ಕರಾವಳಿ

ಎಂ.ಸಿ.ಎಫ್‌. ಕಂಪನಿ ಯಾವೂದೇ ಕಾರಣಕ್ಕೂ ಮುಚ್ಚುವುದಕ್ಕೆ ಬಿಡುವುದಿಲ್ಲ ; ಸಂಸದ ನಳಿನ್ ಕುಮಾರ್ ಕಟೀಲ್

Pinterest LinkedIn Tumblr
nalin_kumar_kateel_1
ಮಂಗಳೂರು : ಮಂಗಳೂರಿನ ಪಣಂಬೂರಿನಲ್ಲಿರುವ ಎಂ.ಸಿ.ಎಫ್‌. ಕಂಪನಿಯನ್ನು ಯಾವೂದೇ ಕಾರಣಕ್ಕೂ ಮುಚ್ಚುವುದಕ್ಕೆ ಬಿಡುವುದಿಲ್ಲ ಎಂದು ಸಂಸದ ನಳಿನ್‌ ಕುಮಾರ್‌ ಕಟೀಲು ಹೇಳಿದ್ದಾರೆ.ಅವರು  ಎಂ.ಸಿ.ಎಫ್‌. ಆಶ್ರಯದಲ್ಲಿ ನಡೆಯುತ್ತಿರುವ ಕಣ್ಣಿನ ಶಿಬಿರದಲ್ಲಿ ಭಾಗವಹಿಸಲು ಬಾನುವಾರ ಕಟೀಲು ಮಲ್ಲಿಗೆಯಂಡಿಯಲ್ಲಿ  ಆಗಮಿಸಿದ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು.
ಈ ಹಿಂದಿನ ಸರಕಾರ ನಾಪ್ತಾ ಕೊರತೆ ಕಾರಣದಿಂದ ಈ ನಿರ್ಧಾರ ಮಾಡಿದ್ದು, ಮೋದಿ ಸರಕಾರ ಬಂದ ಬಳಿಕ ಮತ್ತೆ ಮೂರು ತಿಂಗಳ ಹೆಚ್ಚಿನ ಅವಕಾಶ ನೀಡಲಾಗಿದೆ. ನಾಪ್ತಾದ ಪರ್ಯಾಯವಾಗಿ ಸ್ಥಳೀಯವಾಗಿ ದೊರೆಯುವ ಗ್ಯಾಸ್‌ ಮೂಲಕ ಕಂಪೆನಿ ಮುಂದುವರಿಸುವಂತೆ ತಿಳಿಸಲಾಗಿದೆ. ಕಂಪೆನಿಯ ಹಿಂದೆ ಸಾವಿರಾರು ಕಟುಂಬಗಳು ಇವೆ ಎಂಬುದು ಮನವರಿಕೆಯಾಗಿದೆ ಎಂದರು.
ಕರಾವಳಿ ಸಂಸದರು ಈ ಬಗ್ಗೆ ಈಗಾಗಲೇ ಸಚಿವ ಅನಂತ ಕುಮಾರ್‌ಗೆ ಮನವರಿಕೆ ಮಾಡಿದ್ದಾರೆ. ಮುಂದಿನ ಕೆಲವು ದಿನಗಳಲ್ಲಿ ಕಂಪೆನಿಯ ಅಧಿಕಾರಿ ವರ್ಗ, ಕಾರ್ಮಿಕ ವರ್ಗದ ನಿಯೋಗವನ್ನು ಪ್ರಧಾನಿ ಹಾಗೂ ಸಚಿವರಲ್ಲಿಗೆ ಕರೆದುಕೊಂಡು ಹೋಗಿ ಮನವರಿಕೆ ಮಾಡಿಕೊಡಲಾಗುವುದು ಎಂದು ನಳಿನ್ ಕುಮಾರ್ ಕಟೀಲ್ ಹೇಳಿದರು.
ಮುಖ್ಯಮಂತ್ರಿಗಳಿಗೆ ಧೈರ್ಯವಿದ್ದರೆ ಸಿಮಿಯಂತಹ ಸಂಘಟನೆಗಳನ್ನು ನಿಷೇಧಿಸಲಿ..
ಇದೇ ಸಂದರ್ಭದಲ್ಲಿ ಶ್ರೀರಾಮ ಸೇನೆಯನ್ನು ನಿಷೇಧಿಸುವ ಸಿ.ಎಂ ತೀರ್ಮಾನದ ಬಗ್ಗೆ ಸುದ್ಧಿಗಾರರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಂಸದರು, ಮಾನ್ಯ ಮುಖ್ಯಮಂತ್ರಿಗಲೂ ಹಿಂದೂ ಪರ ಸಂಘಟನೆಗಳನ್ನು ನಿಷೇಧಿಸುವ ನಿರ್ಧಾರ ಕೈಗೊಂಡಿರುವುದು ಸರಿಯಲ್ಲ.  ಅವರಿಗೆ ತಾಕತ್ತಿದ್ದರೆ ಮುಸ್ಲಿಂ ಭಯೋತ್ಪಾದಕ ಸಂಘಟನೆ ಸಿಮಿಯನ್ನು ನಿಷೇಧಿಸಲಿ, ನಕ್ಸಲ್‌ಗ‌ಳನ್ನು ಹಿಡಿಯಲಿ ಎಂದು ಸವಾಲೆಸದರು.
ಹಿಂದೂ ಪರ ಸಂಘಟನೆಗಳನ್ನು ನಿಷೇದಿಸಲು ಹೊರಟ ಇವರು ರಶೀದ್ ಮಲಬಾರಿಯಂಥಹ ದೇಶ ದ್ರೋಹಿಗಳನ್ನು ಏನು ಮಾಡದೇ ಹೊರಗೆ ಬಿಟ್ಟಿದ್ದಾರೆ. ಇವರ ಈ ಕಾರ್ಯವೈಕರಿಗೆ ನಾಚಿಕೆಯಾಗಬೇಕು ಎಂದು ಲೇವಾಡಿ ಮಾಡಿದರು.

Write A Comment