ಕರಾವಳಿ

ರಸ್ತೆಗೆ ಬಿದ್ದ ಬೈಕ್ ಸವಾರನ ಕಾಲಿನ ಮೇಲೆ ಚಲಿಸಿದ ಲಾರಿ

Pinterest LinkedIn Tumblr

ash

ಸುರತ್ಕಲ್, ಸೆ.14: ಆಕ್ಟಿವಾ ಮತ್ತು ಓಮ್ನಿ ನಡುವೆ ಢಿಕ್ಕಿ ಉಂಟಾಗೆ ಆ್ಯಕ್ಟಿವಾ ಸವಾರ ರಸ್ತೆಗೆಸೆಯಲ್ಪಟ್ಟ ಸಂದರ್ಭದಲ್ಲಿ ಸವಾರನ ಮೇಲೆ ಲಾರಿ ಚಲಿಸಿ ಆತನ ಕಾಲೊಂದು ತುಂಡಾದ ಘಟನೆ ತಡಂಬೈಲ್ ಬಳಿ ಸಂಭವಿಸಿದೆ. ಗಾಯಾಳುವನ್ನು ತಡಂಬೈಲು ನಿವಾಸಿ ಅಶ್ರಫ್(26) ಎಂದು ಗುರುತಿಸಲಾಗಿದೆ. ಇಂದು ಬೆಳಗ್ಗೆ ಆಕ್ಟಿವಾದಲ್ಲಿ ಹೋಗುತ್ತಿದ್ದಾಗ ಎದುರಿನಿಂದ ಬಂದ ಓಮ್ನಿ ಕಾರು ಢಿಕ್ಕಿ ಹೊಡೆದಿತ್ತು. ಅಪಘಾತದ ರಭಸಕ್ಕೆ ಅಶ್ರಫ್ ರಸ್ತೆಗೆಸೆಯಲ್ಪಟ್ಟರೆ, ಅದೇ ಕ್ಷಣದಲ್ಲಿ ಹಿಂಭಾಗದಿಂದ ಬಂದ ಲಾರಿ ಅವರ ಕಾಲಿನ ಮೇಲೆ ಹಾದು ಹೋಗಿತ್ತು.

ash1

ಕಾಲಿನ ಮೇಲೆ ಲಾರಿ ಹೋಗಿದ್ದರಿಂದ ಮೊಣಕಾಲಿನ ಕೆಳಭಾಗ ಸಂಪೂರ್ಣ ತುಂಡಾಗಿದ್ದು, ಪಾದ ಕೂಡಾ ಸಂಪೂರ್ಣ ಜಜ್ಜಿಹೋಗಿದೆ. ತುಂಡಾದ ಕಾಲು ಆತನೆ ನೋಡುತ್ತಿದ್ದ ದೃಶ್ಯ ಮನಃ ಕಲುಕುವಂತಿತ್ತು. ತೀವ್ರ ರಕ್ತಸ್ರಾವಗೊಂಡು ರಸ್ತೆಯಲ್ಲೇ ನರಳುತ್ತಿದ್ದ ಇವರನ್ನು ಸ್ಥಳೀಯರು ಸುರತ್ಕಲ್‌ನ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ.

Write A Comment