ಅಂತರಾಷ್ಟ್ರೀಯ

ಚಪ್ಪಲಿ ಜೊತೆ ಸೆಕ್ಸ್ ಗಾಗಿ 126 ಜತೆ ಶೂ ಕಳ್ಳತನ ಮಾಡಿದ ಭೂಪ!

Pinterest LinkedIn Tumblr


ಮನುಷ್ಯರ ನಡುವೆ ಸೆಕ್ಸ್ ನಡೆಯೋದು ಸಾಮಾನ್ಯ. ಇನ್ನೂ ಕೆಲವರು ಪ್ರಾಣಿಗಳ ಜೊತೆ ಸಂಭೋಗ ಮಾಡಲು ಹೋಗಿ ಜೈಲು ಸೇರಿದ ಉದಾಹರಣೆಗಳು ಇವೆ. ಆದರೆ, ಇಲ್ಲೋರ್ವ ವಿಚಿತ್ರ ವ್ಯಕ್ತಿ ಇದ್ದಾನೆ. ಈತ ಸೆಕ್ಸ್​ ಮಾಡೋದು ಚಪ್ಪಲ್ಲಿಗಳ ಜೊತೆ. ಇದಕ್ಕಾಗಿಯೇ ಈತ ಬರೋಬ್ಬರಿ 126 ಜೊತೆ ಚಪ್ಪಲಿ ಹಾಗೂ ಶೂಗಳನ್ನು ಕದ್ದಿದ್ದಾನೆ.

ಈತನ ಹೆಸರು ತೀರಾಪಟ್, ಥೈಲೆಂಡ್​ನವನು​. ಈತನ ವಯಸ್ಸು 24 ವರ್ಷ. ಈತನ ಕೆಲಸ ಕಳ್ಳತನ. ಅಲ್ಲೊಂದು ಇಲ್ಲೊಂದು ಸರ​ ಕಳ್ಳತನ, ಹಣ ದೋಚುವಿಕೆಯಲ್ಲಿ ಪಾಲ್ಗೊಳ್ಳುತ್ತಿದ್ದ. ಇದರ ಜೊತೆ ಚಪ್ಪಲಿ ಕಳ್ಳತನದಲ್ಲೂ ಈತ ಪಳಗಿದ್ದ.

ಕಳೆದ ಎರಡು ವರ್ಷಗಳಿಂದ ಅಪಾರ್ಟ್​ಮೆಂಟ್ ಹಾಗೂ ಮನೆಗಳಿಗೆ ತೆರಳಿ ಶೂ ಹಾಗೂ ಚಪ್ಪಲಿಗಳನ್ನು ಕದ್ದು ಬರುತ್ತಿದ್ದ. ಸಾಮಾನ್ಯವಾಗಿ, ಕಳ್ಳರು ಬ್ರ್ಯಾಂಡೆಡ್​ ಶೂಗಳ ಮೇಲೆ ಕಣ್ಣಿಡುತ್ತಾರೆ. ಆದರೆ, ಈತನಿಗೆ ಹಾಗಿಲ್ಲ. ಯಾವ ಚಪ್ಪಲ್ಲಿ ಆದರೂ ಸರಿಯೇ.

ಹೀಗೆ ಕದ್ದ ಚಪ್ಪಲ್ಲಿಗಳನ್ನು ಮನೆಗೆ ತೆಗೆದುಕೊಂಡು ಹೋಗಿ ಹಾಸಿಗೆ​ ಪಕ್ಕದಲ್ಲಿ ಇಡುತ್ತಿದ್ದ. ನಿತ್ಯ, ಒಂದೊಂದೇ ಜೊತೆ ಚಪ್ಪಲಿಗಳನ್ನು ತೆಗೆದುಕೊಂಡು ಅದನ್ನು ಮುದ್ದು ಮಾಡುತ್ತಿದ್ದ. ದೇಹಕ್ಕೆ ಹಾಗೂ ಗುಪ್ತಾಂಗಗಳಿಗೆ ಅದನ್ನು ಸವರುತ್ತಿದ್ದ. ಇದರಿಂದಲೇ ಆತ ಸುಖ ಪಡೆಯುತ್ತಿದ್ದ.

ಇತ್ತೀಚೆಗೆ ಸಿಸಿಟಿವಯಲ್ಲಿ ಈತನ ಕೈಚಳಕ ಪೊಲೀಸರು ಕಂಡಿದ್ದಾರೆ. ಈಗ ಆತ ಪೊಲೀಸರ ಕೈಗೆ ಸಿಕ್ಕಿ ಬಿದ್ದಿದ್ದಾನೆ. ಕಳೆದ ಬಾರಿ ಸರಗಳ್ಳತನದಲ್ಲಿ ಈತನ ಕೈವಾಡವಿತ್ತು.

Comments are closed.