ಕರಾವಳಿ

ಎಸ್‌ಸಿಡಿಸಿಸಿ ಬ್ಯಾಂಕಿನ ನೂತನ ಸಂಚಾರಿ ಬ್ಯಾಂಕ್‌ ವಾಹನ ಹಾಗೂ ಕ್ಯಾಶ್‌ ಡಿಪಾಸಿಟ್‌, ಚೆಕ್‌ ಡಿಪಾಸಿಟ್‌ ಕಿಯೋಕ್ಸ್‌ ಯಂತ್ರಕ್ಕೆ ಚಾಲನೆ

Pinterest LinkedIn Tumblr

scdc_bank_photo_1

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನ ಮೊಬೈಲ್‌ ಬ್ಯಾಂಕಿಂಗ್‌ಗೆ ಹೊಸದಾಗಿ ಸೇರ್ಪಡೆಗೊಂಡ ವಾಹನದ ಉದ್ಘಾಟನೆ ಹಾಗೂ ಕ್ಯಾಶ್‌ ಡಿಪಾಸಿಟ್‌, ಚೆಕ್‌ ಡಿಪಾಸಿಟ್‌ ಕಿಯೋಕ್ಸ್‌ ಯಂತ್ರಕ್ಕೆ ಚಾಲನೆ ನೀಡುವ ಕಾರ್ಯಕ್ರಮ ಶನಿವಾರ ಸಂಜೆ ನಗರದ ಕೊಡಿಯಾಲ್‌ಬೈಲ್‌ನಲ್ಲಿರುವ ಬ್ಯಾಂಕಿನ ಪ್ರಧಾನ ಕಚೇರಿಯ ಆವರಣದಲ್ಲಿ ನಡೆಯಿತು.

ನಬಾರ್ಡ್‌ನ ಮುಖ್ಯ ಮಹಾ ಪ್ರಬಂಧಕ ಜಿ. ಆರ್‌. ಚಿಂತಲ ಅವರು ಈ ಉದ್ಘಾಟನೆಯನ್ನು ನೆರವೇರಿಸಿ ಶುಭ ಹಾರೈಸಿದರು. ಎಸ್.ಸಿ.ಡಿ.ಸಿ.ಸಿ ಬ್ಯಾಂಕಿನ ಅಧ್ಯಕ್ಷ ಡಾ| ಎಂ. ಎನ್‌.ರಾಜೇಂದ್ರ ಕುಮಾರ್‌ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಜನರ ಮನೆ ಬಾಗಿಲಿಗೆ ಬ್ಯಾಂಕಿಂಗ್‌ ಸೌಲಭ್ಯ ದೊರೆಯಬೇಕು ಎನ್ನುವ ನಿಟ್ಟಿನಲ್ಲಿ ಎಸ್‌ಸಿಡಿಸಿಸಿ ಬ್ಯಾಂಕ್‌ ದೇಶದಲ್ಲೇ ಪ್ರಥಮ ಸಂಚಾರಿ ಬ್ಯಾಂಕನ್ನು ಪರಿಚಯಿಸಿದ ಖ್ಯಾತಿಯನ್ನು ಹೊಂದಿದೆ ಎಂದು ಡಾ| ಎಂ.ಎನ್‌. ರಾಜೇಂದ್ರ ಕುಮಾರ್‌ ಅವರು ಈ ಸಂದರ್ಭದಲ್ಲಿ ತಿಳಿಸಿದರು.

ಅತ್ಯಾಧುನಿಕ ತಂತ್ರಜ್ಞಾನದೊಂದಿಗೆ ಕಾರ್ಯನಿರ್ವಹಿಸಲಿರುವ ಈ ಸಂಚಾರಿ ಬ್ಯಾಂಕ್‌, ಶಾಖೆಗಳಲ್ಲಿ ಲಭ್ಯವಿರುವ ಎಲ್ಲ ವ್ಯವಹಾರಗಳನ್ನು ನಿರ್ವಹಿಸಲಿದೆ. ಠೇವಣಿ ಸಂಗ್ರಹ, ಖಾತೆ ನಿರ್ವಹಣೆ, ಚೆಕ್‌ ನಗದೀಕರಣ ಹಾಗೂ ಎಲ್ಲ ವಿಧದ ಸಾಲ ಸೌಲಭ್ಯಗಳ ಜತೆಗೆ ಕೋರ್‌ ಬ್ಯಾಂಕಿಂಗ್‌ ಮತ್ತು ಆರ್‌ಟಿಜಿಎಸ್‌/ ನೆಫ್ಟ್ ಸೌಲಭ್ಯಗಳು ದೊರೆಯಲಿವೆ. ಎಟಿಎಂ ಸೌಲಭ್ಯವನ್ನು ಹೊಂದಿರುವ ಈ ಸಂಚಾರಿ ಬ್ಯಾಂಕಿನಲ್ಲಿ ಎಸ್‌ಸಿಡಿಸಿಸಿ ಬ್ಯಾಂಕಿನ ಯಾವುದೇ ಶಾಖೆಯ ವ್ಯವಹಾರವನ್ನು ಮಾಡಬಹುದಾಗಿದೆ ಎಂದು ಹೇಳಿದರು.

