ಕರಾವಳಿ

ಎಡೆಸ್ನಾನ ಕೂಡ ನಿಷೇಧಿಸುವಂತೆ ದಲಿತ ಮುಖಂಡರ ಆಗ್ರಹ.

Pinterest LinkedIn Tumblr

dc_sc_pressmeet_1

ಮಂಗಳೂರು, ಸೆ.30: ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ಜಾರಿಯಲ್ಲಿರುವ ಮಡೆಸ್ನಾನವನ್ನು ನಿಷೇಧಿಸಿದ ಸುಪ್ರೀಂ ಕೋರ್ಟ್‌ನ ತೀರ್ಪು ಸ್ವಾಗತಾರ್ಹ. ಇದರ ಜತೆಗೆ ಇದಕ್ಕೆ ಪರ್ಯಾಯವಾಗಿ ದೇವರ ಪ್ರಸಾದದ ಮೇಲೆ ಉರುಳುವ ಎಡೆಸ್ನಾನವನ್ನೂ ನಿಷೇಧಿಸಬೇಕು ಎಂಬ ಆಗ್ರಹ ದಲಿತ ನಾಯಕರಿಂದ ವ್ಯಕ್ತವಾಗಿದೆ. ಜಿಲ್ಲಾಧಿಕಾರಿ ಕಚೇರಿಯಲ್ಲಿಂದು ನಡೆದ ದಲಿತ ನಾಯಕರ ಸಭೆಯಲ್ಲಿ ವಿವಿಧ ದಲಿತ ಸಂಘಟನೆಗಳ ನಾಯಕರು ಎಡೆಸ್ನಾನವನ್ನೂ ವಿರೋಧಿಸಿದರು. ವಿಷಯ ಪ್ರಸ್ತಾಪಿಸಿದ ಶೇಖರ್ ಬೆಳ್ತಂಗಡಿ, ಈ ಬಗ್ಗೆ ನಿರ್ಣಯವೊಂದನ್ನು ಕೈಗೊಂಡು ರಾಜ್ಯ ಸರಕಾರಕ್ಕೆ ಕಳುಹಿಸುವಂತೆ ಒತ್ತಾಯಿಸಿದರು.

ಸಭೆಯ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾಧಿಕಾರಿ ಎ.ಬಿ.ಇಬ್ರಾಹೀಂ ಪ್ರತಿಕ್ರಿಯಿಸಿ, ಈಗಾಗಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಈ ಬಗ್ಗೆ ಹೇಳಿಕೆ ನೀಡಿದ್ದಾರೆ. ಹಾಗಾಗಿ ವ್ಯವಸ್ಥೆ ಮೇಲೆ ನಂಬಿಕೆ ಇಡಿ ಎಂದು ಮನವಿ ಮಾಡಿದರು. ಅಧಿಕಾರಿಗಳ ನಿರ್ಲಕ್ಷದಿಂದ ಡಿಸಿ ಮನ್ನಾ ಭೂಮಿ ಸಿಗುತ್ತಿಲ್ಲ: ಅಧಿಕಾರಿಗಳ ನಿರ್ಲಕ್ಷದಿಂದಾಗಿ ಇಂದು ದಲಿತರಿಗೆ ಅರ್ಹವಾಗಿ ಸಲ್ಲಬೇಕಾದ ಡಿಸಿ ಮನ್ನಾ ಭೂಮಿ ಶಿಕ್ಷಣ ಸಂಸ್ಥೆಗಳ ಪಾಲಾಗುತ್ತಿವೆ. ದಲಿತರ ಅಭಿವೃದ್ಧಿಯಲ್ಲಿ ಹಿನ್ನಡೆಗೆ ಅಧಿಕಾರಿಗಳ ನಿರ್ಲಕ್ಷವೇ ಕಾರಣ ಎಂಬ ಆರೋಪವೂ ಸಭೆಯಲ್ಲಿ ವ್ಯಕ್ತವಾದಾಗ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ, ಜುಲೈ 15ರಂದು ಎಲ್ಲಾ ಡಿಸಿ ಮನ್ನಾ ಜಾಗವನ್ನು ಕಾದಿರಿಸುವಂತೆ ಆದೇಶ ಹೊರಡಿಸಲಾಗಿದೆ. ಡಿಸಿ ಮನ್ನಾ ಭೂಮಿಯ ಸಂಪೂರ್ಣ ಮಾಹಿತಿಯನ್ನು ಮುಂದಿನ ಸಭೆಯೊಳಗೆ ನೀಡಬೇಕು. ಅದನ್ನು ಇತರ ಉದ್ದೇಶಕ್ಕೆ ಬಳಕೆ ಮಾಡದಂತೆ ಎಚ್ಚರಿಕೆ ವಹಿಸಬೇಕು. ಮೂಲ್ಕಿ ಸೇರಿದಂತೆ ಕೆಲವೆಡೆ ಪರಿಶಿಷ್ಟರ ಮನೆಗಳಿಗೆ ಹಕ್ಕುಪತ್ರವಿದ್ದು, ಆರ್‌ಟಿಸಿ ಇಲ್ಲ. ಆರ್‌ಟಿಸಿ ನೀಡಲು ಒಂದು ವಾರದ ಆಂದೋಲನ ಮಾಡಬೇಕು. ಯಾವ ದಾಖಲೆ ಇಲ್ಲಿದ್ದರೂ ಹಕ್ಕುಪತ್ರ ಮಾಡಿಕೊಡಿ ಎಂದು ತಹಶೀಲ್ದಾರ್, ಎಸಿಗೆ ಜಿಲ್ಲಾಧಿಕಾರಿ ಸೂಚಿಸಿದರು.

