ಕರಾವಳಿ

ಕಾಪು : ಯುವ ಜೋಡಿಗೆ ಹಲ್ಲೆ ಪ್ರಕರಣ: ನಾಲ್ವರ ಬಂಧನ

Pinterest LinkedIn Tumblr

arrest

ಉಡುಪಿ: ಕಳೆದ ಶುಕ್ರವಾರ ಅಪ್ರಾಪ್ತ ವಯಸ್ಸಿನ ಯುವತಿಯರೊಂದಿಗೆ ಕಾಪು ಬೀಚ್‌ಗೆ ಬಂದಿದ್ದ ಅನ್ಯಕೋಮಿನ ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆಸಿದ ಆರೋಪದಡಿ ನಾಲ್ವರನ್ನು ಕಾಪು ಪೊಲೀಸರು ಬಂಧಿಸಿದ್ದಾರೆ.

ಸ್ಥಳೀಯರಾದ ಸುಮನ್‌, ಸುಧೀರ್‌, ನವೀನ್‌, ಹಿತೇಶ್‌ ಬಂಧಿತರು. ಬಂಧಿತರನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದ್ದು, ಬಂಧಿತರನ್ನು ಸೆ. 30ರವರೆಗೆ ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ಕಾಪು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಹೆಚ್ಚಿನ ತನಿಖೆ ಮುಂದುವರಿಸಿದ್ದಾರೆ.

Write A Comment