ಅಂತರಾಷ್ಟ್ರೀಯ

ವುಹಾನ್​ನ ಕರೊನಾ ವರದಿ ಮಾಡಿದ್ದ ಮಹಿಳೆಗೆ 4 ವರ್ಷ ಶಿಕ್ಷೆ

Pinterest LinkedIn Tumblr


ಬೀಜಿಂಗ್​: ಚೀನಾದ ವುಹಾನ್​ ನಗರದಿಂದ ಹಬ್ಬಲಾರಂಭಿಸಿದ ಕರೊನಾ ವರದಿ ಮಾಡಿದ್ದ ಮಹಿಳೆಗೆ ಚೀನಾ ನ್ಯಾಯಾಲಯ 4 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ. ‘ಜಗಳ ಮತ್ತು ಸಮಸ್ಯೆಗಳನ್ನು ಸೃಷ್ಟಿಸಲು ಪ್ರಚೋದಿಸಿದ’ ಆರೋಪದ ಮೇಲೆ ಶಿಕ್ಷೆ ವಿಧಿಸಲಾಗಿದೆ.

37 ವರ್ಷದ ಜಾಂಗ್ ವಕೀಲರಾಗಿದ್ದು, ಫೆಬ್ರವರಿಯಲ್ಲಿ ವುಹಾನ್​ ನಗರದಿಂದ ನೇರ ವರದಿ ನೀಡುವ ಪ್ರಯತ್ನ ಮಾಡಿದ್ದರು. ಅಲ್ಲಿನ ಪರಿಸ್ಥಿತಿ ಯಾವ ರೀತಿಯಲ್ಲಿದೆ, ಅಲ್ಲಿ ಕರೊನಾ ಬಂದವರಿಗೆ ಯಾವ ರೀತಿಯಲ್ಲಿ ಹಿಂಸಿಸಲಾಗುತ್ತಿದೆ ಎನ್ನುವ ವರದಿಯನ್ನು ಮಾಡಿದ್ದರು. ಆ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲೂ ಹರಿದಾಡಿದ್ದವು. ಈ ರೀತಿ ವರದಿ ಮಾಡಿದ ಪತ್ರಕರ್ತರನ್ನು ಚೀನಾ ಯಾವ ರೀತಿಯಲ್ಲಿ ಹಲ್ಲೆ ನಡೆಸಿ, ಕಾಣೆ ಮಾಡಿಸುತ್ತಿದೆ ಎನ್ನುವುದರ ಬಗ್ಗೆಯೂ ಆಕೆ ವರದಿ ಮಾಡಿದ್ದರು.

ಈ ರೀತಿ ವರದಿ ಮಾಡಿ ಮೂರೇ ತಿಂಗಳಲ್ಲಿ ಅಂದರೆ ಮೇ ತಿಂಗಳಲ್ಲಿ ಜಾಂಗ್​ ಕಾಣೆಯಾಗಿದ್ದರು. ಅದಾದ ನಂತರ ಆಕೆಯನ್ನು ಬಂಧಿಸಿರುವುದಾಗಿ ಚೀನಾ ಹೇಳಿತ್ತು. ಇದೀಗ ಜಾಂಗ್​ ಪ್ರಕರಣದಲ್ಲಿ ನ್ಯಾಯಾಲಯ ತೀರ್ಪು ನೀಡಿದ್ದು, ಸುಳ್ಳು ಮಾಹಿತಿ ನೀಡಿರುವ ಆರೋಪದಡಿಯಲ್ಲಿ 4 ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸಿದೆ. ಜಾಂಗ್​ ತಮ್ಮ ಹೋರಾಟದ ಹಾದಿಯಾಗಿ ಕೆಲವು ದಿನಗಳ ಕಾಲ ಉಪವಾಸ ಸತ್ಯಾಗ್ರಹವನ್ನೂ ಮಾಡಿದ್ದರು ಎನ್ನಲಾಗಿದೆ.

Comments are closed.