ಕರಾವಳಿ

ಆಕ್ರಮ ಮರದ ದಿಮ್ಮಿ ಸಾಗಾಟ : ಆರೋಪಿಯಿಂದ ಲಾರಿ ಸಹಿತಾ ಲಕ್ಷಾಂತರ ಮೌಲ್ಯದ ಮರ ವಶ

Pinterest LinkedIn Tumblr

ಬಂಟ್ವಾಳ; ಬಂಟ್ವಾಳ -ಕಡೂರು ರಾಷ್ಟ್ರೀಯ ಹೆದ್ದಾರಿ ನಡುವಿನ ಕಾಡಬೆಟ್ಟು ಎಂಬಲ್ಲಿ ಅಕ್ರಮವಾಗಿ ಮರದ ದಿಮ್ಮಿಗಳನ್ನು ಸಾಗಿಸುತ್ತಿದ್ದ ಲಾರಿಯೊಂದನ್ನು ಮಂಗಳೂರಿನ ಸಂಚಾರಿ ಅರಣ್ಯ ತನಿಖಾ ತಂಡವು ಕಾರ್ಯಾಚರಣೆ ನಡೆಸಿ ವಶಪಡಿಸಿಕೊಂಡ ಘಟನೆ ಬುಧವಾರ ತಡರಾತ್ರಿ ನಡೆದಿದೆ.

ಲಾರಿ ಚಾಲಕ ಜಲೀಲ್ ಎಂದು ಗುರುತಿಸಲಾಗಿದ್ದು, ಬೆಳ್ತಂಗಡಿ ಕಡೆಯಿಂದ ಕೇರಳ ಪ್ಲೈವುಡ್ ಘಟಕಕ್ಕೆ ಮರದ ದಿಮ್ಮಿಗಳನ್ನು ನೀಲಿ ಬಣ್ಣದ ಟರ್ಪಾಲು ಮುಚ್ಚಿಕೊಂಡು ಸಾಗಿಸುತ್ತಿರುವ ಬಗ್ಗೆ ದೊರೆತ ಖಚಿತ ಮಾಹಿತಿ ಹಿನ್ನೆಲೆಯಲ್ಲಿ ಕಾರ್ಯಾಚರಣೆ ನಡೆಸಲಾಗಿತ್ತು. ಆರೋಪಿಯಿಂದ ಲಾರಿ ಸಹಿತ ಲಕ್ಷಕ್ಕೂ ಮಿಕ್ಕಿ ಮೊತ್ತದ ವಿವಿಧ ಜಾತಿಗೆ ಸೇರಿದ ಮರದ ದಿಮ್ಮಿಗಳನ್ನು ವಶಪಡಿಸಿಕೊಂಡು ಬಂಟ್ವಾಳ ವಲಯ ಅರಣ್ಯ ಇಲಾಖೆಗೆ ಹಸ್ತಾಂತರಿಸಲಾಗಿದೆ ಎಂದು ತಿಳಿದು ಬಂದಿದೆ.

ಸಂಚಾರಿ ಅರಣ್ಯ ತನಿಖಾಧಿಕಾರಿ ಸುರೇಶ್ ನೇತೃತ್ವದ ತಂಡದಲ್ಲಿ ಅನಿಲ್, ಮಹಾಬಲ, ಸಂದೀಪ್ ಮತ್ತು ಚಾಲಕ ಜಯಪ್ರಕಾಶ್ ಮತ್ತಿತರರು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

Write A Comment