ಕರಾವಳಿ

ದೇಗುಲ ನಗರಿ ಉಡುಪಿಯಲ್ಲಿ ಸೆ. 16, 17: ಶ್ರೀಕೃಷ್ಣಾಷ್ಟಮಿ ವೈಭವ- ಭರ್ಜರಿ ತಯಾರಿ

Pinterest LinkedIn Tumblr

temple-SrikrishnaTempleUdupi-Astro

ಉಡುಪಿ: ದೇಗುಲ ನಗರಿ ಎಂದೇ ಪ್ರಸಿದ್ಧವಾದ ಉಡುಪಿಯಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮ ಸೆ.16,17 ರಂದು ಅದ್ಧೂರಿಯಾಗಿ ನಡೆಯಲಿದ್ದು, ಇಡೀ ನಗರದಲ್ಲಿ ಜನ್ಮಾಷ್ಟಮಿಗೆ ಭರ್ಜರಿ ತಯಾರಿ ನಡೆಸಲಾಗುತ್ತಿದೆ.

ಶ್ರೀಕೃಷ್ಣ ಮುಖ್ಯಪ್ರಾಣ ಸೇವಾ ಸಮಿತಿ ಮತ್ತು ಕಿದಿಯೂರು ಹೊಟೇಲ್‌ ಸಹಭಾಗಿತ್ವದಲ್ಲಿ ಸೆ. 16 ಮತ್ತು 17ರಂದು ಶ್ರೀಕೃಷ್ಣ ಜನ್ಮಾಷ್ಟಮಿ – ವಿಟ್ಲಪಿಂಡಿ ಉತ್ಸವ ನಡೆಯಲಿದೆ.

ಸೆ. 16ರ ಬೆಳಗ್ಗೆ 10ಕ್ಕೆ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳ ಉದ್ಘಾಟನೆ, ವಿಶೇಷ ಹೂವಿನ ಅಲಂಕಾರ, ಪ್ರಶಸ್ತಿ ಪುರಸ್ಕೃತ ತಂಡಗಳಿಂದ ವಸಂತಮಂಟಪದಲ್ಲಿ ಭಜನೆ ನಡೆಯಲಿದೆ.

ಹಾಲು ಪಾಯಸ, ಗುಂಡಿಟ್ಟು ಲಾಡು, ಬೂಂದಿಲಾಡನ್ನು ವಿತರಿಸಲಾಗುವುದು ಎಂದು ಕಿದಿಯೂರು ಹೊಟೇಲ್‌ ಮಾಲಕ ಭುವನೇಂದ್ರ ಕಿದಿಯೂರು ತಿಳಿಸಿದ್ದಾರೆ.

Krishnaashtami-udupi-2013-022

ಶ್ರೀ ಕಾಣಿಯೂರು ಮಠದ ಶ್ರೀ ವಿದ್ಯಾವಲ್ಲಭತೀರ್ಥ ಶ್ರೀಪಾದರ ಮಾರ್ಗದರ್ಶನದಲ್ಲಿ ಕಾರ್ಯಕ್ರಮಗಳು ಜರಗಲಿವೆ. ಮಣಿಪಾಲ ಕೆಎಂಸಿ ಡೀನ್‌ ಡಾ| ಪ್ರದೀಪ್‌ ಕುಮಾರ್‌, ಭುವನೇಂದ್ರ ಕಿದಿಯೂರು, ಹೀರಾ ಕಿದಿಯೂರು ಅವರು ಹತ್ತನೆಯ ವರ್ಷದ ಸಾರ್ವಜನಿಕ ಅನ್ನಸಂತರ್ಪಣೆ ಉದ್ಘಾಟಿಸಲಿದ್ದಾರೆ. ಮಸ್ಕತ್‌ನ ಯುವರಾಜ ಸಾಲ್ಯಾನ್‌ ಪುಷ್ಪಾಲಂಕಾರ ಸೇವೆಯನ್ನು ನಡೆಸುವರು.

ಮುಂಬಯಿಯ ಗೋವಿಂದ ಅಲಾರೆ ತಂಡದಿಂದ ಸೆ. 17ರ ಮಧ್ಯಾಹ್ನ 12.30ಕ್ಕೆ ಹೊಟೇಲ್‌ ಕಿದಿಯೂರು ಎದುರು ‘ದಹಿ ಹಂಡಾ’ ಒಡೆಯುವ ಕಾರ್ಯಕ್ರಮದ ಪ್ರಾಯೋಜತ್ವವನ್ನು ಕಿದಿಯೂರು ಹೊಟೇಲ್‌ ವಹಿಸಿಕೊಳ್ಳಲಿದೆ ಎಂದು ತಿಳಿದುಬಂದಿದೆ.

Write A Comment