ಕರಾವಳಿ

ಮರಳುಗಾರಿಕೆ ನಡೆಸುತ್ತಿದ್ದವರ ಮೇಲೆ ಹಲ್ಲೆ -ದೋಣಿ ಮುಳುಗಡೆ; ತಾರಕಕ್ಕೇರಿರುವ ಮೀನುಗಾರಿಕೆ- ಮರಳುಗಾರಿಕೆ ಜಟಾಪಟಿ.!

Pinterest LinkedIn Tumblr

Akrama Maralugarike (2)

ಕುಂದಾಪುರ:  ಕುಂದಾಪುರ ಪಂಚಗಂಗಾವಳಿ ನದಿಯಲ್ಲಿ ಮರಳುಗಾರಿಕೆ ನಡೆಸುತ್ತಿದ್ದ ಉತ್ತರ ಕರ್ನಾಟಕದ ಕೂಲಿ ಕಾರ್ಮಿಕರ ಮೇಲೆ ಹಲ್ಲೆ ನಡೆಸಿ ಮರಳು ತುಂಬಿದ ದೋಣಿಯನ್ನು ನದಿಯಲ್ಲಿ ಮುಳುಗಿಸಿದ ಘಟನೆ ಜರಗಿ ಕುಂದಾಪುರ ಠಾಣೆಯಲ್ಲಿ ದೂರು ದಾಖಲಾಗಿದೆ.

ಕೆಲವು ದಿನಗಳಿಂದಲೂ ಮುಸುಕಿನ ಗುದ್ದಾಟದಂತಿದ್ದ ಸ್ಥಳೀಯ ಮೀನುಗಾರಿಕೆ ಹಾಗೂ ಮರಳುಗಾರಿಕೆ ನಡೆಸುತ್ತಿದ್ದವರ ನಡುವೆ ಇದ್ದ ಆಂತರಿಕ ಸಂಘರ್ಷ ಇದೀಗ ಸ್ಫೋಟಗೋಡಿದೆ. ಕೆಲವೇ ದಿನಗಳ ಹಿಂದೆ ಮರಳು ಗಾರಿಕೆ ನಡೆಸುತ್ತಿದ್ದವರ ವಿರುದ್ಧ ಸಮರ ಸಾರಿದ ಸ್ಥಳೀಯ ಮೀನುಗಾರರು ಮರಳು ಗಾರಿಕೆಯಿಂದ ನದಿಯಲ್ಲಿ ಉಂಟಾಗುವ ಹೊಂಡದಿಂದಾಗಿ ತಮ್ಮ ಬಲೆಗಳಿಗೆ ಮೀನುಗಳು ಲಭಿಸದೇ ತಾವು ನಷ್ಟದಲ್ಲಿದ್ದೇವೆ. ಪಂಚಗಂಗಾವಳಿಯ ರಿಂಗ್ ರಸ್ತೆಯುದ್ದಕೂ ಮರಳುಗಾರಿಕೆ ನಡೆಸುವವರು ಕೃತಕ ದಿಬ್ಬವನ್ನು ನಿರ್ಮಿಸಿರುವುದರಿಂದ ನಮ್ಮ ದೋಣಿಗಳನ್ನು ನಿಲ್ಲಿಸಲು ತೊಂದರೆಯುಂಟಾಗಿದೆ ಆದ್ದರಿಂದ ಈ ಮರಳುಗಾರಿಕೆಯನ್ನು ತಕ್ಷಣ ನಿಲ್ಲಿಸ ಬೇಕೆಂದು ಉಪವಿಭಾಗಾಧಿಕಾರಿಗಳು, ತಹಶೀಲ್ದಾರ್ ಸೇರಿದಂತೆ ಪುರಸಭೆ ಹಾಗೂ ಪರಿಸರ ಇಲಾಖೆಯವರಿಗೆ ದೂರಿತ್ತಿದ್ದರು. ಆದರೆ ಅದ್ಯಾವುದೂ ಫಲ ನೀಡದ ಹಿನ್ನಲೆಯಲ್ಲಿ ಇಂದು ಪಂಚಗಂಗಾವಳಿಯಲ್ಲಿ ಮರಳುಗಾರಿಕೆ ನಡೆಸುತಿದ್ದ ಕಾರ್ಮಿಕರ ಮೇಲೆ ಮುಗಿ ಬಿದ್ದಿದ್ದಾರೆ ಎನ್ನಲಾಗಿದೆ.

