ಫೋಟೋ: ಅಶೋಕ್ ಬೆಳ್ಮಣ್
ದುಬೈ, ಸೆ.20: ಬ್ರಹ್ಮಶ್ರೀ ನಾರಾಯಣಗುರುಗಳ 160ನೆ ಜನ್ಮೋತ್ಸದ ಹಿನ್ನೆಲೆಯಲ್ಲಿ ದುಬೈ ಬಿಲ್ಲವಾಸ್ ಫ್ಯಾಮಿಲಿಯ ಆಶ್ರಯದಲ್ಲಿ ಬರ್‌ದುಬೈಯ ಮೀನಾಬಝಾರ್‌ನ ಸಿಂಧಿ ಸೆರಮೋನಿಯಲ್ ಹಾಲ್‌ನಲ್ಲಿ ಗುರುಪೂಜಾ ಕಾರ್ಯವನ್ನು ಆಯೋಜಿಸಲಾಗಿತ್ತು.
ಪೂಜಾ ವಿಧಿವಿಧಾನ ಕಾರ್ಯಕ್ರಮವನ್ನು ಪುರೋಹಿತರು ಹಾಗೂ ಭಕ್ತಾಧಿಗಳು ದೀಪ ಬೆಳಗಿಸಿ ಉದ್ಘಾಟಿಸಿದರು.
ಊಎಳಗ್ಗೆ 10.15 ಗಂಟೆಗೆ ಆರಂಭವಾದ ಪೂಜಾ ಕೈಕಂಕರ್ಯವು ಮಧ್ಯಾಹ್ನ 1 ಗಂಟೆಯವರೆಗೂ ನಡೆದಿದ್ದು, ಸುಮಾರು 500ಕ್ಕೂ ಹೆಚ್ಚು ಮಂದಿ ಭಕ್ತಾಧಿಗಳು ಪಾಲ್ಗೊಂಡಿದ್ದರು.
ಕಟಪಾಡಿ ವಿಶ್ವನಾಥ ಕ್ಷೇತ್ರದ ಮುಖ್ಯ ಅರ್ಚಕರಾದ ದೇವದಾಸ್ ಶಾಂತಿಯವರು ಪೂಜಾ ವಿಧಿವಿಧಾನವನ್ನು ನೆರವೇರಿಸಿದರು. ಜೀತೇಂದ್ರ ಸುವರ್ಣ ದಂಪತಿಗಳು ಪೂಜಾ ಕಾರ್ಯದಲ್ಲಿ ಪಾಲ್ಗೊಂಡಿದ್ದರು. ಪೂಜಾ ಕಾರ್ಯದ ಬಳಿಕ ಸ್ಪೈಸ್ ಗಾರ್ಡನ್‌ರವರಿಂದ ಮಹಾಪ್ರಸಾದ ವಿತರಿಸಲಾಯಿತು.
3 Comments
Ashok Belman
narayana guru devaru ellarigu olleyadu madali.pooje bahala chennagithu..
Yogish salian.
very nice god bless u all
savin salian borgudde
super pooje…narayana guru devaru ella baktharigu olleyadu madali