dc_sc_pressmeet_2

ಪಾಲಿಕೆ ಸದಸ್ಯರ ಸಹಿ: ಆಕ್ಷೇಪ
ಮಂಗಳೂರು ಮಹಾನಗರ ಪಾಲಿಕೆಯ ರೋಜ್‌ಗಾರ್ ವಿಭಾಗದಲ್ಲಿ ಪರಿಶಿಷ್ಟ ಜಾತಿಯ ಫಲಾನು ಭವಿಗಳು ಅರ್ಜಿ ಸಲ್ಲಿಸುವ ಸಂದರ್ಭ ಪಾಲಿಕೆ ಸದಸ್ಯರ ಸಹಿ ಹಾಕಿಸಿ ತರುವಂತೆ ಅಧಿಕಾರಿಗಳು ಒತ್ತಡ ಹೇರುತ್ತಿದ್ದಾರೆ ಎಂಬ ದೂರಿನ ಬಗ್ಗೆ ಪಾಲಿಕೆ ಅಧಿಕಾರಿಗಳ ಸ್ಪಷ್ಟನೆ ಕೇಳಿದರು. ಯೋಜನೆ ಫಲಾನುಭವಿಗಳ ಗಮನಕ್ಕೂ ಬರ ಬೇಕೆಂಬ ಉದ್ದೇಶದಿಂದ ಪಾಲಿಕೆ ಸದಸ್ಯರು ಈ ನಡಾವಳಿ ಮಾಡಿರುವುದಾಗಿ ಅಧಿಕಾರಿಗಳು ಹೇಳಿ ದರು. ಇಂತಹ ಕೆಟ್ಟ ಸಂಪ್ರದಾಯ ಬೇಡ. ಅರ್ಜಿಗೆ ಪಾಲಿಕೆ ಸದಸ್ಯರ ಸಹಿ ಬೇಕಾಗಿಲ್ಲ. ಕಾರ್ಪೊರೇಟರ್ ಸಿಗದಿದ್ದರೆ ಅವರನ್ನು ಎಲ್ಲಿ ಹುಡುಕಾಡುವುದು? ಯಾವುದೇ ಅರ್ಜಿಯನ್ನು ಸಮಿತಿ, ಆಯುಕ್ತರ ಹಂತ ದಲ್ಲೇ ಇತ್ಯರ್ಥ ಮಾಡಬೇಕು ಎಂದು ಜಿಲ್ಲಾಧಿಕಾರಿ ನಿರ್ದೇಶನ ನೀಡಿದರು. ಕೊಡಿಯಾಲ್‌ಬೈಲ್‌ನ ಅಂಬೇಡ್ಕರ್ ಭವನ ವಾಣಿಜ್ಯ ಸಂಕೀರ್ಣದ ಎಲ್ಲ ಅಂಗಡಿಗಳನ್ನು ತೆರವು ಗೊಳಿಸಲು ಎಸಿ ನೇತೃತ್ವದ ಸಮಕ್ಷಮ ಪ್ರಾಧಿಕಾರ ಕ್ರಮ ಕೈಗೊಳ್ಳಬೇಕು. ಅಲ್ಲಿ ಶಚಿತ್ವ ನಡೆಸಿ, ಪರಿಶಿಷ್ಟರಿಗೆ ಮಾತ್ರ ಅಂಗಡಿಗಳನ್ನು ಹಂಚಲು ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಅಧಿಕಾರಿಗಳಿಗೆ ಸೂಚಿಸಿದರು.