Akrama Maralugarike (3) Akrama Maralugarike (5) Akrama Maralugarike (6) Akrama Maralugarike Akrama Maralugarike (1) Akrama Maralugarike (4)

 

ಇದಕ್ಕೆ ಪ್ರತಿಕ್ರಿಯಿಸಿರುವ ಮರಳು ಗಾರಿಕೆ ನಡೆಸುವವರು ನಾವು ಕಾನೂನಿನ ಪ್ರಕಾರ ನ್ಯಾಯಯುತವಾಗಿಯೇ ಸರ್ಕಾರಕ್ಕೆ ಸಲ್ಲಿಸಬೇಕಾದ ತೆರಿಗೆಯನ್ನು ಸಲ್ಲಿಸಿ ಸರ್ಕಾರದ ಅನುಮತಿಯನ್ನು ಪಡೆದೆ ಮರಳುಗಾರಿಕೆ ನಡೆಸುತ್ತಿದ್ದೇವೆ. ಆದರೆ ಕೆಲವರು ತಮ್ಮ ವೈಯಕ್ತಿಕ ದ್ವೇಷವನ್ನು ನಮಗೆ ತಡೆ ಹಾಕುವುದರ ಮೂಲಕ ತೀರಿಸಿ ಕೊಳ್ಳುತ್ತಿದ್ದಾರೆ. ನಾವು ಈ ಉದ್ಯಮಕ್ಕಾಗಿ ಹಲವೆಡೆ ಸಾಲಸೋಲ ಮಾಡಿ ಹೊಟ್ಟೆ ಪಾಡಿಗಾಗಿ ಕಾನೂನಿನ ಪರಿಧಿಯಲ್ಲಿ ನಡೆಸುತ್ತಿದ್ದರೂ ಸುಖಾ ಸುಮ್ಮನೆ ನಮ್ಮವಿರುದ್ಧ ಕಾನೂನನ್ನು ಕೈಗೆತ್ತಿ ಕೊಳ್ಳುವ ಮೂಲಕ ಹಗೆ ಸಾಧಿಸುತಿದ್ದಾರೆ ನಮಗೆ ರಕ್ಷಣೆ ಬೇಕು ಎಂದು ದೂರಿದ್ದಾರೆ. ಹಾಗೊಂದು ವೇಳೆ ಮರಳುಗಾರಿಕೆ ನಿಷೇಧ ಮಾಡುವುದಿದ್ದರೆ ಎಲ್ಲಾ ಕಡೆಗಳಲ್ಲೂ ನಿಷೇಧ ಮಾಡಲಿ ಕಾನೂನಿನ ಪ್ರಕಾರ ವ್ಯವಹಾರ ಮಾಡುವ ನಮ್ಮ ಮೇಲೆ ಮಾತ್ರ ಯಾಕೆ ಈ ಮತ್ಸರ ಎಂದು ಹೇಳಿದ್ದಾರೆ.

