ಮಂಗಳೂರು: ಮಾಜಿ ಶಾಸಕ ಕೆ.ರಘುಪತಿ ಭಟ್ಟರ ಪತ್ನಿ ಪದ್ಮಪ್ರಿಯಾ ಆತ್ಮಹತ್ಯೆಯಲ್ಲಿ ಅತುಲ್ ರಾವ್ ಪಾತ್ರದ ಬಗ್ಗೆ ತನಿಖೆ ನಡೆಸಿ ಆರೋಪ ಪಟ್ಟಿ ಸಲ್ಲಿಸಬೇಕು ಎಂದು ಉಚ್ಚ ನ್ಯಾಯಾಲಯ ಆದೇಶ ನೀಡಿದೆ.
2008ರಲ್ಲಿ ಪದ್ಮಪ್ರಿಯಾ ಅವರ ಸಾವು ಸಂಭವಿಸಿತ್ತು. 2011ರಲ್ಲಿ ಸಿಒಡಿ ಎಸ್ಪಿಯವರು ತನಿಖೆ ನಡೆಸಿ ಆರೋಪಿ ಅತುಲ್ರಾವ್ ಅವರ ಮೇಲಿನ ಆರೋಪಪಟ್ಟಿಯನ್ನು ಉಡುಪಿ ಜೆಎಂಎಫ್ಸಿ ನ್ಯಾಯಾಲಯಕ್ಕೆ ಸಲ್ಲಿಸಿದ್ದರು. ಪದ್ಮಪ್ರೀಯ ಆತ್ಮಹತ್ಯೆಗೆ ಅತುಲ್ರಾವ್ ಪ್ರಚೋದನೆ ಕಾರಣ ಎಂದು ರಘುಪತಿ ಭಟ್ ದೂರಿನಲ್ಲಿ ಉಲ್ಲೇಖಿಸಿದ್ದರು.
ಪೊಲೀಸರು ನಡೆಸಿದ ತನಿಖೆಯಲ್ಲಿ ಪ್ರಚೋದನೆಯ ಆರೋಪ ಕೈಬಿಟ್ಟಿದ್ದಾರೆ ಎಂದು ಆರೋಪಿಸಿ ಪ್ರಕರಣದ ಮರು ತನಿಖೆ ಕೋರಿ ನ್ಯಾಯಾಲಯದಲ್ಲಿ ಪ್ರಶ್ನಿಸಿದ್ದರು. ರಘುಪತಿ ಭಟ್ಟರ ಖಾಸಗಿ ದೂರು ಸ್ವೀಕರಿಸಲು ಆಧೀನ ನ್ಯಾಯಾಲಯ ನಿರಾಕರಿಸಿತ್ತು. ರಘುಪತಿ ಭಟ್ ಉಚ್ಚ ನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಸಿದರು. ನ್ಯಾಯಾಧೀಶ ನ್ಯಾ.ಆನಂದ ಬೈರ ರೆಡ್ಡಿ ಅವರು ಪ್ರಕರಣವನ್ನು ಮರು ತನಿಖೆ ನಡೆಸಬೇಕು ಎಂದು ಮಂಗಳವಾರ ತೀರ್ಪು ನೀಡಿದ್ದಾರೆ ಎಂದು ಭಟ್ ಅವರ ನ್ಯಾಯವಾದಿ ಪ್ರದೀಪ್ಕುಮಾರ್ ತಿಳಿಸಿದ್ದಾರೆ.