ಅಂತರಾಷ್ಟ್ರೀಯ

ಮಾಸ್ಕ್ ಧರಿಸಲು ನಿರಾಕರಿಸಿದ ಗಂಡನಿಗೆ ಹೆಂಡತಿಯಿಂದ ಏಟು!

Pinterest LinkedIn Tumblr


ಇಲ್ಲೊಬ್ಬ ವ್ಯಕ್ತಿ ಮಾಸ್ಕ್​ ಧರಿಸದೆ ರಂಪಾಟ ಮಾಡಿದ್ದಕ್ಕಾಗಿ ಹೆಂಡತಿ ಕೈಯಿಂದ ಏಟು ತಿಂದಿರುವ ವೀಡಿಯೊ ಭಾರೀ ವೈರಲ್ ಆಗಿದೆ.

ಈಜಿಜೆಟ್​ ವಿಮಾನದಲ್ಲಿ ಪ್ರಯಾಣಿಸುತ್ತಿರುವ ಎಲ್ಲಾ ಪ್ರಯಾಣಿಕರು ಮಾಸ್ಕ್​ ಧರಿಸಿದ್ದಾರೆ. ಆದರೆ ಅಲ್ಲಿದ್ದ ವಿವಾಹಿತ ವ್ಯಕ್ತಿಯೊಬ್ಬ ಮಾಸ್ಕ್ ಧರಿಸಲು ನಿರಾಕರಿಸುತ್ತಾನೆ. ಇದನ್ನು ಕಂಡ ಪತ್ನಿ ಆತನ ಕೆನ್ನೆಗೆ ಸಿಟ್ಟಿನಿಂದ ಬಾರಿಸಿದ್ದಾಳೆ. ಪತ್ನಿಯ ಕೈಯಿಂದ ಏಟು ತಿಂದ ಪತಿಯ ವಿಡಿಯೋ ಇದೀಗ ವೈರಲ್ ಆಗಿದೆ.

ಮ್ಯಾಂಚೆಸ್ಟರ್​​ನಿಂದ ಟೆನೆರೈಫ್​​ಗೆ ತೆರಳುತ್ತಿದ್ದ ಈಜಿಜೆಟ್​ ವಿಮಾನದಲ್ಲಿ ಈ ಘಟನೆ ನಡೆದಿದೆ. ಸಹ ಪ್ರಯಾಣಿಕರು ವ್ಯಕ್ತಿಯ ಬಳಿ ಮಾಸ್ಕ್​ ಧರಿಸಿ ಎಂದು ಹೇಳುತ್ತಾರೆ. ಆದರೆ ಆತ ಮಾತ್ರ ಅವರ ಮಾತನ್ನು ಲೆಕ್ಕಕ್ಕೆ ತೆಗೊಳದೆ ವಾದಿಸುತ್ತಾನೆ. ನಂತರ ಆತನ ಪತ್ನಿ ಕೂಡ ಮಾಸ್ಕ್​​ ಧರಿಸುವಂತೆ ಹೇಳುತ್ತಾಳೆ. ಪತಿಯನ್ನು ಶಾಂತಗೊಳಿಸಲು ಮುಂದಾಗುತ್ತಾಳೆ. ಆದರೆ ಪತಿ ಮಾತ್ರ ಯಾರ ಮಾತನ್ನು ಕೇಳದೆ ವಾದಿಸುತ್ತಾನೆ. ಇದರಿಂದ ಸಿಟ್ಟುಗೊಂಡ ಹೆಂಡತಿ ಗಂಡನ ಕಪಾಳಕ್ಕೆ ಬಾರಿಸುತ್ತಾಳೆ.

Comments are closed.