ಕರಾವಳಿ

ಕರುವನ್ನು ಬಿಡದ ಕಾಮುಕರು..!: ಪಾದೂರು ಲೇಬರ್‌ ಕಾಲನಿ ಬಳಿ ಪೈಶಾಚಿಕ ಘಟನೆ; ಪಶು ವೈದ್ಯರಿಂದ ಸ್ಯಾಂಪಲ್‌ ಸಂಗ್ರಹ

Pinterest LinkedIn Tumblr

Calf sexually assult

ಉಡುಪಿ : ಒಂದೂವರೆ ವರ್ಷ ಪ್ರಾಯದ ಕರುವೊಂದನ್ನು ಪೈಶಾಚಿಕ ರೀತಿಯಲ್ಲಿ ಕಾಮತೃಷೆಗೆ ಬಳಸಿಕೊಂಡ ಹೃದಯ ವಿದ್ರಾವಕ ಘಟನೆ ಮಜೂರು ಗ್ರಾಮದ ಪಾದೂರು ಲೇಬರ್‌ ಕಾಲನಿ ಬಳಿ ರವಿವಾರ ಸಂಭವಿಸಿದೆ.

ಪಾದೂರು ಶಾಂತಿಗುಡ್ಡೆ ಬಳಿಯ ನಾರಾಯಣ ಕುಲಾಲ್‌ ಎನ್ನುವವರು ತಮ್ಮ ದನ ಮತ್ತು ಕರುವನ್ನು ಮನೆ ಸಮೀಪದ ಹಾಡಿಯಲ್ಲಿ ಮೇವಿಗಾಗಿ ಕಟ್ಟುತ್ತಿದ್ದು, ಎಂದಿನಂತೆ ರವಿವಾರವೂ ಕಟ್ಟಿ ಹಾಕಿದ್ದರು. ಮಧ್ಯಾಹ್ನ ತಮ್ಮ ಒಂದೂವರೆ ವರ್ಷದ ಕರುವನ್ನು ಮನೆಗೆ ಕರೆದುಕೊಂಡು ಹೋಗಲೆಂದು ಬಂದು ನೋಡಿದಾಗ ಕರುವಿನ ಮೇಲೆ ನಡೆದಿರುವ ಪೈಶಾಚಿಕ ಕೃತ್ಯ ಬೆಳಕಿಗೆ ಬಂದಿದೆ ಈ ಬಗ್ಗೆ ಅನುಮಾನಸ್ಪದ ಪಾದೂರು ಲೇಬರ್‌ ಕಾಲನಿಯ ನಾಲ್ವರು ಯುವಕರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

Calf sexually assult (1)

Calf sexually assult

ಕಟ್ಟಿ ಹಾಕಿದ್ದ ಜಾಗದಲ್ಲಿ ಕರು ಕಾಣಿಸದೇ ಇದ್ದಾಗ ಪಕ್ಕದ ಕಾಡಿನೊಳಗೆ ತೆರಳಿ ನೋಡಿದಾಗ ಅಲ್ಲಿ ಕರು ಮತ್ತು ಕರು ನಿಂತ ಜಾಗದಲ್ಲಿ ರಕ್ತದ ಕಲೆಗಳು ಕಂಡು ಬಂದಿದ್ದವು. ಈ ಸಂದರ್ಭ ದಿಗ್ಬ್ರಾಂತರಾದ ನಾರಾಯಣ ಕುಲಾಲ್‌ ಅವರಿಗೆ ಯುವಕನೋರ್ವ ಮದ್ಯದ ಬಾಟಲಿಗಳನ್ನು ಹಿಡಿದುಕೊಂಡು ಬರುತ್ತಿರುವುದು ಕಾಣಿಸಿದ್ದು, ಅವನನ್ನು ಕೂಡಲೇ ವಶಕ್ಕೆ ಪಡೆದುಕೊಂಡರು.

ಅಷ್ಟರಲ್ಲಾಗಲೇ ಸ್ಥಳೀಯರು ಕೂಡಾ ಘಟನಾ ಸ್ಥಳಕ್ಕೆ ಧಾವಿಸಿದ್ದು, ವಶಕ್ಕೆ ಪಡೆದು ಕೊಂಡಿದ್ದ ಯುವಕನನ್ನು ವಿಚಾರಿಸಿದಾಗ ತನ್ನೊಂದಿಗೆ ಬಂದಿದ್ದ ಮೂರು ಮಂದಿ ಕಾಡಿನೊಳಗೆ ಇದ್ದಾರೆ. ಅವರಿಗೆ ಮದ್ಯದ ಬಾಟಲಿಗಳನ್ನು ತಗೆದುಕೊಂಡು ಹೋಗುತ್ತಿರುವುದಾಗಿ ಹೇಳಿದಾಗ ಕೂಡಲೇ ಸಾರ್ವಜನಿಕ್ರು ಇನ್ನು ಮೂವರನ್ನು ಹಿಡಿದಿದ್ದಾರೆ.

