ಕರಾವಳಿ

ತೆರಿಗೆ ಹಣದಲ್ಲಿ ಅವ್ಯವಹಾರ ಆರೋಪ: ಹರೇಕಳ ಗ್ರಾಪಂ ಎದುರು ಪ್ರತಿಭಟನೆ

Pinterest LinkedIn Tumblr

16mdp2

ಕೊಣಾಜೆ, ಸೆ.16: ಹರೇಕಳ ಗ್ರಾಮ ಪಂಚಾಯತ್‌ನ ತೆರಿಗೆ ಹಣದಲ್ಲಿ ಅವ್ಯವಹಾರ ನಡೆಸಿದ ಗ್ರಾಪಂ ಸದಸ್ಯನ ಹೆಸರನ್ನು ಪಂಚಾಯತ್ ಅಭಿವೃದ್ಧಿ ಅಧಿಕಾರಿ ಬಹಿರಂಗಗೊಳಿಸುವಂತೆ ಆಗ್ರಹಿಸಿ ಸಿಪಿಐಎಂ ಹಾಗೂ ಡಿವೈಎಫ್‌ಐ ಮುಖಂಡರು ಹಾಗೂ ಕಾರ್ಯಕರ್ತರು ಪಟ್ಟು ಹಿಡಿದು ಪ್ರತಿಭಟನೆ ನಡೆಸಿದ ಪ್ರಸಂಗ ಮಂಗಳವಾರ ನಡೆಯಿತು.

ಹರೇಕಳ ಗ್ರಾಮ ಪಂಚಾಯತ್ ನಲ್ಲಿ ಉದ್ಯೋಗ ಖಾತ್ರಿ ಯೋಜನೆಯ ಅಸಮರ್ಪಕ ಬಳಕೆ, ಮನೆ ನಿವೇಶನ ಹಾಗೂ ತೆರಿಗೆ ಹಣ ಅವ್ಯವಹಾರದ ವಿರುದ್ಧ ಸಿಪಿಐಎಂ ಹಾಗೂ ಡಿವೈಎಫ್‌ಐ ಜಂಟಿಯಾಗಿ ಹರೇಕಳ ಗ್ರಾಮ ಪಂಚಾಯತ್ ಎದುರು ಪ್ರತಿಭಟನೆಯನ್ನು ಹಮ್ಮಿಕೊಂಡಿತ್ತು. ಈ ಸಂದರ್ಭದಲ್ಲಿ ಗ್ರಾಮ ಪಂಚಾ ಯತ್‌ನ ತೆರಿಗೆ ಹಣದಲ್ಲಿ ಅವ್ಯವ ಹಾರ ಆಗಿರುವುದನ್ನು ಪಿಡಿಒ ಬಹಿ ರಂಗವಾಗಿ ಒಪ್ಪಿಕೊಂಡ ಹಿನ್ನೆಲೆಯಲ್ಲಿ ಅವ್ಯವಹಾರ ನಡೆಸಿದ ಪಂಚಾಯತ್ ಸದಸ್ಯನ ಹೆಸರು ಬಹಿರಂಗಪಡಿಸು ವಂತೆ ಆಗ್ರಹಿಸಿ ಪ್ರತಿಭಟನಕಾರರು ಪಟ್ಟು ಹಿಡಿದರು.

ಪಂಚಾಯತ್‌ನಲ್ಲಿ ನಡೆದಿರುವ ಅವ್ಯವಹಾರದ ಬಗ್ಗೆ ಸಂಬಂಧಪಟ್ಟವರು ಸಮಗ್ರ ಮಾಹಿತಿ ನೀಡದೆ ಸ್ಥಳದಿಂದ ಕದಲುವುದಿಲ್ಲ ಎಂದು ಎಚ್ಚರಿಸಿದರು. ಪಿಡಿಒ ಕಮಲೇಶ್, ಅಧ್ಯಕ್ಷ ಮೋಹನ್‌ದಾಸ್ ಶೆಟ್ಟಿ, ಮಾಜಿ ಅಧ್ಯಕ್ಷ ಮುಹಮ್ಮದ್ ಶಾಲಿ ಹಾಗೂ ಸದಸ್ಯ ಬಶೀರ್ ಉಂಬುದ ಪ್ರತಿಭಟನಕಾರರ ಬಳಿ ಮಾತುಕತೆ ನಡೆಸಿದರು. ಕಳೆದ ಆರು ತಿಂಗಳಿಂದ ಲಕ್ಷಕ್ಕೂ ಮಿಕ್ಕಿದ ತೆರಿಗೆ ಹಣ ಬ್ಯಾಂಕ್‌ಗೆ ಸಂದಾಯವಾಗದಿದ್ದು, ಸದಸ್ಯರೇ ತಮ್ಮ ಸ್ವಾರ್ಥಕ್ಕೆ ಬಳಸಿದ್ದಾರೆ ಎಂದು ಪ್ರತಿಭಟನಕಾರರು ಆರೋಪಿಸಿದರು. ಪ್ರತಿಭಟನೆಯ ಸಂದರ್ಭದಲ್ಲಿ ಈ ಬಗ್ಗೆ ಸ್ಪಷ್ಟನೆ ನೀಡಲು ಮುಂದಾದ ಪಿಡಿಒ ಅವ್ಯವಹಾರ ನಡೆದಿದ್ದರೂ ಸರಿಪಡಿಸಲಾಗಿದೆ ಎಂದರು.

