ಲಂಡನ್: ಮಗುವನ್ನು ಬಿಟ್ಟು ಜೈಲಿನಲ್ಲಿದ್ದ ತನ್ನ ಬಾಯ್ಫ್ರೆಂಡ್ ನೋಡಲು ಹೋಗಿದ್ದ ಮಹಿಳೆ ಇದೀಗ ಶಿಕ್ಷೆಗೆ ಗುರಿಯಾಗುವ ಭೀತಿಯಲ್ಲಿದ್ದು, ನ್ಯಾಯಾಲಯದಲ್ಲಿ ವಿಚಾರಣೆ ಎದುರಿಸುತ್ತಿದ್ದಾಳೆ.
ಕಳೆದ ವರ್ಷ ಡಿಸೆಂಬರ್ 30ರಲ್ಲಿ ಈ ಘಟನೆ ನಡೆದಿತ್ತು. ಜೈಲು ವಾಸಿಯಾಗಿದ್ದ ತನ್ನ ಬಾಯ್ಫ್ರೆಂಡ್ನನ್ನು ನೋಡಲು ಮಗುವನ್ನು ಫ್ಲ್ಯಾಟ್ನಲ್ಲೇ ಬಿಟ್ಟು ಹೋಗಿದ್ದಳು. ಈ ವೇಳೆ ಮಗು ಫ್ಲ್ಯಾಟ್ನಿಂದ ಆಚೆ ಬಂದು ಜನರಿರುವ ಪ್ರದೇಶದಲ್ಲಿ ಏಕಾಂಗಿಯಾಗಿ ತೆವಳುವುದನ್ನು ನೋಡಿ ಹೌಸಿಂಗ್ ಆಫೀಸರ್ ನೋಡಿ ಮಗುವನ್ನು ಎತ್ತಿಕೊಂಡಿದ್ದರು.
ಮಹಿಳೆಯ ಹೆಸರು ಎಬ್ಟಿಸ್ಸಮ್ ಯಾಹ್ಯಾ (29) ಎಂದು ಗುರುತಿಸಲಾಗಿದೆ. ಇದೀಗ ವಿಚಾರಣೆ ಎದುರಿಸುತ್ತಿರುವ ಈಕೆ ನಾನು ಕೇವಲ 15 ನಿಮಿಷ ಮಾತ್ರ ಹೊರಗಡೆ ಹೋಗಿದ್ದೆ ಎಂದು ಸಮರ್ಥಿಸಿಕೊಂಡಿದ್ದಾಳೆ. ಆದರೆ, ಆಕೆ ಬರೋಬ್ಬರಿ ಆರು ಗಂಟೆಗಳ ಕಾಲ ಹೊರಗಿದ್ದಳು. ಪೆಂಟಾನ್ವಿಲ್ಲೆ ಜೈಲಿನಲ್ಲಿರುವ ತನ್ನ ಬಾಯ್ಫ್ರೆಂಡ್ ನೋಡಲು ತೆರಳಿದ್ದಳು.
ಕೊನೆಗೆ ವೆಸ್ಟ್ಮಿನಿಸ್ಟರ್ ಮ್ಯಾಜಿಸ್ಟ್ರೇಟ್ ಕೋರ್ಟ್ನಲ್ಲಿ ಇಂದು ನಡೆದ ವಿಚಾರಣೆ ವೇಳೆ ಎಬ್ಟಿಸ್ಸಮ್ ಯಾಹ್ಯಾ ಮಗುವನ್ನು ನಿರ್ಲಕ್ಷಿಸಿದ್ದಾಗಿ ಒಪ್ಪಿಕೊಂಡಿದ್ದಾಳೆ. ಈ ಬಗ್ಗೆ ವಾದ ಮಂಡಿಸಿದ ವಕೀಲ ಆರೀಫ್ ಅಹ್ಮದ್, ಮಗುವನ್ನು ಎತ್ತಿಕೊಂಡ ಬೆನ್ನಲ್ಲೇ ಹೌಸಿಂಗ್ ಆಫೀಸರ್ ಯಾಹ್ಯಾಗೆ ಕರೆ ಮಾಡಿದ್ದಾರೆ. ಆದರೆ, ಮಹಿಳೆ ಸ್ಪಂದಿಸದಿದ್ದಾಗ, ಸಾಮಾಜಿಕ ಸೇವಾ ಸಂಘಟನೆಗೆ ಕರೆ ಮಾಡಿ ಮಗುವಿನ ಬಗ್ಗೆ ತಿಳಿಸಿದರು ಎಂದಿದ್ದಾರೆ.
ಇದಕ್ಕೂ ಮುನ್ನ ನಾನು ಹೊರ ಹೋಗುವಾಗ ಮಗು ಮಲಗಿತ್ತು. ನಾನು ಕೇವಲ 15 ನಿಮಿಷ ಮಾತ್ರ ಹೊರಗಿದ್ದ ಎಂದು ಯಾಹ್ಯಾ ಹೇಳಿಕೆ ನೀಡಿದ್ದಳು. ಆದರೆ, ಫ್ಲ್ಯಾಟ್ ಸಮೀಪದ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ ಸುಮಾರು 6 ಗಂಟೆಗಳವರೆಗೆ ಯಾಹ್ಯಾ ಮನೆಗೆ ಬರದಿದ್ದು ತಿಳಿಯುತ್ತದೆ.
ಸದ್ಯ ಯಾಹ್ಯಾ ಅವರಿಗೆ ಕೋರ್ಟ್ ಬೇಷರತ್ ಜಾಮೀನು ನೀಡಲಾಗಿದ್ದು, ಸೆಪ್ಟೆಂಬರ್ 15ರಂದು ವೆಸ್ಟ್ಮಿನಿಸ್ಟರ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ಶಿಕ್ಷೆ ವಿಧಿಸಲಿದೆ.
Comments are closed.