ಅಂತರಾಷ್ಟ್ರೀಯ

ಅಲ್‌ಖೈದಾದ ಪ್ರಮುಖ ನಾಯಕ ಮಸ್ರಿ ಹತ್ಯೆ

Pinterest LinkedIn Tumblr


ಕಾಬುಲ್‌: ಪ್ರಮುಖ ಅಲ್‌ ಖೈದಾ ಕಮಾಂಡರ್‌ ಅಬು ಮುಹ್ಸೆನ್‌ ಮಸ್ರಿ ಅನ್ನು ಅಫ್ಗಾನಿಸ್ತಾನದ ಘಜನಿ ಪ್ರಾಂತ್ಯದಲ್ಲಿ ಹತ್ಯೆ ಮಾಡಿರುವುದಾಗಿ ಗೂಢಚಾರ ಏಜೆನ್ಸಿ ರಾಷ್ಟ್ರೀಯ ಭದ್ರತೆ ನಿರ್ದೇಶನಾಲಯ ತಿಳಿಸಿದೆ.

ಈ ಕುರಿತು ಟ್ವೀಟ್ ಮಾಡಿರುವ ನಿರ್ದೇಶನಾಲಯ, ಘಜನಿ ಪ್ರಾಂತ್ಯದಲ್ಲಿ ಎನ್‌ಡಿಎಸ್‌ ವಿಶೇಷ ಪಡೆಯ ಕಾರ್ಯಾಚರಣೆಯ ಪರಿಣಾಮವಾಗಿ ಭಾರತೀಯ ಉಪಖಂಡದ ಆಲ್ ಖೈದಾ ಸಂಘಟನೆಯ ಪ್ರಮುಖ ಸದಸ್ಯ ಅಬು ಮುಹ್ಸೆನ್‌ ಮಸ್ರಿ ಹತ್ಯೆಗೀಡಾಗಿದ್ದಾನೆ ಎಂದು ಮಾಹಿತಿ ನೀಡಿದೆ.

ಈಜಿಪ್ಟ್‌ ಮೂಲದ ಮಸ್ರಿ ಭಾರತದಲ್ಲಿ ಭಯೋತ್ಪಾದಕ ಕಾರ್ಯಾಚರಣೆಗಳನ್ನು ನಿರ್ವಹಿಸುತ್ತಿದ್ದನು ಮತ್ತು ಎಫ್‌ಬಿಐನ ವಾಂಟೆಡ್‌ ಲಿಸ್ಟ್‌ನಲ್ಲಿದ್ದರು ಎನ್ನಲಾಗಿದೆ.

Comments are closed.