ಕರಾವಳಿ

ಮಹಿಳಾ ಉದ್ಯಮಿಗಳ ಉತ್ಪನ್ನಗಳ ಪ್ರದರ್ಶನ ಹಾಗೂ ಮಾರಾಟ ಮೇಳಕ್ಕೆ ಶಾಸಕ ಲೋಬೊ ಅವರಿಂದ ಚಾಲನೆ

Pinterest LinkedIn Tumblr

mahela_excbitin_photo_1a

ಮಂಗಳೂರು, ಸೆ. 30: ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಹ ಯೋಗದಲ್ಲಿ ಉದ್ಯೋಗಿನಿ ಯೋಜನೆಯಫಲಾನುಭವಿಗಳು, ಸೀಶಕ್ತಿ ಸ್ವಸ ಹಾಯ ಸಂಘಗಳ ಸದಸ್ಯರು ಮತ್ತು ಮಹಿಳಾ ಉದ್ಯಮಿಗಳು ತಯಾರಿಸಿದ ಉತ್ಪನ್ನಗಳ ಪ್ರದರ್ಶನ ಹಾಗೂ ಮಾರಾಟಮೇಳ ಮಂಗಳಾದೇವಿ ದೇವಸ್ಥಾನ ಬಳಿಯ ಕಾಂತಿ ಚರ್ಚ್ ಸಭಾಂಗಣದಲ್ಲಿ ಇಂದು ಆರಂಭಗೊಂಡಿತು.

mahela_excbitin_photo_2a mahela_excbitin_photo_3aa mahela_excbitin_photo_4 mahela_excbitin_photo_5a

ಶಾಸಕ ಜೆ.ಆರ್.ಲೋಬೊ ಮೇಳಕ್ಕೆ ಚಾಲನೆ ನೀಡಿ ಮಾತನಾಡಿ, ಮಹಿಳೆಯರು ಸ್ವಉದ್ಯೋಗಕ್ಕೆ ಮುಂದಾಗಿ ಆರ್ಥಿಕವಾಗಿ ಸಬಲರಾ ದರೆ, ಕುಟುಂಬದ ಬೆಳವಣಿಗೆಗೂ ಸಹಕಾರಿಯಾಗುತ್ತದೆ. ಸರಕಾರ ಕೂಡಾ ಇಂತಹ ಸ್ವ ಉದ್ಯೋಗಗಳಿಗೆ ಎಲ್ಲಾ ರೀತಿಯ ಸಹಕಾರ ನೀಡುತ್ತಿದೆ ಎಂದು ಹೇಳಿದರು. ಮಹಿಳೆಯರು ತಯಾರಿಸಿದ ಉಪ್ಪಿನ ಕಾಯಿ, ಆಯುರ್ವೇದ ಔಷಧಗಳು, ಹರ್ಬಲ್ ಸೌಂದರ್ಯ ವರ್ಧಕಗಳು, ಕೃತಕ ಆಭರಣಗಳು, ನಾನಾ ಬಗೆಯ ತಿಂಡಿಗಳು, ತರಕಾರಿ, ತರಕಾರಿ ಬೀಜಗಳು, ಬ್ಯಾಗುಗಳು ಪ್ರದರ್ಶನ ಹಾಗೂ ಮಾರಾಟದಲ್ಲಿದ್ದು, ಅ.4ರ ತನಕ ನಡೆಯಲಿದೆ.

expo_marata_mela_5 expo_marata_mela_1a expo_marata_mela_2a expo_marata_mela_3 expo_marata_mela_4

ಉಜಿರೆ ಎಸ್‌ಡಿಎಂ ಕಾಲೇಜಿನ ಬಿಬಿಎಂ ದ್ವಿತೀಯ ವರ್ಷದ ವಿದ್ಯಾ ರ್ಥಿನಿ ಅಲ್ಕಾ ಮೀರಾ ಸನ್ನಿ ಈ ಮೇಳದ ಪ್ರಮುಖ ಆಕರ್ಷಣೆಯಾಗಿದ್ದಾರೆ. ಶಿಕ್ಷಣದ ಜತೆ ಜತೆಗೇ ಉದ್ಯಮದಲ್ಲೂ ಸೈ ಅನ್ನಿಸಿಕೊಂಡಿರುವ ಈಕೆ ಹಾಗೂ ಈಕೆಯ ತಾಯಿ ಜೆಮಿನಿ ಪ್ರದರ್ಶನ ದಲ್ಲಿ ಮಳಿಗೆಯನ್ನು ಹೊಂದಿದ್ದಾರೆ.

ಆವೆಮಣ್ಣು, ಕಾಗದ, ಟೆರಾ ಕೊಟಾ, ಮುತ್ತು ಬಳಸಿ ತಯಾರಿಸಿದ ಆಭರ ಣಗಳು ಇವರ ಮಳಿಗೆಯ ವಿಶೇಷತೆಗಳು. 35 ಸಾವಿರ ರೂ. ಹೂಡಿಕೆ ಯೊಂದಿಗೆ ಕಳೆದ ಎಪ್ರಿಲ್‌ನಲ್ಲಿ ಈ ಉದ್ಯಮಕ್ಕೆ ಕಾಲಿಟ್ಟಿರುವ ಅಲ್ಕಾ, ಮಂಗಳೂರಿನಲ್ಲಿ ಪ್ರಥಮ ಬಾರಿಗೆ ಪ್ರದರ್ಶನದಲ್ಲಿ ಪಾಲ್ಗೊಳ್ಳುತ್ತಿದ್ದಾರೆ.

expo_marata_mela_8 expo_marata_mela_6a expo_marata_mela_7a

ಕಾರ್ಯಕ್ರಮದಲ್ಲಿ ಜಿಲ್ಲಾ ಸೀ ಶಕ್ತಿ ನೋಡೆಲ್ ಅಧಿಕಾರಿ ಸುಂದರ್ ಪೂಜಾರಿ ಉಪಸ್ಥಿತರಿದ್ದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕಿ ಗರ್ಟ್ರೂಡ್ ವೇಗಸ್ ಸ್ವಾಗತಿಸಿದರು. ಮಹಿಳಾ ಅಭಿವೃದ್ಧಿ ನಿಗಮದ ಅಭಿವೃದ್ಧಿ ನಿರೀಕ್ಷಕಿ ಚಂದ್ರಿಕಾ ನಾಯಕ್ ವಂದಿಸಿದರು.

Write A Comment