ಅಂತರಾಷ್ಟ್ರೀಯ

ಮೃಗಾಲಯದೊಳಗೆ ಪ್ರವಾಸಿಗ ಪ್ರಾಣಿಗಳನ್ನು ನೋಡಿ ಬೆಚ್ಚಿಬಿದ್ದದ್ದೇಕೆ ಗೊತ್ತೇ…? ಅಷ್ಟಕ್ಕೂ ಈ ಮೃಗಾಲಯ ಎಲ್ಲಿದ್ದು…?

Pinterest LinkedIn Tumblr

ನಾವು ಮೃಗಾಲಯದೊಳಗೆ ಪ್ರಾಣಿಗಳನ್ನು ನೋಡಿ ಆನಂದಿಸುವ ಉದ್ದೇಶದಿಂದ ಹೋಗುತ್ತೇವೆ. ಅಲ್ಲಿರುವ ಪ್ರಾಣಿಗಳನ್ನು ನೋಡಿದಾಗ ನಮಗೆ ಭಯ ಹುಟ್ಟುತ್ತದೆ. ಆದರೆ ಇಲ್ಲೊಂದು ಮೃಗಾಲಯದೊಳಗೆ ಪ್ರಾಣಿಗಳನ್ನು ನೋಡಿದ ಪ್ರವಾಸಿಗ ಶಾಕ್ ಆಗಿದ್ದಾನೆ. ಅಷ್ಟಕ್ಕೂ ಅಲ್ಲಿ ನೋಡಿದ್ದೇನು…?

ನೈಜಿರಿಯಾದ ಮೃಗಾಲಯವೊಂದರ ಒಳಹೊಕ್ಕ ಪ್ರವಾಸಿಗನೋರ್ವ ಅಲ್ಲಿನ ಪ್ರಾಣಿಗಳನ್ನು ಕಂಡು ಬೆರೆಗಾಗಿದ್ದಾನೆ. ಆಹಾರವಿಲ್ಲದೆ ಬಳಲಿ ಅಸ್ಥಿಪಂಜರ ಕಾಣುವ ಕೆಲವು ಪ್ರಾಣಿಗಳ ಆ ಮೃಗಾಲಯದೊಳಕ್ಕೆ ನೋಡಲು ಸಿಕ್ಕಿದೆ. ಇದನ್ನು ಕಂಡ ಆತ ಫೋಟೋ ಕ್ಲಿಕ್ಕಿಸಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾನೆ.

ನೈಜಿರಿಯಾದ ಕಾಡನಾದಲ್ಲಿರುವ ಗಮ್ಜಿ ಗೇಟ್ ಮೃಗಾಲಯಕ್ಕೆ ಪ್ರವಾಸಿಗ ಭೇಟಿ ನೀಡಿದಾಗ ನೈಜ ಚಿತ್ರಣ ಬಯಲಾಗಿದೆ.

ಒಂದು ಡಾಲರ್ ನೀಡಿ ಮೃಗಾಲಯ ಪ್ರವೇಶಿಸಿದ್ದನು, ಸಿಂಹ, ಮೊಸಳೆ ಕೆಲವು ಪ್ರಾಣಿಗಳ ನೈಜ ದೃಶ್ಯವನ್ನು ಕಂಡು ತನ್ನ ಕ್ಯಾಮೆರಾದ ಮೂಲಕ ಫೋಟೋ ಸೆರೆಹಿಡಿದಿದ್ದಾನೆ.

ನಂತರ ಸಾಮಾಜಿಕ ಜಾಲತಾಣದಲ್ಲಿ ಫೋಟೋ ಹಂಚಿಕೊಂಡಿದ್ದಾನೆ. ಅದರ ಜೊತೆಗೆ ಪ್ರಾಣಿಗಳನ್ನು ರಕ್ಷಿಸುವಂತೆ ವನ್ಯಜೀವಿ ಚಾರಿಟಿಗೆ ಮಾಹಿತಿ ನೀಡಿದ್ದಾನೆ.

ಈ ವಿಚಾರ ಬೆಳಕಿಗೆ ಬರುತ್ತಿದ್ದಂತೆ ವನ್ಯಜೀವಿ ಚಾರಿಟಿ ಹಾಗೂ ಮೆನ್ಸ್ ಡಿಸ್ಕವರಿ ತಂಡ ರಕ್ಷಣಾ ಕಾರ್ಯಾಚರಣೆಗೆ ಮುಂದಾಗಿದ್ದಾರೆ. ಅಪೌಷ್ಠಿಕತೆಯಲ್ಲಿ ಬಳಲುತ್ತಿರುವ ಸಿಂಹವನ್ನು ತಮ್ಮ ವಶಕ್ಕೆ ಪಡೆದುಕೊಂಡಿದ್ದಾರೆ.

ಸಿಂಹವನ್ನು ಕಾಡಿಗೆ ಬಿಡುವ ಮೊದಲು ಅದರ ಆರೋಗ್ಯವನ್ನು ಸರಿಪಡಿಸಿ ನಂತರ ಕಳುಹಿಸಲು ವನ್ಯಜೀವಿ ಚಾರಿಟಿ ಮುಂದಾಗಿದೆ.

ಆದರೆ ಅದಕ್ಕೂ ಮೊದಲು ಸಿಂಹ ಅಷ್ಟು ದಿನಗಳ ಕಾಲ ಬದುಕುಳಿಯುತ್ತಾ ಎಂಬುದು ನೆಟ್ಟಿಗರ ಪ್ರಶ್ನೆಯಾಗಿದೆ.

Comments are closed.