
ಎರಡು ವರ್ಷ ಸಾಲ ಮರುಪಾವತಿ ರಿಲ್ಯಾಕ್ಸ್ ಕೊಡಲು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಚಿಂತನೆ ನಡೆಸಿದ್ದು, ಶೀಘ್ರದಲ್ಲೇ ಸಾಲಗಾರರಿಗೆ ಭರ್ಜರಿ ಗುಡ್ನ್ಯೂಸ್ ನೀಡಲಿದೆ.
ಕಿಲ್ಲರ್ ಕೊರೋನಾ ಓಟಕ್ಕೆ ಬ್ರೇಕ್ ಹಾಕಲು ದೇಶದಾದ್ಯಂತ ಲಾಕ್ಡೌನ್ ಜಾರಿಗೆ ತರಲಾಯಿತು. ಇದರಿಂದ ಹಲವು ಕ್ಷೇತ್ರಗಳಲ್ಲಿ ನಷ್ಟವಾಗಿದೆ. ಈ ಹಿನ್ನೆಲೆಯಲ್ಲಿ ಸುಪ್ರೀಂಕೋರ್ಟ್ ಮುಂದೆ ಸಾಲ ಮರುಪಾವತಿ ಅವಧಿ ವಿಸ್ತರಣೆ ಪ್ರಸ್ತಾಪ ಎದ್ದಿದ್ದು, ಸಾಲ ಮರುಪಾವತಿ ಅವಧಿ ವಿಸ್ತರಿಸಲು ಸಿದ್ಧ ಅಂತಾ RBI ಹಾಗೂ ಕೇಂದ್ರ ಸರ್ಕಾರ ಒಪ್ಪಿಕೊಂಡಿದೆ.
ಕೇಂದ್ರ ಹಾಗೂ ಆರ್ಬಿಐ ಪರ ಕೋರ್ಟ್ ಮುಂದೆ ಹಾಜರಾದ ತುಷಾರ್ ಮೆಹ್ತಾ, ಕೊರೋನಾದಿಂದ ಸಂಕಷ್ಟಕ್ಕೆ ಸಿಲುಕಿರೋ ವಲಯ ಗುರುತಿಸುತ್ತಿದ್ದೇವೆ. ಎಲ್ಲಾ ರೀತಿಯ ಪರಿಹಾರ ದಾರಿಗಳನ್ನು ಕೇಂದ್ರ ಹುಡುಕುತ್ತಿದೆ ಎಂದು ಸುಪ್ರೀಂ ಕೋರ್ಟ್ಗೆ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಮಾಹಿತಿ ನೀಡಿದ್ದಾರೆ.
ಸಾಲಗಳ ಮೇಲಿನ ಬಡ್ಡಿ ಮನ್ನಾ, ಬಡ್ಡಿ ಮೇಲಿನ ಬಡ್ಡಿ ಮನ್ನಾಗೆ ಅರ್ಜಿ ಕೈಗೆತ್ತುಕೊಳ್ಳಲಾಗಿತ್ತು. 6 ತಿಂಗಳವರೆಗೂ ಸಾಲ ಮರುಪಾವತಿಗೆ ಕೇಂದ್ರ ಅವಧಿ ವಿಸ್ತರಿಸಿದ್ದು, ವಿಚಾರಣೆಯನ್ನ ಬುಧವಾರಕ್ಕೆ ಮುಂದೂಡಲಾಗಿದೆ.
Comments are closed.