ಅಂತರಾಷ್ಟ್ರೀಯ

5 ಪ್ರಮುಖ ಕಂಪನಿಗಳಿಂದ ಬಹಿಷ್ಕಾರ! ಫೇಸ್‌ಬುಕ್‌ಗೆ 52 ಸಾವಿರ ಕೋಟಿ ನಷ್ಠ!

Pinterest LinkedIn Tumblr


ವಾಷಿಂಗ್ಟನ್‌: ಸುಳ್ಳು ಸುದ್ದಿಗಳು ಮತ್ತು ದ್ವೇಷದ ಭಾಷಣಗಳನ್ನು ನಿಯಂತ್ರಿಸುವಲ್ಲಿ ಬೃಹತ್‌ ಸಾಮಾಜಿಕ ಜಾಲತಾಣವಾದ ಫೇಸ್‌ಬುಕ್‌ ವಿಫಲವಾಗಿದೆ ಎನ್ನುವ ಅಸಮಾಧಾನಗಳು ತೀವ್ರಗೊಂಡಿವೆ. ಈ ಮಧ್ಯೆ, ಐದು ಪ್ರಮುಖ ಬ್ರ್ಯಾಂಡ್‌ಗಳು ಫೇಸ್‌ಬುಕ್‌ಗೆ ಜಾಹೀರಾತು ನೀಡುವುದಿಲ್ಲ ಎಂದಿವೆ.

ಯುನಿಲಿವರ್‌, ಹೋಂಡಾ ಅಮೆರಿಕ, ಕೋಕಾ ಕೋಲಾ, ಲೆವಿ ಸ್ಟ್ರಸ್‌, ವೆರಿಜನ್‌ ಕಮ್ಯುನಿಕೇಷನ್‌ ಕಂಪನಿಗಳು ಫೇಸ್‌ಬುಕ್‌ನ ಧೋರಣೆಯನ್ನು ಟೀಕಿಸಿದ್ದು, ಫೇಸ್‌ಬುಕ್‌ಗೆ ಜಾಹೀರಾತು ನೀಡದೇ ಬಹಿಷ್ಕಾರ ಹಾಕಿವೆ. ಕೋಕಾ ಕೋಲಾ ಕಂಪನಿಯು 30 ದಿನ ಜಾಹೀರಾತುಗಳನ್ನು ತಡೆ ಹಿಡಿದಿದೆ. ಇದರಿಂದಾಗಿ ಮಾರ್ಕ್ ಜುಕರ್‌ಬರ್ಗ್‌ರ ಫೇಸ್‌ಬುಕ್‌ ಕಂಪನಿಗೆ 7 ಶತಕೋಟಿ ಡಾಲರ್ ‌(ಸುಮಾರು 52 ಸಾವಿರ ಕೋಟಿ ರೂ.) ಜಾಹೀರಾತು ಆದಾಯಕ್ಕೆ ಹೊಡೆತ ಬೀಳಲಿದೆ. ಕಂಪನಿಯಾ ಮಾರುಕಟ್ಟೆ ಮೌಲ್ಯ ಕುಸಿದಿದ್ದು, ವಿಶ್ವದ ಶ್ರೀಮಂತರ ಪಟ್ಟಿಯಲ್ಲಿ ಜುಕರ್‌ಬರ್ಗ್‌ ಈಗ ನಾಲ್ಕನೇ ಸ್ಥಾನಕ್ಕೆ ಇಳಿದಿದ್ದಾರೆ.

ಅಮೆರಿಕ ಅಧ್ಯಕ್ಷ ಟ್ರಂಪ್‌ ಅವರ ವಿವಾದಾತ್ಮಕ ಪೋಸ್ಟ್‌ಗಳೂ ಸೇರಿದಂತೆ ಕೆಲವು ಮುಖಂಡರ ಪೋಸ್ಟ್‌ಗಳು ನೆಟ್ಟಿಗರ ಆಕ್ರೋಶಕ್ಕೆ ಕಾರಣವಾಗಿವೆ. ಜನರನ್ನು ರೊಚ್ಚಿಗೆಬ್ಬಿಸುವ ಅಥವಾ ವಿಭಜಿಸುವ ಸುಳ್ಳು ಸುದ್ದಿಗಳನ್ನು ನಿಯಂತ್ರಿಸುವಲ್ಲಿ ಫೇಸ್‌ಬುಕ್‌ ಮುಂದಾಗಿಲ್ಲ. ಈ ಸಂಬಂಧ ದೂರುಗಳನ್ನು ನಿರ್ಲಕ್ಷ್ಯ ಮಾಡಿದೆ ಎನ್ನುವ ಆರೋಪಗಳಿವೆ. ಏತನ್ಮಧ್ಯೆ, ಟ್ರಂಪ್‌ ಸೇರಿದಂತೆ ಕೆಲವರ ಪೋಸ್ಟ್‌ಗಳಿಗೆ ಎಚ್ಚರಿಕೆಯ ಸಂಕೇತವನ್ನು ಹಾಕುವ ಕ್ರಮವನ್ನು ಫೇಸ್‌ಬುಕ್‌ ತೆಗೆದುಕೊಂಡಿದೆ. ಈ ಮೂಲಕ ನೆಟ್ಟಿಗರ ಆಕ್ರೋಶ ತಣಿಸಲು ಯತ್ನಿಸಿದೆ.

Comments are closed.