ಕರಾವಳಿ

ರಿಯಲ್ ಎಸ್ಟೇಟ್ ದಂಧೆ ತಡೆಗೆ ಐಎಎಸ್ ಅಧಿಕಾರಿ ನೇಮಕಕ್ಕೆ ಚಿಂತನೆ: ವಿನಯಕುಮಾರ್ ಸೊರಕೆ

Pinterest LinkedIn Tumblr

sorake___

ಹಾಸನ, ಸೆ.15: ಎಲ್ಲಾ ಜಿಲ್ಲೆಗೂ ಸೇರಿ ಒಬ್ಬ ಐಎಎಸ್ ಅಧಿಕಾರಿಯನ್ನು ಕಮಿಷನರನ್ನಾಗಿ ನೇಮಕ ಮಾಡಲು ಚಿಂತನೆ ನಡೆಸಲಾಗಿದೆ ಎಂದು ನಗರಾ ಭಿವೃದ್ಧಿ ಸಚಿವ ವಿನಯಕುಮಾರ್ ಸೊರಕೆ ತಿಳಿಸಿದ್ದಾರೆ.

ನಗರದ ಬಿ.ಎಂ. ರಸ್ತೆಯಲ್ಲಿರುವ ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿರುವ ಸ್ಥಳೀಯ ಸಂಸ್ಥೆ ಮತ್ತು ನಗರಾಭಿವೃದ್ಧಿಗೆ ಐಎಎಸ್ ಅಧಿಕಾರಿಯನ್ನು ನೇಮಕ ಮಾಡುವ ಮೂಲಕ ರಾಜ್ಯದಲ್ಲಿ ನಡೆಸಲಾ ಗುತ್ತಿರುವ ರಿಯಲ್ ಎಸ್ಟೇಟ್ ದಂಧೆ, ಅಕ್ರಮಕ್ಕೆ ತಡೆ ಮಾಡುವ ಉದ್ದೇಶವನ್ನು ಹೊಂದಿರುವುದಾಗಿ ಹೇಳಿದರು. 453 ಎಕರೆ ಎಸ್.ಎಂ. ಕೃಷ್ಣ ನಗರ ಯೋಜನೆಗೆ 255.60 ಕೋಟಿ ರೂ. ವೆಚ್ಚಕ್ಕೆ ಪೌರಾಡಳಿತ ಅನುಮತಿ ನೀಡಿದೆ. ಕ್ಯಾಬಿನೆಟ್ ಮೀಟಿಂಗ್ ನಂತರ ಅನುಮೋದನೆ ದೊರೆಯಲಿದೆ.

ನಗರವನ್ನು ಮಹಾನಗರ ಮಾಡಲು ಯೋಜನೆ ಸಿದ್ಧಪಡಿಸಲಾಗಿದೆ. ವಿಜಯ ನಗರವನ್ನು 2.90 ಕೋಟಿ ಅನುದಾನದಲ್ಲ್ಲಿ ಅಭಿವೃದ್ಧಿಗೊಳಿಸ ಲಾಗುವುದು. ನಗರದ ಮಹಾ ವೀರ ವೃತ್ತವನ್ನು 75 ಲಕ್ಷ ರೂ. ಅನುದಾನದಲ್ಲಿ ದುರಸ್ತಿಪಡಿಲಾಗುವುದು. ದಿನದ 24 ಗಂಟೆ ನೀರು ಪೂರೈಕೆ ಮಾಡುವ ಬಗ್ಗೆ ಈಗಾಗಲೇ ಪ್ರಸ್ತಾವನೆ ಕಳುಹಿಸಲಾಗಿದೆ ಎಂದು ಅವರು ಹೇಳಿದರು. ಕಾಂಗ್ರೆಸ್ ಸರಕಾರ ಅಧಿ ಕಾರಕ್ಕೆ ಬಂದ ಮೇಲೆ ಇದುವರೆಗೂ ಯಾವ ಡಿ ನೋಟಿ ಫಿಕೇಶನ್ ಮಾಡಲಾಗಿಲ್ಲ. ಪ್ರಾಧಿಕಾ ರದಲ್ಲಿ ಕೊರತೆ ಇರುವ ಸಿಬ್ಬಂದಿಯನ್ನು ತುಂಬಿಸುವ ಚಿಂತನೆ ನಡೆಸಲಾಗಿದೆ ಎಂದರು. ಈ ಸಂದರ್ಭದಲ್ಲಿ ಶಾಸಕ ಎ. ಮಂಜು ಮತ್ತಿತರರು ಪಾಲ್ಗೊಂಡಿದ್ದರು.

Write A Comment