ಅಂತರಾಷ್ಟ್ರೀಯ

ಹತ್ತಾರು ಕೋಳಿಗಳೊಂದಿಗೆ ಲೈಂಗಿಕ ಕ್ರಿಯೆ ನಡೆಸಿದ ಗಂಡ; ಚಿತ್ರೀಕರಿಸಿದ ಹೆಂಡತಿ

Pinterest LinkedIn Tumblr


ವ್ಯಕ್ತಿಯೊಬ್ಬ ಸಾಕು ಕೋಳಿಗಳೊಂದಿಗೆ ಲೈಂಗಿಕ ಕ್ರಿಯೆ ನಡೆಸಿ ಜೈಲು ಪಾಲಾಗಿರುವ ಘಟನೆ ಇಂಗ್ಲೆಂಡ್​ನಲ್ಲಿ ಬೆಳಕಿಗೆ ಬಂದಿದೆ.

ಸುಮಾರು 29 ಕೋಳಿಗಳನ್ನು ಸೆಕ್ಸ್ ಗಾಗಿ ಬಳಸಿಕೊಂಡಿದ್ದು, ಇದೀಗ ಮಾಡಿದ ತಪ್ಪಿಗೆ ಶಿಕ್ಷೆ ಅನುಭವಿಸುತ್ತಿದ್ದಾನೆ. ವಿಲೇ ರೆಹಾನ್ ಬೇಗ್ (37) ಎಂಬ ವ್ಯಕ್ತಿ ತನ್ನ ಮನೆಯಲ್ಲಿ ಸಾಕುತ್ತಿದ್ದ ಕೋಳಿಗಳ ಜೊತೆಗೆ ಸೆಕ್ಸ್ ಮಾಡಿದ್ದಾನೆ. ಪತಿ ಕೋಳಿ ಜೊತೆಗೆ ಸೆಕ್ಸ್ ಮಾಡುತ್ತಿರುವುದನ್ನು ಚಿತ್ರೀಕರಿಸಿಲು ಆತನ ಪತ್ನಿ ಹಲೀಮ್ ಬೇಗ್ (38) ಸಹಕರಿಸಿದ್ದಾಳೆ.

ಡೈಲಿ ಮೇಲ್ ಈ ಬಗ್ಗೆ ವರದಿ ಮಾಡಿದ್ದು, ದಂಪತಿಗಳು ಗೊಪ್ರೊ ಕ್ಯಾಮೆರಾವನ್ನು ಬಳಸಿ ದೃಶ್ಯವನ್ನು ಸೆರೆ ಹಿಡಿದಿದ್ದಾರೆ ಎಂದು ವಿಚಾರಣೆ ವೇಳೆ ಹೇಳಿಕೊಂಡಿದ್ದಾರೆ ಎಂದು ತಿಳಿಸಿದೆ.

29 ಕೋಳಿ ಮತ್ತು ಹೆಂಡತಿ ಜೊತೆಗೆ ರೆಹಾನ್ ಲೈಂಗಿಕ ಸಂಬಂಧ ಹೊಂದಿದ್ದನು ಎಂದು ಕೋರ್ಟ್ ವಿಚಾರಣೆ ವೇಳೆ ಬೆಳಕಿಗೆ ಬಂದಿದೆ. ಪತಿ ಮಾಡಿದ ಈ ಕ್ರೂರ ಕೃತ್ಯಕ್ಕೆ ಸಹಾಯ ಮಾಡಿದ್ದ ಪತ್ನಿ ಹಲೀಮ್ ಬೇಗ್​ ನ್ಯಾಯಾಲಯದಲ್ಲಿ ತನ್ನ ತಪ್ಪೊಪ್ಪಿಕೊಂಡಿದ್ದಾಳೆ. ನಂತರ ಕೋರ್ಟ್ ಆದೇಶದ ಮೇರೆಗೆ ಶಿಕ್ಷೆ ವಿಧಿಸಿದ್ದಾರೆ. ಇನ್ನು ಪತಿ ರೆಹಾನ್​ಗೆ ಮೂರು ವರ್ಷಗಳ ಕಾಲ ಜೈಲು ಶಿಕ್ಷೆ ವಿಧಿಸಲಾಗಿದೆ

ಈ ದಂಪತಿ ತಮ್ಮ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಎಸಗುತ್ತಿದ್ದರು. ಇದನ್ನರಿತ ನ್ಯಾಷನಲ್ ಕ್ರೈಂ ಏಜೆನ್ಸಿ ಇಂಗ್ಲೆಂಡ್​ನ ಬ್ರಾಡ್​ಫೋರ್ಡ್ನಲ್ಲಿದ್ದ ದಂಪತಿ ಮನೆಯ ಮೇಲೆ ಜು.09ರಂದು ದಾಳಿ ಮಾಡುತ್ತಾರೆ.

ನಂತರ ದಂಪತಿಗಳು ಮಾಡುತ್ತಿದ್ದ ಕೃತ್ಯ ಬೆಳಕಿಗೆ ಬಂದಿದೆ. ಸದ್ಯ ರೆಹಾಣ್​ ಬೇಗ್​ ಮತ್ತು ಹಲೀಮ್​ ಬೇಗ್​ ಶಿಕ್ಷೆ ಅನುಭವಿಸುತ್ತಿದ್ದಾರೆ.

Comments are closed.