ಕರಾವಳಿ

ಉಡುಪಿ ಡಿವೈಎಸ್ಪಿ ಪ್ರಬುದೇವ್ ಮನೆ ಮೇಲೆ `ಲೋಕಾ’ ದಾಳಿ; ಹುಬ್ಬಳ್ಳಿ ನಿವಾಸದಲ್ಲೂ ಪರಿಶೀಲನೆ

Pinterest LinkedIn Tumblr

ಉಡುಪಿ: ಉಡುಪಿಯ ಡಿವೈಎಸ್ಪಿ ಡಾ. ಪ್ರಭುದೇವ್ ಮಾನೆ ಅವರ ಉಡೂಪಿ ಹಾಗೂ ಹುಬ್ಬಳ್ಳಿಯ ನಿವಾಸದ ಮೇಲೆ ಮಂಗಳವಾರ ಬೆಳ್ಳಂಬೆಳಗೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ ದಾಖಲೆ ಪತ್ರಗಳ ಪರಿಶೀಲನೆಯಲ್ಲಿ ತೊಡಗಿದ್ದಾರೆ.

Udupi_DYSP_Prabhudev mane

 

(ಡಾ. ಪ್ರಭುದೇವ್ ಮಾನೆ)

ಪ್ರಭುದೇವ್ ಮಾನೆ ಮೇಲೆ ಅಕ್ರಮ ಆಸ್ತಿ ಸಂಪಾದನೆಯೆಂಬ ಸಾರ್ವಜನಿಕರ ದೂರಿನ ಅನ್ವಯ ಮಂಗಳವಾರ ಮುಂಜಾನೆ ಉಡುಪಿಯ ಬ್ರಹ್ಮಗಿರಿಯಲ್ಲಿರುವ ಮಾನೆ ನಿವಸ ಹಾಗೂ ಹುಬ್ಬಳ್ಳಿಯ ಗೋಕುಲನಗರದಲ್ಲಿರುವ ನಿವಾಸದ ಮೇಲೆ ಏಕಕಾಲಕ್ಕೆ ದಾಳಿ ನಡೆಸಿದ ಲೋಕಾಯುಕ್ತ ಅಧಿಕಾರಿಗಳು ಮಹತ್ವದ ದಾಖಲೆಪತ್ರಗಳನ್ನು ವಶಪಡೆದು ಪರಿಶೀಲನೆ ನಡೆಸುತ್ತಿದ್ದಾರೆ.

ಪ್ರಭುದೇವ್ ಮಾನೆ ಈ ಮೊದಲು ಲೋಕಾಯುಕ್ತ ಡಿವೈಎಸ್ಪಿ ಆಗಿ ಕಾರ್ಯ ನಿರ್ವಹಿಸದವರು ಬಳಿಕ ಉಡುಪಿಗೆ ಡಿವೈಎಸ್ಪಿ ಆಗಿ ಬಂದಿದ್ದರು. ಸದ್ಯ ನಿವ್ರತ್ತಿಯ ಅಂಚಿನಲ್ಲಿರುವ ಅವರ ಮೇಲೆ ಸಾರ್ವಜನಿಕರು ಅಕ್ರಮ ಆಸ್ತಿ ಸಂಪಾದನೆ ದೂರನ್ನು ಲೋಕಾಯುಕ್ತರಿಗೆ ನೀಡಿದ್ದರು.

ಲೋಕಾಯುಕ್ತ ಎಸ್ಪಿ (ವರಿಷ್ಠಾಧಿಕಾರಿ) ಸದಾನಂದ ವರ್ಣೇಕರ್ ನೇತ್ರತ್ವದಲ್ಲಿ ಉಡುಪಿ ನಿವಾಸದ ಮೇಲೆ ದಾಳಿ ನಡೆದಿದೆ. ಲೋಕಯುಕ್ತ ಡಿವೈಎಸ್ಪಿ ಉಮೇಶ್ ಶೇಟ್, ಸಿ.ಪಿ.ಐ. ಮೋಹನ್ ಕೊಠಾರಿ ಉಪಸ್ಥಿತರಿದ್ದರು.

ಇನ್ನು ರಾಜ್ಯಾದ್ಯಂತ ೭ ಕಡೆ ವಿವಿಧ ಅಧಿಕಾರಿಗಳ ಮನೆ ಮೇಲೆ ದಾಳಿ ನಡೆದಿದೆ.

Write A Comment