ಅಂತರಾಷ್ಟ್ರೀಯ

ಕೊರೋನಾ ವೈರಸ್ ಹರಡುವಿಕೆ ಹಿಂದೆ ವುಹಾನ್ ಮಾರುಕಟ್ಟೆ ಪಾತ್ರವಿದೆ: ಅಗತ್ಯ: ವಿಶ್ವ ಆರೋಗ್ಯ ಸಂಸ್ಥೆ

Pinterest LinkedIn Tumblr


ಜಿನಿವಾ: ಕೋವಿಡ್-19 ಹರಡುವಿಕೆ ಹಿಂದೆ ಚೀನಾದ ವುಹಾನ್ ನಗರದ ವನ್ಯಜೀವಿ ಮಾಂಸ ಮಾರುಕಟ್ಟೆಯ ಪಾತ್ರವಿದೆ ಎಂದು ವಿಶ್ವ ಆರೋಗ್ಯ ಸಂಸ್ಧೆ(ಡಬ್ಲ್ಯುಎಚ್ಒ) ಹೇಳಿದೆ.

ತೀವ್ರ ಮಟ್ಟದಲ್ಲಿ ಕೊರೋನಾ ವೈರಸ್ ಹರಡಲು ಮಾರುಕಟ್ಟೆ ಮೂಲವಾಗಿರುವ ಸಾಧ್ಯತೆ ಇದೆ. ಈ ಬಗ್ಗೆ ಹೆಚ್ಚಿನ ಸಂಶೋಧನೆ ಆಗಬೇಕಿದೆ ಎಂದು ಡಬ್ಲ್ಯುಎಚ್ಒದ ಆಹಾರ ಸುರಕ್ಷತಾ ತಜ್ಞ ಪೀಟರ್ ಬೆನ್ ಎಂಬಾರೆಕ್ ಹೇಳಿದ್ದಾರೆ.

ಕೊರೋನಾ ವೈರಸ್ ಹರಡುವಿಕೆ ತಡೆಯುವ ಉದ್ದೇಶದಿಂದ ಚೀನಾ ಜನವರಿಯಲ್ಲೇ ಈ ಮಾರುಕಟ್ಟೆಯನ್ನು ಬಂದ್ ಮಾಡಿತ್ತು. ವೈರಸ್ ಹರಡುವಿಕೆ ಹಿಂದೆ ಮಾರುಕಟ್ಟೆಯ ಪಾತ್ರ ಇರುವುದು ಸ್ಪಷ್ಟ. ಆದರೆ ಯಾವ ರೀತಿಯ ಪಾತ್ರ ಎಂಬುದನ್ನು ತಿಳಿಯುವುದಕ್ಕೆ ಹೆಚ್ಚಿನ ಸಂಶೋಧನೆಯ ಅಗತ್ಯವಿದೆ ಎಂದರು.

Comments are closed.