ಮನೋರಂಜನೆ

ಚಕ್ರಾಸನ ಮಾಡುವುದು ತೋರಿಸಿದ ಬಾಲಿವುಡ್ ನಟಿ ಮಲ್ಲಿಕಾ ಶೆರಾವತ್

Pinterest LinkedIn Tumblr


ಬಾಲಿವುಡ್ ಸಿನಿಮಾಗಳ ಜೊತೆಗೆ ಅಂತಾರಾಷ್ಟ್ರೀಯ ಚಿತ್ರಗಳಲ್ಲೂ ನಟಿಸಿ ಹೆಸರು ಮಾಡಿದ ಬೆರಳೆಣಿಕೆ ತಾರೆಗಳಲ್ಲಿ ನಟಿ ಮಲ್ಲಿಕಾ ಶೆರಾವತ್ ಕೂಡಾ ಒಬ್ಬರು. ಕಳೆದ ವರ್ಷ ಹಾರರ್ ಕಾಮಿಡಿ ಹಿನ್ನೆಲೆಯಲ್ಲಿ ಬಂದ ‘ಬೂ ಸಬ್ಕಿ ಫತೇಗಿ’ ಎಂಬ ವೆಬ್ ಸೀರೀಸ್ ನಲ್ಲಿ ಹಸೀನಾ ಪಾತ್ರದ ಮೂಲಕ ಗಮನಸೆಳೆದಿದ್ದಾರೆ.

ಲಾಕ್‍ಡೌನ್ ಕಾರಣದಿಂದ ಮನೆಯಲ್ಲೇ ಇರುವ ದಶಾವತಾರ ಬೆಡಗಿ ಮಲ್ಲಿಕಾ ಶೆರಾವತ್ ಯೋಗಾಸನ ಮಾಡುತ್ತಾ ಸಾಮಾಜಿಕ ಮಾಧ್ಯಮಗಳಲ್ಲಿ ಸದ್ದು ಮಾಡಿದ್ದಾರೆ.

ಇದೀಗ ಚಕ್ಸಾಸನ ಎಂಬ ಯೋಗಾಸನ ಮಾಡಿ ಆ ವಿಡಿಯೋವನ್ನು ಅನ್ನ ಅಧಿಕೃತ ಇನ್‍ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿದ್ದಾರೆ. ಈ ಬಗ್ಗೆ ಮಾಹಿತಿಯನ್ನೂ ನೀಡಿದ್ದಾರೆ. ಚಕ್ರಾಸನ ಮಾಡುವುದರಿಂದ ಏನು ಲಾಭ ಎಂದೆಲ್ಲಾ ತಿಳಿಸಿದ್ದಾರೆ.

“ಇಂದು ನಾನು ಆರಂಭಿಸಿದ ಈ ಭಂಗಿಯನ್ನು ಚಕ್ರಾಸನ ಎಂದು ಕರೆಯುತ್ತಾರೆ. ಪ್ರತಿದಿನ ಬೆಳಗ್ಗೆ ಈ ರೀತಿ ಚಕ್ರಾಸನ ಮಾಡುವುದರಿಂದ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಈ ಆಸನದಿಂದ ದಿನವೆಲ್ಲಾ ನೀವು ಉತ್ಸಾಹ ಹಾಗೂ ಇರಲು ಶಕ್ತಿ ನೀಡುತ್ತದೆ” ಎಂದಿದ್ದಾರೆ.

ಅದೇ ರೀತಿ ಕೊರೊನಾ ವೈರಸ್ ನಮ್ಮ ಬಳಿ ಸುಳಿಯಬಾರದು ಎಂದರೆ ಕೆಲವೊಂದು ನಿಯಮಗಳನ್ನು ಪಾಲಿಸಬೇಕು ಎಂದಿದ್ದಾರೆ ಮಲ್ಲಿಕಾ. ನಿತ್ಯ ಕೈಗಳನ್ನು ಸ್ವಚ್ಛಗೊಳಿಸಿಕೊಳ್ಳುವುದು. ಮನೆಯಲ್ಲೇ ಇದ್ದು ಕುಟುಂಬ ಸದಸ್ಯರ ಜೊತೆ ಕ್ಷೇಮವಾಗಿ ಇರಿ ಎಂದು ಸೂಚಿಸಿದ್ದಾರೆ ಮರ್ಡರ್ ಬೆಡಗಿ ಮಲ್ಲಿಕಾ ಶೆರಾವತ್.

Comments are closed.