ಕೋವಿಡ್-19 ವೈರಸ್ ಜಗತ್ತಿನಾದಂತ ಸಾಕಷ್ಟು ಜನರನ್ನು ಬಳಿ ತೆಗೆದುಕೊಂಡಿದೆ. ಮಾತ್ರವಲ್ಲದೆ, ಜನರನ್ನು ಭಯದ ವಾತವರಣಕ್ಕೆ ತಲ್ಲಿಹಾಕಿದೆ. ಇಂತಹ ಸಂರ್ಭದಲ್ಲಿ ಕೊರೋನಾ ಬಗ್ಗೆ ಭೀತಿ ಮತ್ತು ಅಸಹ್ಯ ಭಾವೆನೆಯಿದ್ದರೆ ಆಫ್ರಿಕಾದ ಜನರು ಮಾತ್ರ ಅದನನ್ನು ಹೇರ್ಸ್ಟೈಲ್ ಮಾಡಿಕೊಂಡು ಮಿಂಚುತ್ತಿದ್ದಾರೆ.
ಪೂರ್ವ ಆಫ್ರಿಕಾದಲ್ಲಿ ಸದ್ಯ ಕೊರೋನಾ ಹೇರ್ಸ್ಟೈಲ್ ಟ್ರೆಂಡ್ ಹುಟ್ಟಿಕೊಂಡಿದೆ. ಅಲ್ಲಿನ ವಧುಗಳಿಗೆ ಹೊಸ ಹೇರ್ಸ್ಟೈಲ್ ಇಷ್ಟವಾಗಿದೆಯಂತೆ. ಆದರೆ ಕೊರೋನಾ ಹೇರ್ಸ್ಟೈಲ್ ಮಾಡುವುದರ ಹಿಂದೆ ಒಂದು ನೋವಿನ ಕಥೆ ಕೂಡ ಇದೆ.
ಕೊರೋನಾ ಹೆಚ್ಚಾಗಿ ಎಲ್ಲಾ ದೇಶಗಳಿಗೂ ಕಾಲಿರಿಸಿದೆ. ಅದರಲ್ಲಿ ಪೂರ್ವ ಆಫ್ರಿಕಾವನ್ನು ಬಿಟ್ಟಿಲ್ಲ. ಇಂತಹ ಸಂದರ್ಭದಲ್ಲಿ ಅಲ್ಲಿನ ಜನರಿಗೆ ಕೂದಲು ಕತ್ತರಿಸಲು ಹಣವಿಲ್ಲದ ಕಾರಣ ಕೊರೋನಾ ಹೇರ್ಸ್ಟೈಲ್ನ ಮೊರೆ ಹೋಗುತ್ತಿದ್ದಾರೆ. ಅಮ್ಮಂದಿರು ತಮ್ಮ ಮಕ್ಕಳ ಮುಡಿಯನ್ನು ಕೋವಿಡ್ ಆಕಾರದಲ್ಲಿ ಬಾಚಿ ಕಟ್ಟುತ್ತಿದ್ದಾರೆ. ಸದ್ಯ ಆಫ್ರಿಕಾದಲ್ಲಿ ಕೊರೋನಾ ಹೇರ್ ಸ್ಟೈಲ್ ಟ್ರೆಂಡಿಂಗ್ ಆಗಿದೆ. ಅಲ್ಲಿ ಸೆಲೂನ್ ಶಾಫ್ಗಳಲ್ಲೂ ಈ ಹೇರ್ಸೈಲ್ ಮಾಡುತ್ತಿದ್ದಾರಂತೆ.
Comments are closed.