ಅಂತರಾಷ್ಟ್ರೀಯ

ಚೀನಾದಲ್ಲಿ ಕೊರೋನಾ ಮತ್ತೆ ಒಕ್ಕರಿಸಿದೆಯೇ?: ಸತತ 2ನೇ ದಿನ ಸೋಂಕಿತರ ಸಂಖ್ಯೆ ಎರಡಂಕೆಯಲ್ಲಿ

Pinterest LinkedIn Tumblr


ಬೀಜಿಂಗ್ : ಕೊರೋನಾ ಮೊದಲ ಸಲ ಕಾಣಿಸಿಕೊಂಡ ಚೀನಾ ದೇಶದಲ್ಲಿ ಮಂಗಳವಾರ ಯಾವುದೇ ಹೊಸ ಪ್ರಕರಣ ವರದಿಯಾಗಿಲ್ಲ. ಕಳೆದೆರಡು ದಿನ ಎರಡಂಕಿ ಹೊಸ ಕೊರೋನಾ ಸೋಂಕು ಪ್ರಕರಣಗಳು ಕಾಣಿಸಿಕೊಂಡಿದ್ದು ಸೋಂಕಿನ ಎರಡನೇ ಸುತ್ತಿನ ಅಲೆ ಎದ್ದಿರಬಹುದೇ ಎಂಬ ಭೀತಿ ಅಲ್ಲಿನ ಜನರನ್ನು ಕಾಡಿತ್ತು.

ಸದ್ಯ ಪರಿಣಾಮಕಾರಿ ರೀತಿಯಲ್ಲಿ ವೈರಸ್ ನ್ನು ನಿಯಂತ್ರಣಕ್ಕೆ ತಂದಿರುವ ಚೀನಾದಲ್ಲಿ ಎರಡನೇ ಸುತ್ತಿನಲ್ಲಿ ಕೊರೋನಾ ಸೋಂಕು ವಕ್ಕರಿಸಿದರೆ ದೇಶದ ಆರ್ಥಿಕ ಪುನಶ್ಚೇತನಕ್ಕೆ ಅಡ್ಡಗಾಲು ಆಗಬಹುದು ಎಂದು ಅನಿಸಿದ್ದು ಸುಳ್ಳಲ್ಲ.

ನಿನ್ನೆ ಚೀನಾದಲ್ಲಿ 17 ಹೊಸ ಕೇಸುಗಳು ವರದಿಯಾಗಿದ್ದು 5 ಕೇಸುಗಳು ವುಹಾನ್ ನಲ್ಲಿಯೇ ವರದಿಯಾಗಿದೆ. 7 ಕೇಸುಗಳು ಹೊರಗಿನಿಂದ ಬಂದಿದ್ದು ಎಂದು ಅಲ್ಲಿನ ಆರೋಗ್ಯ ಪ್ರಾಧಿಕಾರ ವರದಿ ಮಾಡಿದೆ.

ಆದರೆ ಸತತ 27 ದಿನಗಳಿಂದ ಚೀನಾದಲ್ಲಿ ಸೋಂಕಿನಿಂದ ಮೃತಪಟ್ಟ ಬಗ್ಗೆ ವರದಿಯಾಗಿಲ್ಲ. ಚೀನಾ ದೇಶದ ಅಧಿಕೃತ ಮಾಹಿತಿ ಪ್ರಕಾರ 4,633 ಮಂದಿ ಮೃತಪಟ್ಟು ಒಟ್ಟು 82 ಸಾವಿರದ 919 ಸೋಂಕಿತರಿದ್ದಾರೆ.

Comments are closed.