ಅಂತರಾಷ್ಟ್ರೀಯ

35 ವರ್ಷಗಳಿಂದ ಮೃಗಾಲಯದಲ್ಲಿ ಜೀವಿಸುತ್ತಿದ್ದ ಜಗತ್ತಿನ ಏಕೈಕ ಒಬ್ಬಂಟಿ ಆನೆ ‘ಕಾವನ್’ ಗೆ ಪಾಕ್ ನಿಂದ ಮುಕ್ತಿ!

Pinterest LinkedIn Tumblr


ಇಸ್ಲಾಮಾಬಾದ್: ಪಾಕಿಸ್ತಾನದಲ್ಲಿ 35 ವರ್ಷಗಳಿಂದ ಮೃಗಾಲಯದಲ್ಲಿ ಏಕಾಂಗಿಯಾಗಿ ಜೀವಿಸುತ್ತಿದ್ದ ಕಾವನ್ ಎಂಬ ಆನೆಗೆ ಅಂತಿಮವಾಗಿ ವಿಮುಕ್ತಿ ದೊರೆತಿದೆ.

ಅಮೆರಿಕಾದ ಪಾಪ್ ಗಾಯಕಿ ಚೇರ್ ಭಾನುವಾರ ಕಾವನ್ ಆನೆಯನ್ನು ಪಾಕಿಸ್ತಾನದಿಂದ ಕಾಂಬೋಡಿಯಾಕ್ಕೆ ಕೊಂಡೊಯ್ಯಲಿದ್ದಾರೆ. ಶುಕ್ರವಾರ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಅವರನ್ನು ಗಾಯಕಿ ಚೇರ್ ಭೇಟಿಮಾಡಿ ಮಾತುಕತೆ ನಡೆಸಿದರು.

ಅ ನಂತರ ಆನೆಯನ್ನು ಕಾಂಬೋಡಿಯಾಕ್ಕೆ ಕಳುಹಿಸಲು ಸಹಾಯ ಮಾಡಿದ್ದಕ್ಕಾಗಿ ಅವರು ಟ್ವಿಟ್ಟರ್ ಮೂಲಕ ಇಮ್ರಾನ್ ಖಾನ್ ಅವರಿಗೆ ಧನ್ಯವಾದ ಸಲ್ಲಿಸಿದ್ದಾರೆ. ಮತ್ತೊಂದು ಕಡೆ ಆನೆಯನ್ನು ಕಾಂಬೋಡಿಯಾಕ್ಕೆ ಸ್ಥಳಾಂತರಿಸಲು ಮುಂದೆ ಬಂದಿರುವ ಗಾಯಕಿ ಚೇರ್ ಅವರನ್ನು ಪ್ರಧಾನಿ ಇಮ್ರಾನ್ ಖಾನ್ ಸಹ ಅಭಿನಂದನೆ ತಿಳಿಸಿದ್ದಾರೆ.

ಇದಲ್ಲದೆ, ಭವಿಷ್ಯದಲ್ಲಿ ಪಾಕಿಸ್ತಾನದಲ್ಲಿ ನಡೆಯಲಿರುವ ಪರಿಸರ ಸಂಬಂಧಿ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಬೇಕು ಎಂದು ಗಾಯಕಿ ಚೇರ್ ಅವರನ್ನು ಪ್ರಧಾನಿ ಇಮ್ರಾನ್ ಕೋರಿದ್ದಾರೆ ಎಂದು ಪಿಎಂಒ ಕಚೇರಿ ಹೇಳಿಕೆಯಲ್ಲಿ ತಿಳಿಸಿದೆ.

Comments are closed.