಾ, ಪುರಸಭಾ ಸದಸ್ಯರಾದ ಸಂದೀಪ್ ಪೂಜಾರಿ, ಪುಷ್ಪ ಶೇಟ್, ಜ್ಯೋತಿ ಕೋಡಿ, ಚಂದ್ರ ಅಮೀನ್, ಕೇಶವ ಭಟ್, ಶಿವರಾಮ ಪುತ್ರನ್, ಸುಭಾಷ್ ಪೂಜಾರಿ, ರತ್ನಾಕರ ಶೇರೆಗಾರ್, ಅಬ್ದುಲ್ಲಾ ಕೋಡಿ, ಕೋಡಿ ಸುನಿಲ್ ಪೂಜಾರಿ, ಆಶಾ ಕರ್ವೆಲ್ಲೊ, ಶೋಭಾ ಸಚ್ಚಿದಾನಂದ, ಆನಂದ ಪೂಜಾರಿ, ಉದಯ ಪೂಜಾರಿ, ರಿಯಾಝ್ ಕೋಡಿ, ಆನಂದ ಸಾರಂಗ, ಸಚ್ಚಿದಾನಂದ ಎಂ.ಎಲ್., ಲಾಯ್ ಕರ್ವೆಲ್ಲೊ, ಕುಮಾರ್ ಖಾರ್ವಿ, ಉದಯ ಶೆಟ್ಟಿ, ಆಲ್ವಿನ್, ಅನೂಪ್ ಶೆಟ್ಟಿ, ಕೆ.ಎಸ್. ವಿಜಯ್, ಕೃಷ್ಣ ಪೂಜಾರಿ, ಕೆ.ಎನ್. ಹವಾಲ್ದಾರ್, ಕೆ. ಸುರೇಶ್, ಅರುಣ್ ಶೇಟ್ ಮುಂತಾದವರು ಉಪಸ್ಥಿತರಿದ್ದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಲ್ಯಾಡಿ ಶಿವರಾಮ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ನಗರ ಕಾಂಗ್ರೆಸ್ ಅಧ್ಯಕ್ಷ ಗಣೇಶ್ ಶೇರೆಗಾರ್ ಸ್ವಾಗತಿಸಿ, ಕಾರ್ಯದರ್ಶಿ ವಿನೋದ್ ಕ್ರಾಸ್ತಾ ಕಾರ್ಯಕ್ರಮ ನಿರ್ವಹಿಸಿದರು. ಪುರಸಭಾ ಸದಸ್ಯ ಚಂದ್ರಶೇಖರ ಖಾರ್ವಿ ವಂದಿಸಿದರು.

Write A Comment