
ಲಂಡನ್: ಲಂಡನ್ ನಲ್ಲಿ ತಮಿಳು ಮೂಲದ ಕುಟುಂಬದ ಮೂವರು ಸದಸ್ಯರು ಅವರ ಫ್ಲಾಟ್ ನಲ್ಲಿ ಶವವಾಗಿ ಪತ್ತೆಯಾಗಿರುವ ದುರಂತ ಘಟನೆಯೊಂದು ವರದಿಯಾಗಿದೆ.
ಬ್ರೆಂಟ್ ಫೋರ್ಡ್ ನ ಫ್ಲಾಟ್ ನಲ್ಲಿದ್ದ ಪೂರ್ಣ ಕಾಮೇಶ್ವರಿ ಶಿವರಾಜ್ ಅವರ ಕ್ಷೇಮದ ಬಗ್ಗೆ ಅನುಮಾನ ಬಂದ ಹಿನ್ನೆಲೆಯಲ್ಲಿ, ಪೊಲೀಸರಿಗೆ ಮಾಹಿತಿ ತಿಳಿದು ಪ್ಲಾಟ್ ಗೆ ತೆರಳಿ ಬೀಗ ಒಡೆದು ನೋಡಿದಾಗ 36 ವರ್ಷದ ಮಹಿಳೆ ಆಕೆಯ 3 ವರ್ಷದ ಮಗ ಕೈಲಾಶ್ ಕುಹಾ ರಾಜ್ ಅವರ ಶವ ಪತ್ತೆಯಾಗಿದೆ. ಪೂರ್ಣ ಕಾಮೇಶ್ವರಿ ಅವರ ಪತಿ ಕುಹಾ ರಾಜ್ ಚಿದಂಬರನಾಥನ್ ಸಹ ಮಾರಣಾಂತಿಕ ಗಾಯಗಳಿಂದ ತೀವ್ರ ಬಿದ್ದಿದ್ದು ಕಂಡುಬಂದಿದೆ.
42 ವರ್ಷದ ವ್ಯಕ್ತಿ ಪೊಲೀಸರು ಫ್ಲಾಟ್ ಗೆ ಪ್ರವೇಶಿಸುತ್ತಿದ್ದಂತೆಯೇ ತನಗೆ ತಾನೇ ಘಾಸಿಗೊಳಿಸಿಕೊಂಡಿದ್ದಾನೆ ಎಂದು ತಿಳಿದುಬಂದಿದೆ. ಗುರುವಾರದಂದು ಮರಣೋತ್ತರ ಪರೀಕ್ಷೆ ನಡೆಯಲಿದ್ದು ಅದರ ಬಳಿಕವಷ್ಟೇ ತಮ್ಮ ತನಿಖಾ ಸಾರಾಂಶವನ್ನು ಹೇಳಬಹುದು ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಾಥಮಿಕ ಹಂತದ ವರದಿಯ ಪ್ರಕಾರ ಇದು ಹತ್ಯೆ-ಆತ್ಮಹತ್ಯೆಯ ಪ್ರಕರಣದಂತೆ ತೋರುತ್ತಿದೆ ಎಂದು ಡೆಟೆಕ್ಟೀವ್ ಚೀಫ್ ಇನ್ಸ್ ಪೆಕ್ಟರ್ ಸೈಮನ್ ಹಾರ್ಡಿಂಗ್ ಹೇಳಿದ್ದಾರೆ.
Comments are closed.