ಆದರೆ ಅವ್ಯವಹಾರದಲ್ಲಿ ಸದಸ್ಯ ಭಾಗಿಯಾ ಗಿದ್ದು, ಆತನ ಹೆಸರು ಹೇಳುವಂತೆ ಪ್ರತಿಭಟನಕಾರರು ಒತ್ತಾಯಿಸಿದರು. ಇದನ್ನು ಪಿಡಿಒ ನಿರಾಕರಿಸಿದಾಗ ಪಂಚಾ ಯತ್ ಸಾಮಾನ್ಯ ಸಭೆಯಲ್ಲಿ ಸದಸ್ಯನೋರ್ವ 5ಸಾವಿರ ರೂ. ನೀಡಿರುವುದನ್ನು ಕಣ್ಣಾರೆ ಕಂಡಿರುವು ದಾಗಿ ಸ್ಥಳೀಯರೊಬ್ಬರು ಹೇಳಿದರು. ಆದರೂ ಆತನ ಹೆಸರು ಹೇಳಲು ಪಿಡಿಒ ನಿರಾಕರಿಸಿದಾಗ ಉಪಸ್ಥಿತರಿದ್ದ ಜನಪ್ರತಿನಿಧಿಗಳು ಓರ್ವ ಸದಸ್ಯನ ತಪ್ಪಿಗೆ ಎಲ್ಲಾ ಸದಸ್ಯರು ಕಳ್ಳರೆನ್ನುವ ಭಾವನೆ ಜನರಲ್ಲಿ ಬರುತ್ತದೆ. ಈ ಕಾರಣಕ್ಕೆ ಹೆಸರು ಬಹಿರಂಗವಾಗಿ ಹೇಳುವಂತೆ ಪಿಡಿಒಗೆ ಆಗ್ರಹಿಸಿದರು. ತಾಲೂಕು ಪಂಚಾಯತ್ ಸಹಾ ಯಕ ನಿರ್ದೇಶಕಿ ಸವಿತಾ ಪ್ರತಿಭಟನೆ ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿ, ಪ್ರತಿದಿನ ಜಮೆಯಾದ ತೆರಿಗೆ ಹಣದಲ್ಲಿ 500ರೂಪಾಯಿ ಹೊರತುಪಡಿಸಿ ಉಳಿದ ಹಣ ಬ್ಯಾಂಕ್‌ಗೆ ಕಟ್ಟಬೇಕಿದ್ದು ಅದರ ಹೊಣೆ ಸಿಬ್ಬಂದಿಯದ್ದಾಗಿದೆ. ಪಿಡಿಒ ಗಮನ ಹರಿಸಬೇಕಿದ್ದರೂ ಪಂಚಾಯತ್‌ನಲ್ಲಿ ಬೇಜವಾಬ್ದಾರಿತನ ನಡೆದಿರುವುದು ಸ್ಪಷ್ಟವಾಗಿ ಕಾಣುತ್ತಿದೆ. ಈ ಬಗ್ಗೆ ಸಮಗ್ರ ತನಿಖೆ ನಡೆಸಿ ಮುಂದಿನ ಸಾಮಾನ್ಯ ಸಭೆ ವೇಳೆಗೆ ಮಾಹಿತಿ ನೀಡುವ ಭರವಸೆ ನೀಡಿದರು.

ಡಿವೈಎಫ್‌ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ, ಸಿಪಿಐಎಂ ವಲಯ ಕಾರ್ಯ ದರ್ಶಿ ಕೃಷ್ಣಪ್ಪ ಸಾಲ್ಯಾನ್, ಸಿಐಟಿಯು ಜಿಲ್ಲಾ ಕಾರ್ಯದರ್ಶಿ ವಸಂತ ಆಚಾರಿ, ಪ್ರಾಂತ ರೈತ ಸಂಘದ ಕಾರ್ಯದರ್ಶಿ ಯಾದವ ಶೆಟ್ಟಿ, ಪಂಚಾಯತ್ ಸದಸ್ಯೆ ದೇವಕಿ, ವಲಯ ಡಿವೈಎಫ್‌ಐ ಸದಸ್ಯ ಕೆ.ಅಶ್ರಫ್, ಹರೇಕಳ ಗ್ರಾಮ ಅಧ್ಯಕ್ಷ ಇಸ್ಮಾಯೀಲ್, ಕೋಶಾಧಿಕಾರಿ ಎವ್‌ರಿಸ್ ಕುಟಿನ್ಹಾ, ಆಲಡ್ಕ ಘಟಕಾಧ್ಯಕ್ಷ ಸಿರಾಜ್, ನ್ಯೂಪಡ್ಪು ಘಟಕಾಧ್ಯಕ್ಷ ಯಾಕೂಬ್ ಮತ್ತಿತರರು ಉಪಸ್ಥಿತರಿದ್ದರು.

Write A Comment