ಕರಾವಳಿ

ಕಟೀಲು ನವರಾತ್ರಿ ಪೂಜಾ ಮಹೋತ್ಸವ-ವಾಹನ ಸಂಚಾರದಲ್ಲಿ ಬದಲಾವಣೆ

Pinterest LinkedIn Tumblr

kateel_navaratri_spl_1

ಮಂಗಳೂರು, ಸೆಪ್ಟೆಂಬರ್.23 : ಕಟೀಲು ಶ್ರೀ ದುರ್ಗಾ ಪರಮೇಶ್ವರಿ ದೇವಸ್ಥಾನದಲ್ಲಿ ಸೆ. 25 ರಿಂದ ಅ. 5 ರ ವರೆಗೆ ನಡೆಯುವ ನವರಾತ್ರಿ ಪೂಜಾ ಮಹೋತ್ಸವ ಸಂದರ್ಭದಲ್ಲಿ ಸಾರ್ವಜನಿಕ ಹಿತದೃಷ್ಠಿಯಿಂದ ವಾಹನ ಸಂಚಾರದಲ್ಲಿ ತಾತ್ಕಾಲಿಕವಾಗಿ ಮಾರ್ಪಾಡು ಮಾಡಿ ಪೋಲೀಸ್ ಆಯುಕ್ತರು ಆದೇಶ ನೀಡಿರುತ್ತಾರೆ.

ಮಂಗಳೂರು ಬಜಪೆ ಕಡೆಯಿಂದ ಕಟೀಲಿಗೆ ಬರುವ ವಾಹನಗಳು ಮಲ್ಲಿಗೆಯಂಗಡಿ ಕ್ರಾಸ್‌ನಿಂದ ಏಕಮುಖವಾಗಿ ಚಲಿಸಿ ಗಿಡಿಗೆರೆ ರಸ್ತೆ ಮೂಲಕ ಕಟೀಲು ಕಾಲೇಜು ಮುಖ್ಯ ರಸ್ತೆಯನ್ನು ಸೇರುವುದು.ಕಟೀಲಿನಿಂದ ಬಜಪೆ ಮಂಗಳೂರು ಕಡೆಗೆ ಹೋಗುವ ಎಲ್ಲಾ ವಾಹನಗಳು ದೇವಸ್ಥಾನದ ಪದವಿ ಪೂರ್ವ ಕಾಲೇಜು ಮೈದಾನದ ಮೂಲಕ ವಿಜಯಾ ಬ್ಯಾಂಕ್ ಎದುರುಗಡೆ ರಸ್ತೆಯಲ್ಲಿ ಚಲಿಸಿ ಬಜಪೆ ಮಂಗಳೂರು ಕಡೆಗೆ ಹೋಗುವುದು. ಕಾರು ಹಾಗೂ ಇತರೆ ವಾಹನಗಳಿಗೆ ಪದವಿಪೂರ್ವ ಕಾಲೇಜು ಮೈದಾನದಲ್ಲಿ ಪಾರ್ಕಿಂಗ್‌ಗೆ ಹೆಚ್ಚಿನ ವ್ಯವಸ್ಥೆ ಕಲ್ಪಿಸಲಾಗಿದೆ.

ಬಸ್ಸುಗಳು ಎಂದಿನಂತೆ ಬಸ್ಸು ನಿಲ್ದಾಣಕ್ಕೆ ಬಂದು ಹೋಗುವುದು. ದೇವಸ್ಥಾನದ ಹಿರಿಯ ಪ್ರಾಥಮಿಕ ಶಾಲೆಯ ಮೈದಾನದಿಂದ ವಿಜಯಾ ಬ್ಯಾಂಕ್ ವರೆಗೆ ಇಕ್ಕೆಲಗಳಲ್ಲಿ ವಾಹನ ನಿಲುಗಡೆಯನ್ನು ಸಂಪೂರ್ಣ ನಿಷೇಧಿಸಲಾಗಿದೆ.ಸೆ.25 ರಿಂದ ಅ.5 ರ ವರೆಗೆ ದೇವಸ್ಥಾನದ ರಥಬೀದಿಯಲ್ಲಿ ವಾಹನ ನಿಲುಗಡೆಯನ್ನು ನಿಷೇಧಿಸಲಾಗಿದೆಯೆಂದು ತಿಳಿಸಿರುತ್ತಾರೆ.

Write A Comment