ಈ ವೇಳೆ ಘಟನಾ ಸ್ಥಳದಲ್ಲಿ ಉದ್ವಿಗ್ನ ಪರಿಸ್ಥಿತಿಯೂ ನಿರ್ಮಾಣವಾಯಿತು. ಘಟನೆಯ ವಿಷಯ ತಿಳಿಯುತ್ತಲೇ ಸ್ಥಳಕ್ಕಾಗಮಿಸಿದ ಶಿರ್ವ ಠಾಣಾಧಿಕಾರಿ ಅಶೋಕ್‌ ಪಿ. ಮತ್ತು ಸಿಬಂದಿ ಆಪಾದಿತರನ್ನು ವಶಕ್ಕೆ ಪಡೆದುಕೊಂಡು ಉದ್ವಿಗ್ನ ವಾತಾವರಣವನ್ನು ತಿಳಿಗೊಳಿಸಿ, ಸ್ಥಳೀಯರನ್ನು ಸಮಾಧಾನಗೊಳಿಸುವ ಪ್ರಯತ್ನ ನಡೆಸಿದರು.

ಅದಾಗಲೇ ಸ್ಥಳಕ್ಕೆ ಬಂದ ಶಿರ್ವ ಪೊಲೀಸರು ಲೇಬರ್‌ ಕಾಲನಿಯ ಮ್ಯಾನೇಜರ್‌ನ ಸಹಕಾರದೊಂದಿಗೆ ಕೃತ್ಯದಲ್ಲಿ ಭಾಗಿಯಾಗಿದ್ದಾರೆನ್ನಲಾಗಿರುವ ನಾಲ್ಕು ಮಂದಿಯನ್ನೂ ತಮ್ಮ ವಶಕ್ಕೆ ಪಡೆದುಕೊಂಡಿದ್ದು, ತನಿಖೆ ಮುಂದುವರಿಸಿದ್ದಾರೆ.

ಘಟನಾ ಸ್ಥಳಕ್ಕೆ ಧಾವಿಸಿದ ಪಶುಸಂಗೋಪನಾ ಇಲಾಖೆಯ ಸಹಾಯಕ ನಿರ್ದೇಶಕ ಶ್ರೀಕಾಂತ್ ಪಡ್ರೆ ಮತ್ತು ಶಿರ್ವ ಪಶು ವೈದ್ಯಾಧಿಕಾರಿ ಅರುಣ್‌ ಕುಮಾರ್‌ ಹೆಗ್ಡೆ ಅವರು ಲೈಂಗಿಕ ದೌರ್ಜನ್ಯಕ್ಕೊಳಗಾದ ಕರುವನ್ನು ಕೂಡಲೇಪರಿಶೀಲನೆಗೊಳಪಡಿಸಿದ್ದು ಮೇಲ್ನೋಟಕ್ಕೆ ಇದೊಂದು ಲೈಂಗಿಕ ಕ್ರಿಯೆಯ ಪ್ರಯತ್ನವೂ ಆಗಿರಬಹುದೆಂಬ ಸಂಶಯ ವ್ಯಕ್ತಪಡಿಸಿದ್ದಾರೆ.

Calf sexually assult (2)

ವೈದ್ಯಾಧಿಕಾರಿಗಳು ಘಟನಾ ಸ್ಥಳದಲ್ಲಿದ್ದ ರಕ್ತದ ಕಲೆಗಳನ್ನು ಸಂಗ್ರಹಿಸಿದ್ದು, ಕರುವಿನ ಗುಪ್ತಾಂಗದ ಬಳಿಯ ವೀರ್ಯಾಣು ಮಾದರಿಯನ್ನು ಸಂಗ್ರಹಿಸಿ ಫಾರೆನ್ಸಿಕ್‌ ಲ್ಯಾಬ್‌ಗೆ ಕಳುಹಿಸುವ ನಿಟ್ಟಿನಲ್ಲಿ ಶಿರ್ವ ಪೊಲೀಸ್‌ ಠಾಣೆಗೆ ಹಸ್ತಾಂತರಿಸುವುದಾಗಿ ತಿಳಿಸಿದ್ದಾರೆ.

ವೈದ್ಯಕೀಯ ಉನ್ನತ ತನಿಖೆಯಿಂದಷ್ಟೇ ಘಟನೆಯ ಸತ್ಯತೆಗಳು ಹೊರಬೀಳಲಿದ್ದು ಘಟನ್ದೆಯಿಂದ ಸ್ಥಳೀಯರು ದಿಗ್ಬ್ರಾಂತರಾಗಿದ್ದಾರೆ. ಕರುವನ್ನು ಬಿಡದ ಕಾಮುಕರು ಮಹಿಳೆಯರನ್ನು ಬಿಟ್ಟಾರೆಯೇ ಎಂಬ ಪ್ರಶ್ನೆ ಈಗ ಸ್ಥಳೀಯರನ್ನು ಕಾಡುತ್ತಿದೆ.

ಲೇಬರ್‌ ಕಾಲನಿ ತೆರವಿಗೆ ಆಗ್ರಹ : ನೂರಾರು ಮಂದಿ ಗ್ರಾಮಸ್ಥರು ಮತ್ತು ಕಳತ್ತೂರು ಜನಜಾಗೃತಿ ವೇದಿಕೆಯ ಕಾರ್ಯಕರ್ತರು ಪಾದೂರು ಕ್ರೂಡ್‌ ಆಯಿಲ್‌ ಸಂಬಂಧಿತ ಕೆಲಸಗಾರರಿಗಾಗಿ ಹಾಕಲಾಗಿರುವ ಲೇಬರ್‌ ಕಾಲನಿಯನ್ನು ಕೂಡಲೇ ತೆರವುಗೊಳಿಸುವಂತೆ ಆಗ್ರಹಿಸಿದರು.

Write A Comment