dc_sc_pressmeet_3

ಮಂಗಳೂರಿನಲ್ಲಿ ಕುದ್ಮುಲ್ ರಂಗ ರಾವ್ ಸಭಾ ಭವನ ಸ್ಥಾಪಿಸಲು ಸರಕಾರ 1 ಕೋಟಿ ರೂ. ಬಿಡುಗಡೆ ಮಾಡಿದ್ದು, ಈಗಾಗಲೇ ವೆಲೆನ್ಸಿಯಾ, ಬಾಬುಗುಡ್ಡೆ ಮೊದಲಾದೆಡೆ ಜಾಗ ಪ್ರಸ್ತಾಪಿಸಿದ್ದು, ಸೂಕ್ತ ಜಾಗ ಹುಡಕಲು ಪರಿಶಿಷ್ಟರ ಪ್ರತಿನಿಧಿಗಳ ಸಮಿತಿ ರಚಿಸಿ, ರೂಪುರೇಷೆ ಸಿದ್ಧಪಡಿಸಲು ಜಿಲ್ಲಾಧಿ ಕಾರಿ ಹೇಳಿದರು. ಸಭೆಯಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಸದಾಶಿವ ಪ್ರಭು, ಡಿಸಿಪಿ ವಿಷ್ಣುವರ್ಧನ್, ಸಹಾಯಕ ಆಯುಕ್ತ ಡಾ.ಡಿ.ಆರ್.ಅಶೋಕ್, ಸಮಾಜ ಕಲ್ಯಾಣ ಇಲಾ ಖೆಯ ಉಪ ನಿರ್ದೇಶಕ ಡಾ.ಸಂತೋಷ್, ಹೆಚ್ಚುವರಿ ಎಸ್ಪಿ ಶಿವಕುಮಾರ್ ಉಪಸ್ಥಿತರಿದ್ದರು.
ನಿಷೇಧಿತ ಪದ ಬಳಕೆ ಬೇಡ

dc_sc_pressmeet_4

ಸುಪ್ರೀಂ ಕೋರ್ಟ್ ನಿಷೇಧಿಸಿರುವ ಹರಿಜನ ಪದವನ್ನು ಬಳಸಿಕೊಂಡು ದಲಿತರನ್ನು ಅವಮಾನಿಸ ಲಾಗುತ್ತಿದೆ. 5ನೆ ತರಗತಿಯ ಸಮಾಜ ವಿಜ್ಞಾನ ಪಠ್ಯಪುಸ್ತಕದಲ್ಲೂ ಈ ಪದವನ್ನು ಬಳಸಲಾಗಿದೆ. ಶಿಕ್ಷಕರು ತರಗತಿಯಲ್ಲಿ ಆ ಪದ ಬಳಕೆ ಮಾಡ ಬಾರದು ಎಂದು ಶಿಕ್ಷಣ ಇಲಾಖೆ ಕ್ಷೇತ್ರ ಶಿಕ್ಷಣಾ ಧಿಕಾರಿ, ಶಿಕ್ಷಕರಿಗೆ ಕಟ್ಟುನಿಟ್ಟಿನ ಸೂಚನೆ ನೀಡುವಂತೆ ದಲಿತ ನಾಯಕರು ಒತ್ತಾಯಿಸಿದರು. ಪಹಣಿ ಕಲಂನಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡದಲ್ಲಿರುವ ಎಲ್ಲಾ ನಿಷೇಧಿತ ಪದ ಬಳಕೆ ಯನ್ನು ತೆಗೆದು ಹಾಕಲು ಜುಲೈ ತಿಂಗಳಿನಲ್ಲೇ ಆದೇಶಿಸಲಾಗಿದೆ. ಇದೀಗ ಮತ್ತೆ ಎಲ್ಲಾ ಅಧಿಕಾರಿ ಗಳಿಗೆ ಸಭೆಯಲ್ಲಿ ಸೂಚಿಸುತ್ತಿರುವುದಾಗಿ ಜಿಲ್ಲಾಧಿಕಾರಿ ಸ್ಪಷ್ಟಪಡಿಸಿದರು. ಮಾಹಿತಿ ಕೊರತೆಯಿಂದಾಗಿ ಕೆಲವರು ನಿಷೇಧಿತ ಪದ ಬಳಸುತ್ತಿರಬಹುದು. ಇನ್ನು ಮುಂದೆ ಹರಿಜನ ಕಾಲನಿ ಎಂಬ ಪದವನ್ನೂ ಬಳಕೆ ಮಾಡದಂತೆ ಸುತ್ತೋಲೆ ಹೊರಡಿಸುತ್ತಿರುವುದಾಗಿ ಜಿಲ್ಲಾಧಿಕಾರಿ ಎ.ಬಿ.ಎಬ್ರಾಹೀಂ ಹೇಳಿದರು.

Write A Comment