ಕ್ರೀಡೆ

ಐಸಿಸಿ ದಶಕದ ಪ್ರಶಸ್ತಿ ಪಟ್ಟಿ ಬಿಡುಗಡೆ: ಕೊಹ್ಲಿಗೆ ಏಕದಿನ ಆಟಗಾರ ಗರಿಮೆ

Pinterest LinkedIn Tumblr


ದುಬೈ: ಐಸಿಸಿ ದಶಕದ ಪ್ರಶಸ್ತಿ ಪಟ್ಟಿ ಬಿಡುಗಡೆಯಾಗಿದೆ. ಇಂದಿನ ಪಟ್ಟಿಯಲ್ಲೂ ಭಾರತೀಯರೇ ಪಾರುಪತ್ಯ ಸಾಧಿಸಿದ್ದು, ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ದಶಕದ ಕ್ರಿಕೆಟರ್, ದಶಕದ ಏಕದಿನ ಆಟಗಾರ ಗರಿಮೆಗೆ ಪಾತ್ರರಾಗಿದ್ದಾರೆ.

ಉಳಿದಂತೆ ಸ್ಪಿರಿಟ್ ಆಫ್ ದಿ ಕ್ರಿಕೆಟ್ ಪುರಸ್ಕಾರಕ್ಕೆ ಮಹೇಂದ್ರ ಸಿಂಗ್ ಧೋನಿ ಪಾತ್ರರಾಗಿದ್ದಾರೆ. 2011ರ ಇಂಗ್ಲೆಂಡ್ ಸರಣಿಯಲ್ಲಿ ಇಯಾನ್ ಬೆಲ್ ವಿವಾದಾತ್ಮಕ ರನ್ ಔಟ್ ತೀರ್ಪಿಗೆ ಬಲಿಯಾದಾಗ ಅಂಪೈರ್ ತೀರ್ಪಿಗೆ ವಿರುದ್ಧವಾಗಿ ಮತ್ತೆ ಬ್ಯಾಟಿಂಗ್ ಗ್ ಕರೆಸಿದ್ದರು. ಈ ವರ್ತನೆಗೆ ಐಸಿಸಿ ದಶಕದ ಸ್ಪಿರಿಟ್ ಆಫ್ ಕ್ರಿಕೆಟ್ ಪ್ರಶಸ್ತಿ ನೀಡಿದೆ.

ಮಹಿಳಾ ಪ್ರಶಸ್ತಿಯಲ್ಲಿ ಆಸ್ಟ್ರೇಲಿಯಾದ ಎಲಿಸ್ ಪೆರ್ರಿ ಕ್ಲೀನ್ ಸ್ವೀಪ್ ಸಾಧಿಸಿದ್ದಾರೆ. ದಶಕದ ಮಹಿಳಾ ಆಟಗಾರ್ತಿ, ದಶಕದ ಏಕದಿನ ಆಟಗಾರ್ತಿ, ದಶಕದ ಟಿ 20 ಆಟಗಾರ್ತಿ ಎಲ್ಲಾ ಪ್ರಶ್ತಿಗಳು ಪೆರ್ರಿ ಪಾಲಾಗಿದೆ.

ಪ್ರಶಸ್ತಿ ಪುರಸ್ಕೃತರ ಪಟ್ಟಿ

(ಪುರುಷರ)

ದಶಕದ ಆಟಗಾರ: ವಿರಾಟ್ ಕೊಹ್ಲಿ

ದಶಕದ ಏಕದಿನ ಆಟಗಾರ: ವಿರಾಟ್ ಕೊಹ್ಲಿ

ದಶಕದ ಟೆಸ್ಟ್ ಆಟಗಾರ: ಸ್ಟೀವ್ ಸ್ಮಿತ್

ದಶಕದ ಟಿ20 ಆಟಗಾರ: ರಶೀದ್ ಖಾನ್

ದಶಕದ ಸ್ಪಿರಿಟ್ ಆಫ್ ಕ್ರಿಕೆಟ್: ಮಹೇಂದ್ರ ಸಿಂಗ್ ಧೋನಿ

ಮಹಿಳೆಯರು

ದಶಕದ ಆಟಗಾರ್ತಿ: ಎಲಿಸ್ ಪೆರ್ರಿ

ದಶಕದ ಏಕದಿನ ಆಟಗಾರ್ತಿ: ಎಲಿಸ್ ಪೆರ್ರಿ

ದಶಕದ ಟಿ20 ಆಟಗಾರ್ತಿ: ಎಲಿಸ್ ಪೆರ್ರಿ

Comments are closed.