ಅಂತರಾಷ್ಟ್ರೀಯ

ಈತ ಅಂತಿಂಥ ಹಂತಕನಲ್ಲ! 93 ಮಹಿಳೆಯರನ್ನು ಕೊಂದ ಈತನ ಹಿಂದಿದೆ ಭಯಾನಕ ಕಥೆ ! ಮಹಿಳೆಯರನ್ನೇ ಟಾರ್ಗೆಟ್ ಮಾಡಲು ಕಾರಣವೇನು ಗೊತ್ತೇ…?

Pinterest LinkedIn Tumblr

ಈ ಹಂತಕ ತನ್ನ 35 ವರ್ಷಗಳಲ್ಲಿ 93 ಕ್ಕೂ ಅಧಿಕ ಮಹಿಳೆಯರನ್ನೇ ಕೊಂದು ಮುಗಿಸಿದ್ದಾನೆ. ಅಮೆರಿಕವನ್ನೇ ತನ್ನ ಕುಕೃತ್ಯಗಳಿಂದ ಬೆಚ್ಚಿಬೀಳಿಸಿರುವ ಈ ವಿಕೃತ ಹಂತಕನ ಹೆಸರು ಸ್ಯಾಮುವೆಲ್.

ಸ್ಯಾಮುವೆಲ್ ಲಿಟಲ್ ಕೊಲೆ ಮಾಡುವರಲ್ಲಿ ಏನೋವೊಂದು ಆನಂದ. ಅದರಲ್ಲೂ ಮಹಿಳೆಯರ ರಕ್ತ ನೋಡುವುದೆಂದರೆ ಈತನಿಗೇನೋ ಖುಷಿ. ಮುಗ್ಧನಂತ ಕಾಣುವ ಸ್ಯಾಮುವೆಲ್ ಲಿಟಲ್​ನನ್ನು ಕಂಡಾಗ ಈತ ಕೊಲೆ ಪಾತಕ ಎಂಬುದು ಯಾರಿಗೂ ಗೊತ್ತಾಗುತ್ತಿರಲಿಲ್ಲ. ಹಾಗಾಗಿ ಇದೇ ಬಂದವಾಳವಾಗಿಟ್ಟುಕೊಂಡು ಅಮಾಯಕ ಮಹಿಳೆಯರ ಪರಿಚಯ ಮಾಡಿಕೊಂಡು ಜೀವ ತೆಗೆಯುತ್ತಿದ್ದ.

ಅಮೆರಿಕದ ಇತಿಹಾಸದಲ್ಲಿ ಅತ್ಯಂತ ಕ್ರೂರಿ ಸರಣಿ ಹಂತಕನೆಂದರೆ ಅದು ಸ್ಯಾಮುವೆಲ್ ಲಿಟಲ್. 1970ರಿಂದ 2005ರವರೆಗೆ ಈತ 90ಕ್ಕೂ ಅಧಿಕ ಮಹಿಳೆಯ ಜೀವ ತೆಗೆದಿದ್ದ.

ಹೀಗೆ ಅಮಾಯಕ ಮಹಿಳೆಯರನ್ನು ಹತ್ಯೆ ಮಾಡುತ್ತಿದ್ದ ಹಂತಕ ಸ್ಯಾಮುವೆಲ್ ಲಿಟಲ್ 2012ರಲ್ಲಿ ಅಮೆರಿಕದ ಫೆಡರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಷನ್ (ಎಫ್​​ಬಿಐ) ಕೈಗೆ ಸಿಕ್ಕಿಬಿದ್ದ.

ವಿಚಾರಣೆ ವೇಳೆ ಈತನ ಮಾತು ಕೇಳಿ ಅಧಿಕಾರಿಗಳೆ ದಂಗಾಗಿದ್ದರು. ಈತ ಕೊಲೆ ಮಾಡಿದ್ದ ಒಂದೊಂದೇ ಕಥೆ ಕೇಳಿ ಅಧಿಕಾರಿಗಳೇ ಬೆಚ್ಚಿಬಿದ್ದಿದ್ದರು.

ಆದರೀಗ ಸ್ಯಾಮುವೆಲ್ ಲಿಟಲ್ ವಯಸ್ಸು 79ರ ಆಸುಪಾಸು. ತನ್ನ ಜೀವನದ ಬಹುತೇಕ ಸಮಯವನ್ನು ಈತ ಕೊಲೆ ಮಾಡುವುದರಲ್ಲೇ ಕಳೆದಿದ್ದ. ಸದ್ಯ ಕ್ಯಾಲಿಫೋರ್ನಿಯಾದಲ್ಲಿನ ಜೈಲಿನಲ್ಲಿ ತನ್ನ ಪಾಪಕೃತ್ಯಕ್ಕಾಗಿ ಜೀವಾವಧಿ ಶಿಕ್ಷೆಯನ್ನು ಅನುಭವಿಸುತ್ತಿದ್ದಾನೆ.