scdc_bank_photo_2 scdc_bank_photo_3 scdc_bank_photo_4 scdc_bank_photo_5 scdc_bank_photo_6 scdc_bank_photo_7

ಕ್ಯಾಶ್‌ ಡಿಪಾಸಿಟ್‌, ಚೆಕ್‌ ಡಿಪಾಸಿಟ್‌ ಕಿಯೋಕ್ಸ್‌ ಯಂತ್ರ :

ಗ್ರಾಹಕರಿಗೆ ತ್ವರಿತ ಸೇವೆ ಒದಗಿಸುವ ದೃಷ್ಟಿಯಿಂದ ಇದೇ ಮೊದಲ ಬಾರಿಗೆ ಬ್ಯಾಂಕಿನ ಕೊಡಿಯಾಲ್‌ಬೈಲ್‌ ಪ್ರಧಾನ ಶಾಖೆಯಲ್ಲಿ ಕ್ಯಾಶ್‌ ಡಿಪಾಸಿಟ್‌ ಹಾಗೂ ಚೆಕ್‌ ಡಿಪಾಸಿಟ್‌ ಕಿಯೋಕ್ಸ್‌ ಯಂತ್ರವನ್ನು ಅಳವಡಿಸಲಾಗಿದೆ. ಈ ಯಂತ್ರದ ಮೂಲಕ ನಗದು ಠೇವಣಿಯನ್ನು ಪಾವತಿಸಿ ಮುದ್ರಿತ ರಶೀದಿ ಹಾಗೂ ಚೆಕ್‌ ಡಿಪಾಸಿಟ್‌ ಮಾಡಿ ಅದರ ಸ್ಕಾನಿಂಗ್‌ ಪ್ರತಿಯನ್ನು ಪಡೆಯಬಹುದು. ಹಾಗಾಗಿ ಗ್ರಾಹಕರು ಬ್ಯಾಂಕಿನ ಕೌಂಟರ್‌ನಲ್ಲಿ ವ್ಯವಹರಿಸುವ ಅವಶ್ಯಕತೆ ಇರುವುದಿಲ್ಲ ಎಂದು ಎಂ.ಎನ್.ಆರ್ ತಿಳಿಸಿದರು.

scdc_bank_photo_8 scdc_bank_photo_10 scdc_bank_photo_11 scdc_bank_photo_12

ಕಾರ್ಯಕ್ರಮದಲ್ಲಿ ಬ್ಯಾಂಕಿನ ಉಪಾಧ್ಯಕ್ಷರಾದ ಶ್ರೀ ವಿನಯ ಕುಮಾರ್ ಸೂರಿಂಜೆ, ನಿರ್ದೇಶಕರುಗಳಾದ ಶ್ರೀ ಬಿ. ನಿರಂಜನ್, ಶ್ರೀ ಟಿ.ಜಿ. ರಾಜಾರಾಮ್ ಭಟ್, ಶ್ರೀ ಭಾಸ್ಕರ್ ಎಸ್. ಕೋಟ್ಯಾನ್, ಶ್ರೀ ಬಿ. ರಘುರಾಮ ಶೆಟ್ಟಿ, ಶ್ರೀ ಎಂ. ವಾದಿರಾಜ ಶೆಟ್ಟಿ, ಶ್ರೀ ಕೆ.ಎಸ್. ದೇವರಾಜ್, ಶ್ರೀ ಟಿ.ಜಿ. ರಾಜಾರಾಮ್ ಭಟ್, ನಿರ್ದೇಶಕರಾದ ಶ್ರೀ ಎಂ. ಗೋಪಾಲಕೃಷ್ಣ ಭಟ್, ಶ್ರೀ ಕೆ. ಕಿಶನ್ ಹೆಗ್ಡೆ ಕೊಳ್ಕೆಬೈಲ್, ಶ್ರೀ ಸದಾಶಿವ ಉಳ್ಳಾಲ್, ಶ್ರೀ ರಾಜು ಪೂಜಾರಿ, ಶ್ರೀ ಶಶಿಕುಮಾರ್ ರೈ ಬಿ, ಶ್ರೀ ಬಿ. ರಾಜೇಶ್ ರಾವ್, ಶ್ರೀ ಎಸ್.ಬಿ. ಜಯರಾಮ ರೈ, ದಕ್ಷಿಣ ಕನ್ನಡ ಜಿಲ್ಲಾ ಸಹಕಾರಿ ಸಂಘಗಳ ಉಪನಿಬಂಧಕರಾದ ಶ್ರೀ ಬಿ.ಕೆ. ಸಲೀಂ, ಬ್ಯಾಂಕಿನ ವ್ಯವಸ್ಥಾಪನಾ ನಿರ್ದೇಶಕ ರಾದ ಶ್ರೀ ಎಂ. ಗೋಪಾಲಕೃಷ್ಣ ಭಟ್, ಬ್ಯಾಂಕಿನ ವಿಶೇಷ ಅಧಿಕಾರಿ ಶ್ರೀ ಲಕ್ಷ್ಮಣ್ ಕುಮಾರ್ ಮಲ್ಲೂರು ಹಾಗೂ ಬ್ಯಾಂಕಿನ ಇತರ ಅಧಿಕಾರಿಗಳು ಉಪಸ್ಥಿತರಿದ್ದರು.

Write A Comment