ರಾಷ್ಟ್ರೀಯ

ಪುತ್ರನ ಸಾವಿಗೆ ನ್ಯಾಯ ಕೊಡಿ ಎಂದು ಕಾಲಿಗೆ ಬಿದ್ದರೆ ನಕ್ಕು ಸುಮ್ಮನಾದ ಮಹಿಳಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ..!

Pinterest LinkedIn Tumblr


ಮಧ್ಯಪ್ರದೇಶ: ವೃದ್ಧನೊಬ್ಬ ತನ್ನ ಮಗನ ಸಾವಿಗೆ ನ್ಯಾಯಕೋರಿ ಪೊಲೀಸ್ ಠಾಣೆಗೆ ಬಂದಿದ್ದ. ಆದರೆ ಅಲ್ಲಿ ಪುರುಷ ಪೊಲೀಸರಿಗಿಂತ ಮಹಿಳಾ ಪೊಲೀಸ್ ಅಧಿಕಾರಿಗಳು ಸೂಕ್ಷ್ಮವಾಗಿ ಪ್ರತಿಕ್ರಿಯೆ ನೀಡುತ್ತಾರೆ ಎಂದು ಆತ ಭಾವಿಸಿದ್ದೂ ತಪ್ಪಾಗಿತ್ತು..!

ತನ್ನ ಮಗನ ಅನುಮಾನಾಸ್ಪದ ಸಾವಿಗೆ ಆ ವೃದ್ಧ ವ್ಯಕ್ತಿ ತನ್ನ ಇಳಿ ವಯಸ್ಸಿನಲ್ಲೂ ಉತ್ತರ ಹುಡುಕುತ್ತಿದ್ದ. ತನ್ನ ಮಗನ ಸಾವಿಗೆ ನ್ಯಾಯ ಬೇಕೆಂದು ಆತ ಹೋರಾಡುತ್ತಿದ್ದ. ಆದ್ರೆ, ಪೊಲೀಸರಿಂದ ಯಾವುದೇ ರೀತಿಯಲ್ಲೂ ಸ್ಪಂದನೆ ಸಿಗದಿದ್ದಾಗ, ಆತನ ಹಿರಿಯ ಪೊಲೀಸ್ ಅಧಿಕಾರಿಯ ಮೊರೆ ಹೋಗಲು ನಿರ್ಧರಿಸಿದ್ದ.

ಮಧ್ಯ ಪ್ರದೇಶದ ನಿವಾರಿಗೆ ಆಗಮಿಸಿದ್ದ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿಗೆ ಆತ ತನ್ನ ಮನವಿ ಸಲ್ಲಿಸಲು ಮುಂದಾದ. ಲೇಡಿ ಪೊಲೀಸ್ ಅಧಿಕಾರಿ ಆತನ ಮಾತನ್ನು ಹಗುರವಾಗಿ ಪರಿಗಣಿಸಿದಾಗ ಆತ ಆಕೆಯ ಕಾಲಿಗೆ ಬಿದ್ದ. ಆದ್ರೂ ಆ ಮಹಿಳಾ ಪೊಲೀಸ್ ಅಧಿಕಾರಿಯ ಮನಸ್ಸು ಕರಗಲಿಲ್ಲ. ತಮ್ಮ ಸಹೋದ್ಯೋಗಿಗಳಿಗೆ ನನಗೆ ಯಾಕೆ ಗಂಟು ಬೀಳುತ್ತಿದ್ದಾರೆ ಎಂದು ನಗುತ್ತಲೇ ಕೇಳುತ್ತಾ ಆತನನ್ನು ಮೇಲೆತ್ತಿ ಸಾಗಹಾಕಿದರು.

ಮಧ್ಯ ಪ್ರದೇಶದ ಪೊಲೀಸ್ ವ್ಯವಸ್ಥೆಯನ್ನೇ ಪ್ರಶ್ನಿಸುವಂಥ ಈ ವಿಡಿಯೋವನ್ನು ಸ್ಥಳದಲ್ಲಿದ್ದ ಕೆಲವರು ಚಿತ್ರೀಕರಿಸಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. ಇದೀಗ ಈ ವಿಡಿಯೋ ಭಾರೀ ವೈರಲ್ ಆಗಿದ್ದು, ಪೊಲೀಸರ ವಿರುದ್ಧ ನೆಟ್ಟಿಗರು ಹರಿಹಾಯುತ್ತಿದ್ದಾರೆ. ಮಹಿಳಾ ಪೊಲೀಸ್ ಅಧಿಕಾರಿ ಸೇರಿದಂತೆ ಈ ಘಟನೆಗೆ ಕಾರಣರಾದ ಎಲ್ಲರ ವಿರುದ್ಧ ಕ್ರಮಕ್ಕೆ ಒತ್ತಾಯ ಕೇಳಿಬಂದಿದೆ.

Comments are closed.