ಕರಾವಳಿ

ದ.ಕ.ಜಿಲ್ಲಾ ಪಂಚಾಯತ್‌ಗೆ ಅತ್ಯುತ್ತಮ ಪ್ರಶಸ್ತಿ 

Pinterest LinkedIn Tumblr
ZP_CEO_Tulasi_maddineni
ಮಂಗಳೂರು ಸೆಪ್ಟೆಂಬರ್ 30 :- ಭಾರತ ಸರಕಾರ ಮತ್ತು ಗ್ರಾಮೀಣಾಭಿವೃದ್ದಿ ಇಲಾಖೆಯ ಜನರ ಸಹಭಾಗಿತ್ವ ಮತ್ತು ಜಿಲ್ಲೆಯ ಅಭಿವೃದ್ಧಿ ಕಾರ್ಯಗಳನ್ನು ಗುರುತಿಸಿ, ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತನ್ನು ಅತ್ಯುತ್ತಮ ಜಿಲ್ಲಾ ಪಂಚಾಯತ್ ಎಂಬ ಪ್ರಶಸ್ತಿಗೆ ಆಯ್ಕೆ ಮಾಡಿರುತ್ತಾರೆ. ಆ ಪ್ರಯುಕ್ತ ಅಕ್ಟೋಬರ್ 01 ರಂದು ನವದೆಹಲಿಯಲ್ಲಿ ನಡೆಯುವ ಸಮಾರಂಭದಲ್ಲಿ ಲೋಕಸಭಾ ಅಧ್ಯಕ್ಷರು ಪ್ರಶಸ್ತಿಯನ್ನು ನೀಡಲಿದ್ದಾರೆ. ದಕ್ಷಿಣಕನ್ನಡ ಜಿಲ್ಲೆಯ ಎಲ್ಲಾ ಜನತೆಯ ಜಿಲ್ಲಾ ಪಂಚಾಯತ್ ಸದಸ್ಯರ, ಅಧಿಕಾರಿ ಮತ್ತು ಸಿಬ್ಬಂದಿಗಳ ಪರವಾಗಿ ದ.ಕ ಜಿಲ್ಲಾ ಪಂಚಾಯತ್‌ನ  ಅಧ್ಯಕ್ಷೆ ಆಶಾ ತಿಮ್ಮಪ್ಪ ಗೌಡ ಇವರು ಮಾನ್ಯ ಉಪಾಧ್ಯಕ್ಷ ಸತೀಶ್ ಕುಂಪಲ ಮತ್ತು ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿ ಅಧ್ಯಕ್ಷ ಬಾಲಕೃಷ್ಣ ಬಾಣಜಾಲು ಇವರೊಂದಿಗೆ ಪ್ರಶಸ್ತಿ  ಸ್ವೀಕರಿಸಲಿದ್ದಾರೆ.
 ರಾಜ್ಯದಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿರುವ ಪಂಚಾಯತ್ ರಾಜ್ ಸಂಸ್ಥೆಗಳಾದ ಗ್ರಾಮ, ತಾಲ್ಲೂಕು, ಜಿಲ್ಲಾ ಪಂಚಾಯತ್‌ಗಳಿಗೆ ಗಾಂಧಿ ಗ್ರಾಮ ಪುರಸ್ಕಾರ, ರಾಜೀವ ಗಾಂಧಿ ಪಂಚಾಯತಿ ಸಶಕ್ತೀಕರಣ ಅಭಿಯಾನ ಪ್ರೋತ್ಸಾಹಧನ ವಿತರಣೆ ಮತ್ತು ನೈರ್ಮಲ್ಯ ಪ್ರಶಸ್ತಿ ಪ್ರಧಾನ ಸಮಾರಂಭವು ಅ.2 ರಂದು ಅಪರಾಹ್ನ 4.30 ಗಂಟೆಗೆ ಬೆಂಗಳೂರು ವಿಧಾನ ಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ಮುಖ್ಯ ಮಂತ್ರಿಗಳು ಮತ್ತು  ಗ್ರಾಮೀಣಾ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರ ಸಮ್ಮುಖದಲ್ಲಿ ನಡೆಯಲಿದೆ.
ಗಾಂಧಿ ಗ್ರಾಮ ಪುರಸ್ಕಾರ – ಬಂಟ್ವಾಳದ ಕೊಳ್ನಾಡು. ಬೆಳ್ತಂಗಡಿಯ ಲಾಯಿಲಾ,ಮಂಗಳೂರಿನ ತೆಂಕಮಿಜಾರು,ಪುತ್ತೂರಿನ ಗೋಳಿತೊಟ್ಟು,ಸುಳ್ಯದ ಸಂಪಾಜೆ ಗ್ರಾಮ ಪಂಚಾಯತ್‌ಗಳಿಗೆ ತಲಾ ರೂ.5 ಲಕ್ಷಗಳಂತೆ ಗಾಂಧಿ ಗ್ರಾಮ ಪುರಸ್ಕಾರ ಲಭಿಸಿದೆ.
ರಾಜೀವ್ ಗಾಂಧಿ ಪಂಚಾಯತ್ ಸಶಕ್ತೀಕರಣ ಅಭಿಯಾನದಡಿ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್‌ಗೆ ರೂ.50 ಲಕ್ಷಗಳು,ಬನ್ನೂರು ಗ್ರಾಮ ಪಂಚಾಯತ್ – ರೂ.17 ಲಕ್ಷಗಳು ಲಭಿಸಿವೆ.
ರಾಜ್ಯ ನೈರ್ಮಲ್ಯ ಪ್ರಶಸ್ತಿಗೆ ಲಾಯಿಲ -ವಿಭಾಗೀಯ ಮಟ್ಟದಲ್ಲಿ ಪ್ರಥಮ –  ರೂ.5 ಲಕ್ಷಗಳು ಮತ್ತು ಲಾಯಿಲ -ರಾಜ್ಯ ಮಟ್ಟದಲ್ಲಿ ದ್ವಿತೀಯ  -ರೂ.7 ಲಕ್ಷಗಳು,ಬೆಳ್ತಂಗಡಿ ತಾಲ್ಲೂಕು ಪಂಚಾಯತ್ – ವಿಭಾಗೀಯ ಮಟ್ಟದಲ್ಲಿ ಪ್ರಥಮ – ರೂ.10 ಲಕ್ಷಗಳು ಹಾಗೂ ಬೆಳ್ತಂಗಡಿ ತಾಲ್ಲೂಕು ಪಂಚಾಯತ್  -ರಾಜ್ಯ ಮಟ್ಟದಲ್ಲಿ ಪ್ರಥಮ – ರೂ.20ಲಕ್ಷಗಳು ಲಭಿಸಿದೆಯೆಂದು ಜಿಲ್ಲಾ ಪಂಚಾಯತ್ ಅಧ್ಯಕ್ಷರು ಪ್ರಕಟಣೆಯಲ್ಲಿ  ತಿಳಿಸಿದ್ದಾರೆ.

Write A Comment