ನ್ಯೂಯಾರ್ಕ್: ಇಂಡೋ-ಅಮೆರಿಕನ್ ತಂದೆ ಹಾಗೂ ಮಗಳು(ಇಬ್ಬರೂ ನ್ಯೂಜೆರ್ಸಿ ವೈದ್ಯರು) ಕೊರೊನಾ ವೈರಸ್‌ನಿಂದಾಗಿ ಮೃತಪಟ್ಟಿದ್ದಾರೆ. ಕೋವಿಡ್-19 ಕಠಿಣ ಸನ್ನಿವೇಶದಲ್ಲಿ ಇತರರ ಜೀವ ಉಳಿಸಲು ಹೋಗಿ ತಮ್ಮ ಪ್ರಾಣವನ್ನು ಕಳೆದುಕೊಂಡ ತಂದೆ-ಮಗಳ ಸಾವಿನ ಸುದ್ದಿ ಅತ್ಯಂತ ದುಖಃ ತಂದಿದೆ ಎಂದು ಅಲ್ಲಿನ ಗವರ್ನರ್ ಫಿಲ್ ಮುರ್ಫಿ ತೀವ್ರ ಸಂತಾಪ ಸೂಚಿಸಿದ್ದಾರೆ.
ಸತ್ಯಂದರ್ ದೇವ್ ಖನ್ನಾ(78) ಮೃತ ಪಟ್ಟ ಭಾರತೀಯ ಮೂಲದ ವೈದ್ಯರಾಗಿದ್ದು, ನ್ಯೂಜೆರ್ಸಿ ವಿವಿಧ ಆಸ್ಪತ್ರೆಗಳಲ್ಲಿ ಸಿಬ್ಬಂದಿ ಹಾಗೂ ಶಸ್ತ್ರ ಚಿಕಿತ್ಸೆಯ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದ್ದಾರೆ.
ಪ್ರಿಯಾ ಖನ್ನಾ (43) ಮೃತಪಟ್ಟ ಮತ್ತೊರ್ವ ವೈದ್ಯೆಯಾಗಿದ್ದು, ಈಕೆ ರೆಸಿಡೆನ್ಸ್ ಯೂನಿಯನ್ ಆಸ್ಪತ್ರೆಯಲ್ಲಿ ಮುಖ್ಯಸ್ಥರಾಗಿದ್ದರು. ಇದೀಗ ಅವರು ಆರ್‌ಡಬ್ಲ್ಯುಜೆ ಬಾರ್ನಬಾಸ್ ಹೆಲ್ತ್‌ನ ಭಾಗವಾಗಿದ್ದರು.
ಡಾ. ಸತ್ಯೇಂದರ್ ದೇವ್ ಖನ್ನಾ ಹಾಗೂ ಡಾ. ಪ್ರಿಯಾ ಖನ್ನಾ ಅವರು ತಂದೆ ಮಗಳಾಗಿದ್ದು, ಇಬ್ಬರೂ ವೃತ್ತಿಯಲ್ಲಿ ವೈದ್ಯರಾಗಿದ್ದರು. ಕೊರೊನಾ ವೈರಸ್ ಕಠಿಣ ಸಮಯದಲ್ಲಿ ಇತರರ ಜೀವ ಉಳಿಸಲು ಸಾಕಷ್ಟು ಪ್ರಯತ್ನ ನಡೆಸಿದ್ದರು. ಇವರ ಕುಟುಂಬ ಇತರರ ಆರೋಗ್ಯ ಹಾಗೂ ವೈದ್ಯಕೀಯದ ಕಡೆಗೆ ಹೆಚ್ಚು ಗಮನಹರಿಸುತ್ತಿತ್ತು. ಇವರಿಬ್ಬರ ಸಾವಿನ ಬಗ್ಗೆ ಪದಗಳಲ್ಲಿ ಸಂತಾಪ ಸೂಚಿಸಲು ಸಾಧ್ಯವಾಗುವುದಿಲ್ಲ,” ಎಂದು ನ್ಯೂಜೆರ್ಸಿ ಗವರ್ನರ್ ಫಿಲ್ ಮುರ್ಫಿ ಟ್ವೀಟ್ ಮಾಡಿದ್ದಾರೆ.
ಡಾ. ಸತ್ಯೇಂದರ್ ದೇವ್ ಖನ್ನಾ ಅವರು ಮಾಸ್ ಮೆಡಿಕಲ್ ಸೆಂಟರ್‌ನಲ್ಲಿ ಕೊನೆಯುಸಿರೆಳೆದರು. ಕಳೆದ 35 ವರ್ಷಗಳಿಂದ ಇದೇ ಆಸ್ಪತ್ರೆಯಲ್ಲಿ ಇವರು ಸೇವೆ ಸಲ್ಲಿಸುತ್ತಿದ್ದರು. ಇನ್ನು, ಪುತ್ರಿ ಪ್ರಿಯಾ ಖನ್ನಾ ಅವರುನ ನ್ಯೂಜೆರ್ಸಿಯಲ್ಲಿ ಮೆಡಿಕಲ್ ತರಬೇತಿ ಪೂರ್ಣಗೊಳಿಸಿದ್ದರು. ಇವರು ಕೂಡ ತಂದೆ ಕೆಲಸ ನಿರ್ವಹಿಸುತ್ತಿದ್ದ ಮಾಸ್ ಮೆಡಿಕಲ್ ಸೆಂಟರ್‌ನಲ್ಲಿಯೇ ಕಾರ್ಯ ನಿರ್ವಹಿಸುತ್ತಿದ್ದರು.
Comments are closed.