ಕರಾವಳಿ

ಮಂಗಳೂರು ವಿಮಾನ ನಿಲ್ದಾಣದಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ರೂ. 31,73,424 ಲಕ್ಷ ರೂಪಾಯಿ ಮೌಲ್ಯದ ಚಿನ್ನದ ಬಿಸ್ಕತ್ ಪತ್ತೆ

Pinterest LinkedIn Tumblr

Gold_seizd_airport_1

ಮಂಗಳೂರು : ಇಲ್ಲಿನ ಬಜಪೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್‌ ಅಧಿಕಾರಿಗಳು ಆದಿತ್ಯವಾರದಂದು ಭಾರೀ ಪ್ರಮಾಣದ ಅಕ್ರಮ ಚಿನ್ನದ ಬಿಸ್ಕತ್‌ ಗಳನ್ನು ವಶಪಡಿಸಿಕೊಂಡಿದ್ದಾರೆ.

ದುಬಾಯಿಯಿಂದ ಆದಿತ್ಯವಾರ ಬೆಳಿಗ್ಗೆ 8.45ಕ್ಕೆ ಇಲ್ಲಿಗೆ ಬಂದಿಳಿದ ಜೆಟ್‌ ಏರ್‌ವೇಸ್‌ ವಿಮಾನ ಸಂಖ್ಯೆ 9ಡಬ್ಲ್ಯು531 ವಿಮಾನದ ಟಾಯ್ಲೆಟ್‌ ಮಿರರ್‌ ಹಿಂಭಾಗದಲ್ಲಿ ಎರಡು ಪ್ಯಾಕೆಟ್‌ಗಳಲ್ಲಿ ಇರಿಸಲಾಗಿದ್ದ ಸುಮಾರು 10 ಚಿನ್ನದ ಬಿಸ್ಕತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಇವುಗಳ ಅಂದಾಜು ಮೌಲ್ಯ ಸುಮಾರು 31,73,424 ಲಕ್ಷ ರೂಪಾಯಿಗಳೆಂದು ಅಂದಾಜಿಸಲಾಗಿದೆ.

Gold_seizd_airport_2

ಪ್ಲಾಸ್ಟಿಕ್‌ ಮತ್ತು ಕಾರ್ಬನ್‌ ಟೇಪುಗಳನ್ನು ಸುತ್ತಿರುವ ರೀತಿಯಲ್ಲಿ ವಿಮಾನದ ಟಾಯ್ಲೆಟ್‌ ಮಿರರ್‌ ಹಿಂಭಾಗದಲ್ಲಿ ಸುಮಾರು 1.6 ಕೆ.ಜಿ. ತೂಕವಿದ್ದ ಈ ಹತ್ತು ಚಿನ್ನದ ಬಿಸ್ಕತ್ತುಗಳನ್ನು ಇರಿಸಲಾಗಿತ್ತು ಎಂದು ಪ್ರಾಥಮಿಕ ಮಾಹಿತಿಗಳಿಂದ ತಿಳಿದುಬಂದಿದೆ.

ಪ್ರತೀ ಪ್ಯಾಕೆಟ್‌ನಲ್ಲಿ ತಲಾ ಚಿನ್ನದ ಬಿಸ್ಕತ್ತುಗಳನ್ನು ಭದ್ರವಾಗಿ ಪ್ಯಾಕ್‌ ಮಾಡಿ ಇರಿಸಲಾಗಿತ್ತು. ವಿಮಾನ ನಿಲ್ದಾಣದ ಸ್ವತ್ಛತಾ ಸಿಬ್ಬಂದಿಗಳ ಮೂಲಕ ಈ ಚಿನ್ನದ ಬಿಸ್ಕತ್ತುಗಳನ್ನು ಹೊರಗಡೆಗೆ ಸಾಗಿಸುವ ಉದ್ದೇಶವನ್ನು ಹೊಂದಲಾಗಿತ್ತು ಎಂಬ ಶಂಕೆಯನ್ನು ನಿಲ್ದಾಣದ ಕಸ್ಟಮ್ಸ್‌ ಅಧಿಕಾರಿಗಳು ವ್ಯಕ್ತಪಡಿಸಿದ್ದಾರೆ.

ಕಳೆದ ಒಂದು ವಾರದಲ್ಲಿ ಒಂದು ಕೆ.ಜಿ.ಗೂ ಅಧಿಕ ಪ್ರಮಾಣದ ಅಕ್ರಮ ಚಿನ್ನ ಸಾಗಾಟ ಪ್ರಕರಣದಲ್ಲಿ ಇದು ಎರಡನೇ ಅತೀ ದೊಡ್ಡ ಪತ್ತೆ ಪ್ರಕರಣವಾಗಿದೆ ಎಂದು ಮಂಗಳೂರು ಕಸ್ಟಮ್ಸ್‌ ವಿಭಾಗದ ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಲಾಗಿದೆ.

Write A Comment