ಕರಾವಳಿ

ನಕಲಿ ಫೇಸ್‌ಬುಕ್ ತೆರೆದು ವಿದ್ಯಾರ್ಥಿನಿಯರ ಅಶ್ಲೀಲ ಚಿತ್ರ ಅಪ್‌ಲೋಡ್ : ಆರೋಪಿಗಳ ಬಂಧನಕ್ಕೆ ಆಗ್ರಹಿಸಿ ಎಬಿವಿಪಿ ಪ್ರತಿಭಟನೆ

Pinterest LinkedIn Tumblr
abvp_protest_photo_1a
ಮಂಗಳೂರು ಸೆಪ್ಟೆಂಬರ್ 23: ಸೆಕ್ಸಿ ಮೋಡೆಲ್, ಹಾಟ್ ಗರ್ಲ್ಸ್ ಎನ್ನುವ ನಕಲಿ ಫೇಸ್‌ಬುಕ್ ಖಾತೆ ತೆರೆದು ಅದರಲ್ಲಿ ಕಾಲೇಜು ವಿದ್ಯಾರ್ಥಿನಿಯರ ನೀಲಿ ಚಿತ್ರಗಳನ್ನು ಅಪ್‌ ಲೋಡ್ ಮಾಡಿ  ಫೇಸ್‌ಬುಕ್  ಖಾತೆಯ ದುರ್ಬಳಕ್ಕೆ ಹಾಗೂ ಅಮಾಯಕ ವಿದ್ಯಾರ್ಥಿನಿಯರನ್ನು ಬ್ಲ್ಯಾಕ್‌ ಮೇಲ್ ಮಾಡುತ್ತಿರುವ  ಆರೋಪಿಗಳನ್ನು ತಕ್ಷಣ  ಬಂಧಿಸಿ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ವತಿಯಿಂದ  ಮಂಗಳವಾರ ಮಂಗಳೂರು ನಗರ  ಪೊಲೀಸ್ ಕಮೀಷನರ್ ಕಛೇರಿ ಎದುರು ಪ್ರತಿಭಟನೆ ನಡೆಯಿತು..
abvp_protest_photo_2a
ಪ್ರತಿಭಟನಕಾರರನ್ನುದ್ದೇಶಿಸಿ ಎಬಿವಿಪಿ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಲವೀನ್ ಕೊಟ್ಯಾನ್ ಮಾತನಾಡಿ, ಅಂತರ್ಜಾಲ ತಾಣದ ಮೂಲಕ ಅಮಾಯಕ ವಿದ್ಯಾರ್ಥಿನಿಯರನ್ನು ಬ್ಲ್ಯಾಕ್‌ ಮೇಲ್ ಮಾಡಲಾಗುತ್ತಿದೆ. ಫೇಸ್‌ ಬುಕ್‌ ನಲ್ಲಿ ನೀಲಿ ಚಿತ್ರಗಳನ್ನು ಅಪ್‌ ಲೋಡ್ ಮಾಡಿ ವಿದ್ಯಾರ್ಥಿನಿಯರ ಮಾನ ಹರಾಜು ಹಾಕಲಾಗುತ್ತಿದೆ  ಈ ಬಗ್ಗೆ ಪೊಲೀಸ್ ಇಲಾಖೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.
abvp_protest_photo_3a
ಕರಾವಳಿ ಪ್ರದೇಶದಲ್ಲಿ ಈಗಾಗಲೇ “ಅಪಹರಣ, ಲೈಂಗಿಕ ಹಲ್ಲೆ ಪ್ರಕರಣಗಳು ಹೆಚ್ಚಾಗುತ್ತಿವೆ. ಈಗ ದುಷ್ಕರ್ಮಿಗಳು ಹುಡುಗಿಯರ ಫೋಟೋಗಳನ್ನು ದುರ್ಬಳಕೆ  ಮಾಡುವ ಮೂಲಕ ವಿದ್ಯಾರ್ಥಿನಿಯರ ಮಾನ ಹರಾಜು ಮಾಡುವ ಕಾರ್ಯವೆಸಗುತ್ತಿದ್ದಾರೆ. ಇದರಿಂದ ವಿದ್ಯಾರ್ಥಿಗಳ ಭವಿಷ್ಯದ ಮೇಲೆ ಅತ್ಯಂತ ಪರಿಣಾಮ ಬೀರುವ ಸಾದ್ಯತೆ ಇದೆ. ಮಾತ್ರವಲ್ಲದೇ ಅವರ ಭವಿಷ್ಯಕ್ಕೂ ತೊಂದರೆಯಾಗುತ್ತದೆ ಎಂದು ಆರೋಪಿಸಿದ ಅವರು, ಪೊಲೀಸ್ ಇಲಾಖೆ ತಕ್ಷಣ ಈ ಕುಕೃತ್ಯದಲ್ಲಿ ಭಾಗಿಯಾದ ಅರೋಪಿಗಳನ್ನು ಜಾಮೀನು ರಹಿತ ವಾರೆಂಟ್ ಮೂಲಕ ಬಂಧಿಸಿ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
abvp_protest_photo_4a
ಸೆಕ್ಸಿ ಮೋಡೆಲ್, ಹಾಟ್ ಗರ್ಲ್ಸ್ ಎನ್ನುವ ಅನಾಮಿಕ ಫೇಸ್‌ಬುಕ್ ನಿರ್ಮಾಣ ಮಾಡಿ ಅದಕ್ಕೆ ಕಾಲೇಜು ವಿದ್ಯಾರ್ಥಿನಿಯರ ಚಿತ್ರಗಳನ್ನು ಅಪ್‌ ಲೋಡ್ ಮಾಡಲಾಗುತ್ತಿದೆ. ಈ ಬಗ್ಗೆ ಹಿರಿಯ ಪೊಲೀಸ್ ಅಧಿಕಾರಿಗಳಿಗೆ ದೂರು ನೀಡಿದರೂ ಕ್ರಮ ಕೈಗೊಂಡಿಲ್ಲ. ಹೀಗಾಗಿ ಪ್ರತಿಭಟನೆ ನಡೆಸುವುದು ಅನಿವಾರ್ಯವಾಯಿತು. ಪೊಲೀಸರು ಇನ್ನಾದರೂ ಕ್ರಮ ಕೈಗೊಳ್ಳದೇ ಹೋದಲ್ಲಿ ಉಗ್ರ ಸ್ವರೂಪದ ಪ್ರತಿಭಟನೆ ಮಾಡಲಾಗುವುದು ಎಂದು  ಲವೀನ್ ಕೊಟ್ಯಾನ್  ಆಕ್ರೋಶ ವ್ಯಕ್ತಪಡಿಸಿದರು.
ಮೊದಲಿಗೆ ಜ್ಯೋತಿ ಸರ್ಕಲ್ ಬಳಿಯಿಂದ ಪ್ರಾರಂಭಗೊಂಡ ವಿದ್ಯಾರ್ಥಿಗಳ ಪ್ರತಿಭಟನಾ ಜಾಥ ಮಂಗಳೂರು ನಗರ ಪೊಲೀಸ್ ಕಮಿಷನರ್ ಕಚೇರಿ ಮುಂಭಾಗದಲ್ಲಿ ಧರಣಿ ಕುಳಿತು ಸಭೆ ನಡೆಸಿತು. ಪ್ರತಿಭಟನೆಯಲ್ಲಿ ನಗರದ ವಿವಿಧ ಕಾಲೇಜಿನ ನೂರಾರು ವಿದ್ಯಾರ್ಥಿನಿಯರು ಪಾಲ್ಗೊಂಡಿದ್ದರು.

 

Write A Comment