
ಹಾವು ಅಂದರೆ ಅನೇಕರಿಗೆ ಭಯ. ಕಣ್ಣೆದುರು ಹಾವು ಕಂಡಾಗ ಮಾರುದ್ದ ಓಡಿ ಹೋಗುವವರೇ ಜಾಸ್ತಿ. ಇನ್ನು ಟಾಯ್ಲೆಟ್, ಮಲಗುವ ಕೋಣೆಯಲ್ಲಿ ಹಾವು ಕಂಡರೆ ಹೆಳೋದೆ ಬೇಡ. ಕಿರುಚಾಡಿಕೊಂಡು ಮನೆಯಿಂದ ದೂರ ಓಡುತ್ತಾರೆ. ಅಷ್ಟರ ಮಟ್ಟಿಗೆ ಹಾವನ್ನು ನೋಡಿ ಭಯ ಬೀಳುವವರು ಇದ್ದಾರೆ. ಆದರೆ ಇಲ್ಲೊಬ್ಬಳು ಮಹಿಳೆಯೆ ಹೊಟ್ಟೆಯಲ್ಲಿಯೇ ಹಾವು ಸೇರಿತ್ತು. ಹಾಗಾದರೆ ಆಕೆಗೆ ಹೇಗಾಗಬೇಡ!.
ರಷ್ಯಾದ ಡಾಗೆಸ್ತಾನ್ನಲ್ಲಿ ವಿಚಿತ್ರ ಪ್ರಕರಣ ಬೆಳಕಿದೆ ಬಂದಿದೆ. ಇಲ್ಲಿನ ಮಹಿಳೆಯೊಬ್ಬಳು ಹೊಟ್ಟೆ ನೋವಿನಿಂದ ಆಸ್ಪತ್ರೆ ಸೇರಿದ್ದಳು. ಆದರೆ ಪ್ರಾರಂಭದಲ್ಲಿ ಮಹಿಳೆಯ ಹೊಟ್ಟೆ ನೋವಿಗೆ ಕಾರಣ ಏನು ಎಂಬುದು ತಿಳಿದು ಬಂದಿಲ್ಲ. ನಂತರ ಪರೀಕ್ಷೆ ಮಾಡಿದ ಬಳಿಕ ಹೊಟ್ಟೆಯಲ್ಲಿ ಹಾವು ಇರುವುದು ಬೆಳಕಿಗೆ ಬಂದಿದೆ.
ನಂತರ ಮಹಿಳೆಯನ್ನು ಪ್ರಜ್ನಾಹೀನಗೊಳಿಸಿದ ಡಾಕ್ಟರ್ ಆಕೆಯ ಬಾಯಿಯ ಮೂಲಕ ಹೊಟ್ಟೆಗೆ ಟ್ಯೂಬ್ ಇಳಿಸಿ 4 ಅಡಿ ಉದ್ದದ ಹಾವನ್ನು ಹೊರತೆಗೆದಿದ್ದಾರೆ.
ಇನ್ನು ಮಹಿಳೆಯ ಬಾಯಿಯಿಂದ ಹಾವನ್ನು ಹೊರತೆಗೆಯುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 4 ಅಡಿ ಉದ್ದವಿರುವ ಹಾಡನ್ನು ನೋಡಿದ ವೈದ್ಯರೇ ಅಚ್ಚರಿಗೊಂಡಿದ್ದಾರೆ.
ಹಾವು ಹೊಟ್ಟೆಯೊಳಕ್ಕೆ ಹೇಗೆ ಸೇರಿತು?
ಮಹಿಳೆ ತನ್ನ ತೋಟದ ಸಮೀಪ ಇರುವ ಮನೆಯೊಂದರಲ್ಲಿ ವಿಶ್ರಾಂತಿ ಪಡೆಯುತ್ತಿದ್ದಳು. ಈ ವೇಳೆ ಆಕೆಗೆ ನಿದ್ದೆ ಬಂದಿದೆ. ನಿದ್ದೆ ಬಂದಾಗ ಮಹಿಳೆಯ ಬಾಯಿ ತೆರೆದಿತ್ತು. ಈ ವೇಳೆ ಹಾವು ಆಕೆಯ ಬಾಯಿಯ ಮೂಲಕ ಹೊಟ್ಟೆಯೊಳಕ್ಕೆ ಸೇರಿಕೊಂಡಿದೆ. ಮರುದಿನ ಆಕೆಗೆ ಜೊರಾಗಿ ಹೊಟ್ಟೆ ನೋವು ಕಾಣಿಸಿಕೊಂಡಿದೆ.
ಕೊನೆಗೂ ವೈದ್ಯರು ಯಾವುದೇ ಅಪಾಯವಿಲ್ಲದೆ ಮಹಿಳೆಯ ಹೊಟ್ಟೆಯಿಂದ ಹಾವನ್ನು ತೆಗೆಯುವುದರ ಮೂಲಕ ಆಕೆಯ ಜೀವ ಉಳಿಸಿದ್ದಾರೆ. ಅದಕ್ಕೆ ಹೇಳೊದು ವೈದ್ಯರು ದೇವರ ಸಮಾನ ಅಂತ.
Comments are closed.