ಹಾಗೆ ನೋಡಿದ್ದರೆ ಕೆಲವು ವರ್ಷಗಳಿಂದಲೂ ಈ ಭಾಗದಲ್ಲಿ ಏಕಾ‌ಏಕಿ ಚಿಗಿತು ಕೊಂಡ ಈ ಮರಳುಗಾರಿಕೆ ದಂಧೆಯು ಮೊದಲು ಆಕ್ರಮವಾಗಿಯೇ ನಡೆಸಲ್ಪಡುತ್ತಿತ್ತು, ಕುಂದಾಪುರ ಆಸು ಪಾಸಿನ ನದಿ ದಂಡೆಗಳು, ಕುದ್ರುಗಳು ಮರಳುಗಾರಿಕೆ ನಡೆಸುತ್ತಿದ್ದವರ ಪಾಲಿನ ಚಿನ್ನದ ಮೊಟ್ಟೆಗಳಾಗಿಯೇ ಇದ್ದವು ಕ್ರಮೇಣ ಇವರುಗಳಲ್ಲಯೇ ಸ್ಪರ್ಧೆಗಳು ಆರಂಭವಾಗಿ ಸಂಘರ್ಷಗಳಿಗೂ ಕಾರಣವಾಗಿತ್ತು.

ಆದರೆ ಯಾವಾಗ ಬಳ್ಳಾರಿಯ ಗಣಿ ಉದ್ಯಮವೆನ್ನುವುದು ಇಡೀ ದೇಶದಲ್ಲಿ ಸಂಚಲನ ಸೃಷ್ಟಿಸಿತೋ ಎಲ್ಲಾ ತರಹದ ಗಣಿ ಉದ್ಯಮಗಳ ಮೇಲೆ ಮುರಕೊಂಡು ಬಿದ್ದ ಸರ್ಕಾರ ಕಾನೂನಿನ ಕುಣಿಕೆಯನ್ನು ಬಿಗಿ ಗೊಳಿಸಿ ಬಿಟ್ಟಿತು ಈ ಮರಳುಗಾರಿಕೆಯು ಸಹಾ ಗಣಿ ಉದ್ಯಮದ ಸಾಲಿಗೆ ಸೇರಿದ್ದರಿಂದ ಆಕ್ರಮ ಮರಳುಗಾರಿಕೆ ನಡೆಸುವವರು ಬೇರೆ ದಾರಿಯಿಲ್ಲದೆ ಕಾನೂನಿ ಸುಪರ್ದಿಗೆ ಒಳ ಪಡುವುದು ಅನಿರ್ವಾಯವಾಯ್ತು. ಆದರೆ ಇಲ್ಲಿಯೂ ಇವರ ವಿರುದ್ಧ ಖ್ಯಾತೆ ತೆಗೆಯುವವರು ಕಣ್ಣಿಗೆ ಮಣ್ಣೆರೆಚಲೆಂಬಂತೆ ಇವರು ಕಾನೂನಿನ ಒಪ್ಪಗೆಯನ್ನು ಪಡೆದರೂ ಲೋಡುಗಳ ಲೆಕ್ಕವನ್ನು ಮರೆ ಮಾಚಿ ಆ ಮೂಲಕ ಆಕ್ರಮವಾಗಿ ಮರಳುಗಾರಿಕೆ ನಡೆಸುತ್ತಿದ್ದಾರೆಂದು ಆರೋಪಿಸುತ್ತಿದ್ದಾರೆ.

ಇಲ್ಲಿನ ನದಿಗಳು ಬಹುತೇಕವಾಗಿ ಉಪ್ಪು ನೀರಿನಿಂದ ಕೂಡಿರುವುದರಿಂದ ಉಪ್ಪಿನಂಶ ಹೊಂದಿರುವ ಈ ಮರಳಿಗೆ ಕವಡೆ ಕಾಸಿನ ಕಿಮ್ಮತ್ತು ಇರಲಿಲ್ಲಾ ಆದರೆ ಯಾವಾಗ ಕಟ್ಟಡ ಕಾಮಗಾರಿಯ ದಂಧೆ ಎಗ್ಗಿಲ್ಲದೆ ಆರಂಭ ಗೊಂಡಿತೋ ನೋಡ ನೋಡುತ್ತಲೇ ಉಪ್ಪಿನ ರುಚಿಯ ಈ ಮರಳು ಬಂಗಾರದ ಹುಡಿಯಾಗಿ ಪರಿವರ್ತನೆಗೊಂಡಿದೆ.

Write A Comment