ಮನೋರಂಜನೆ

ಮೊನ್ನೇ ತಾನೆ 3ನೇ ಮದುವೆಯಾದ ನಟಿ ವನಿತಾ ವಿಜಯ್‌ಕುಮಾರ್: ಹೊಸ ಗಂಡನ ವಿರುದ್ಧ ಮೊದಲ ಪತ್ನಿ ದೂರು

Pinterest LinkedIn Tumblr


ನಟಿ ಹಾಗೂ ಬಿಗ್ ಬಾಸ್ ತಮಿಳು ಖ್ಯಾತಿಯ ವನಿತಾ ವಿಜಯ್ ಕುಮಾರ್ ಪೀಟರ್ ಪೌಲ್ ಜೊತೆ ಚೆನ್ನೈನ ಅವರ ಮನೆಯಲ್ಲಿ ಕ್ರಿಶ್ಚಿಯನ್ ಸಂಪ್ರದಾಯದಂತೆ ಜೂನ್ 27ಕ್ಕೆ ಮೂರನೇ ಮದುವೆಯಾಗಿದ್ದಾರೆ. ಈ ಮದುವೆಗೆ ಕೆಲವೇ ಕೆಲವು ಕುಟುಂಬಸ್ಥರು, ಸ್ನೇಹಿತರು ಆಗಮಿಸಿದ್ದರು. ಈಗ ಈ ಮದುವೆಗೆ ಸಮಸ್ಯೆಯುಂಟಾಗಿದೆ.

ಪೀಟರ್ ಪೌಲ್ ಅವರ ಮೊದಲ ಪತ್ನಿ ನೀಡಿದ ದೂರಿನಲ್ಲಿ ಏನಿದೆ?
ಪೀಟರ್ ಪೌಲ್ ಅವರ ಮೊದಲ ಪತ್ನಿ ಎಲಿಜಬೆತ್ ಹೆಲೆನ್ ಅವರು ಚೆನ್ನೈನ ವಡಪಾಲನಿ ಸ್ಟೇಶನ್‌ನಲ್ಲಿ ಪೀಟರ್ ವಿರುದ್ಧ ದೂರು ದಾಖಲಿಸಿದ್ದಾರೆ. ಈ ದೂರಿನಲ್ಲಿ ‘ನಾನು ಮತ್ತು ಪೀಟರ್ ಮದುವೆಯಾಗಿದ್ದೇವೆ, ನಮಗೆ ಇಬ್ಬರು ಮಕ್ಕಳಿದ್ದಾರೆ. ಹಲವು ಕೌಟುಂಬಿಕ ಕಾರಣದಿಂದಾಗಿ ಕಳೆದ ಏಳು ವರ್ಷಗಳಿಂದ ನಾವು ಬೇರೆ ಬೇರೆಯಾಗಿ ಬದುಕುತ್ತಿದ್ದೇವೆ. ಅಧಿಕೃತವಾಗಿ ಎಲಿಜಬೆತ್‌ಗೆ ವಿಚ್ಛೇದನ ನೀಡದೆ ಪೀಟರ್ ಇನ್ನೊಂದು ಮದುವೆಯಾಗಿದ್ದಾರೆ’ ಎಂದು ಎಲಿಜಬೆತ್‌ ಹೇಳಿದ್ದಾರೆ.

ಪಾಲಕರ ಮದುವೆ ದಿನವೇ ಮದುವೆಯಾದ ವನಿತಾ
ಎಲಿಜಬೆತ್ ಹೇಳಿದಂತೆ ಪೀಟರ್ ಮೇಲೆ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ, ಇದರ ಆಧಾರದ ಮೇಲೆ ಇನ್ವೆಸ್ಟಿಗೇಶನ್ ಕೂಡ ನಡೆಯಲಿದೆ. ವನಿತಾ ಮತ್ತು ಪೀಟರ್ ಪೌಲ್ ಮದುವೆ ಸುದ್ದಿ ಹಲವು ದಿನಗಳಿಂದ ಹರಿದಾಡುತ್ತಿದೆ. ಹೀಗಿದ್ದರೂ ಎಲಿಜಬೆತ್ ಯಾಕೆ ಇಲ್ಲಿಯವರೆಗೂ ಮಾತನಾಡದೆ, ಮದುವೆಯಾದಮೇಲೆ ಈ ರೀತಿ ಯಾಕೆ ದೂರು ನೀಡದರು ಎಂಬುದೇ ಚರ್ಚೆಯಲ್ಲಿದೆ. ಪಾಲಕರಾದ ಮಂಜುಳಾ, ವಿಜಯ್‌ಕುಮಾರ್ ಮದುವೆ ದಿನದಂದೇ ವನಿತಾ ಕೂಡ ಮೂರನೇ ಮದುವೆಯಾಗಿದ್ದಾರೆ.

ಪೀಟರ್ ಪೌಲ್ ಯಾರು?
ವನಿತಾ ವಿಜಯ್‌ಕುಮಾರ್ ಸಿನಿಮಾ ಕೆಲಸಗಳಲ್ಲಿ ಬ್ಯುಸಿಯಾಗಿದ್ದಾರೆ. ಟಿವಿ ಕಿರುತೆರೆಯ ಜಡ್ಜ್ ಆಗಿಯೂ ವನಿತಾ ಕೆಲಸ ಮಾಡುತ್ತಿದ್ದಾರೆ. ವನಿತಾಗೆ ಈಗಾಗಲೇ ಎರಡು ಹೆಣ್ಣುಮಕ್ಕಳಿದ್ದಾರೆ. ಸಿನಿಮಾ ಕೆಲಸಗಳಿಗಿಂತ ಜಾಸ್ತಿ ವೈಯಕ್ತಿಕ ವಿಚಾರಕ್ಕೆ ವನಿತಾ ಸುದ್ದಿಯಾಗಿದ್ದೇ ಜಾಸ್ತಿ. ಪೀಟರ್ ಪೌಲ್ ವಿಶ್ಯುವಲ್ ಗ್ರಾಫಿಕ್ ಎಡಿಟರ್. ಇವರು ತಮಿಳು, ಇಂಗ್ಲಿಷ್ ಸೇರಿದಂತೆ ಹಲವು ಭಾಷೆಗಳ ಸಿನಿಮಾಗಳಲ್ಲಿ ಕೆಲಸ ಮಾಡಿದ್ದಾರೆ. ಅಷ್ಟೇ ಅಲ್ಲದೆ ಅವರು ಬ್ಯುಸಿನೆಸ್‌ಮ್ಯಾನ್ ಕೂಡ ಹೌದು.

Comments are closed.