ಸ್ಯಾಮ್ಯುಯೆಲ್ ಲಿಟಲ್ ಸುಮಾರು 93 ಜನರನ್ನು ಕತ್ತು ಹಿಸುಕಿ ಕೊಂದಿದ್ದೇನೆ ಎಂದು ವಿಚಾರಣೆ ವೇಳೆ ಹೇಳಿಕೊಂಡಿದ್ದು, ಇದರಲ್ಲಿ ಬಹುತೇಕರು ಮಹಿಳೆಯರೇ ಆಗಿದ್ದಾರೆ.

ಸ್ಯಾಮುವೆಲ್ ಲಿಟಲ್ ಚಿತ್ರಕಲಾಕಾರ. ಏಕೆಂದರೆ, ಈತ ಕೊಲೆ ಮಾಡಿದ ಸುಮಾರು 30 ಮಹಿಳೆಯರ ರೇಖಾಚಿತ್ರವನ್ನು ಎಫ್​​ಬಿಐ ಬಿಡುಗಡೆ ಮಾಡಿತ್ತು. ಆದರೆ, ಈ ಚಿತ್ರವನ್ನು ಸ್ಯಾಮ್ಯುಯೆಲ್ ತನ್ನ ಕೈಯಾರೆ ಬಿಡಿಸಿದ್ದ.

ಸ್ಯಾಮುವೆಲ್ ಲಿಟಲ್ ಜೈಲಿನಲ್ಲಿ ಕುಳಿತು ತನ್ನ ಕೈಯಾರೆ ಕೊಲೆಯಾದ ಮಹಿಳೆಯರ ಚಿತ್ರ ಬರೆದಿದ್ದ. ಇದನ್ನು ಎಫ್​​ಬಿಐ ತನ್ನ ಅಧಿಕೃತ ವೆಬ್​ಸೈಟಿನಲ್ಲಿ ಹಂಚಿಕೊಂಡಿದೆ. ಜೊತೆಗೆ, ಸ್ಯಾಮ್ಯುಯೆಲ್ ವಿಚಾರಣೆ ವೇಳೆ ನೀಡಿದ್ದ ವಿವರಣೆಯ ವಿಡಿಯೋವನ್ನೂ ಎಫ್​​ಬಿಐ ಹಂಚಿಕೊಂಡಿದೆ.

ಸ್ಯಾಮುವೆಲ್ ಮೂಲ ಹೆಸರು ಸ್ಯಾಮುವೆಲ್ ಮ್ಯಾಕ್ಡೋವೆಲ್. ಓಹಿಯೋದ ಲೋರೈನ್ನಲ್ಲಿ ತನ್ನ ಅಜ್ಜಿಯೊಂದಿಗೆ ಬೆಳೆದಿದ್ದ ಈತ ಮಾಜಿ ಬಾಕ್ಸರ್ ಕೂಡಾ ಹೌದು.

ಯೌವನದಲ್ಲಿ ಈತ ಮಾದಕ ದ್ರವ್ಯ ವ್ಯಸನಿಯಾಗಿದ್ದ. ಇದರಿಂದಾಗಿ ಆತ ಕೊಲೆ ಕೃತ್ಯದಲ್ಲಿ ಭಾಗಿಯಾಗುತ್ತಿದ್ದ. ಯೌವನದ ದಿನಗಳಲ್ಲಿ ಜೀವನ ನಿರ್ವಹಣೆಗೆ ಈತ ಆಂಬ್ಯುಲೆನ್ಸ್ ಅಟೆಂಡರ್ ಆಗಿ ಕೆಲಸ ಮಾಡುತ್ತಿದ್ದ.

ಆಂಬ್ಯುಲೆನ್ಸ್ ಅಟೆಂಡರ್ ಆಗಿದ್ದ ವೇಳೆ ಎಲ್ಲಾ ಕಡೆ ಸಂಚಾರಕ್ಕೆ ಈತನಿಗೆ ಅವಕಾಶ ಸಿಕ್ಕಿತ್ತು. ಈ ಸಂದರ್ಭದಲ್ಲಿ ಮಾದಕ ದ್ರವ್ಯ ಸೇವಿಸಿ ವಾಹನ ಚಲಾಯಿಸುವುದು, ದರೋಡೆ, ಹಲ್ಲೆ ಮತ್ತು ಅತ್ಯಾಚಾರದಂತಹ ಆರೋಪಕ್ಕೂ ಈತ ಗುರಿಯಾಗಿದ್ದ.

ಸುಮಾರು ಎಂಟು ರಾಜ್ಯಗಳಲ್ಲಿ ಈತ ಬಂಧನಕ್ಕೊಳಗಾಗಿದ್ದ. ಎಫ್ಬಿಐ ಕೂಡಾ ಈತ ಮಾಡಿರುವ ಕೊಲೆಗಳ ತನಿಖೆಯಲ್ಲಿ ತೊಡಗಿದೆ. ಸ್ಯಾಮುವೆಲ್ ಲಿಟಲ್ ಈ ಹಿಂದೆ ಮಾಡಿದ ಕೊಲೆ ಪ್ರಕರಣಗಳು ಒಂದೊಂದಾಗಿ ಬೆಳಕಿಗೆ ಬರುತ್ತಿದೆ.

Comments are closed.